ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bagepally News: ಶ್ರದ್ಧಾಭಕ್ತಿಯಿಂದ ನಡೆದ ಐತಿಹಾಸಿಕ ಮಿಟ್ಟೇಮರಿ ಪ್ರಸಿದ್ಧ ಗರುಡಾದ್ರಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ದೇವಾಲಯದಲ್ಲಿ ಬೆಳಗ್ಗೆ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಹೋಮ ಹವನಗಳು ಹಾಗೂ ದೇವರಿಗೆ ವಿಶೇಷ ಪೂಜಾ ಕಾರ್ಯಗಳು ನಡೆದವು. ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಗಂಧೋತ್ಸವ ನಡೆಸಲಾಯಿತು. ಉತ್ಸವದಲ್ಲಿ ದೇವರ ಮೂರ್ತಿಗಳನ್ನು ಕರೆ ತಂದು ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು. ಶಾಸಕ ಎಸ್.ಎನ್ ಸುಬ್ಬಾರೆಡ್ಡಿ, ತಹಸೀಲ್ದಾರ್ ಮನಿಷಾ ಮಹೇಶ್ ಎನ್.ಪತ್ರಿ ಹೋಮ  ಹೋಮಗಳನ್ನು ಮಾಡಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಪ್ರಸಿದ್ಧ ಗರುಡಾದ್ರಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ತಾಲೂಕಿನ ಮಿಟ್ಟೇಮರಿ ಗ್ರಾಮದ ಐತಿಹಾಸಿಕವಾಗಿ ಪ್ರಸಿದ್ಧ ಗರುಡಾದ್ರಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ಅದ್ಧೂರಿಯಾಗಿ ನೆರವೇರಿತು. -

Ashok Nayak
Ashok Nayak Mar 4, 2026 10:56 PM

ಬಾಗೇಪಲ್ಲಿ: ತಾಲೂಕಿನ ಮಿಟ್ಟೇಮರಿ ಗ್ರಾಮದ ಐತಿಹಾಸಿಕವಾಗಿ ಪ್ರಸಿದ್ಧ ಗರುಡಾದ್ರಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ಅದ್ಧೂರಿಯಾಗಿ ನೆರವೇರಿತು.

ದೇವಾಲಯದಲ್ಲಿ ಬೆಳಗ್ಗೆ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಹೋಮ ಹವನಗಳು ಹಾಗೂ ದೇವರಿಗೆ ವಿಶೇಷ ಪೂಜಾ ಕಾರ್ಯಗಳು ನಡೆದವು. ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಗಂಧೋತ್ಸವ ನಡೆಸಲಾಯಿತು. ಉತ್ಸವದಲ್ಲಿ ದೇವರ ಮೂರ್ತಿಗಳನ್ನು ಕರೆ ತಂದು ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು.

ಶಾಸಕ ಎಸ್.ಎನ್ ಸುಬ್ಬಾರೆಡ್ಡಿ( MLA SN Subbareddy), ತಹಸೀಲ್ದಾರ್ ಮನಿಷಾ ಮಹೇಶ್ ಎನ್.ಪತ್ರಿ ಹೋಮ ಹೋಮಗಳನ್ನು ಮಾಡಿ ರಥೋ ತ್ಸವಕ್ಕೆ ಚಾಲನೆ ನೀಡಿದರು.

ನಮ್ಮ ನಾಡು ಸುಭೀಕ್ಷವಾಗಿರಲಿ: ಇದೆ ವೇಳೆ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಈ ಸಂದರ್ಭ ದಲ್ಲಿ ಭಾಗವಹಿಸಿದ್ದು, ನಂತರ ಮಾಧ್ಯಮದವ ರೊಂದಿಗೆ ಮಾತನಾಡಿ ಅವರು, ಶ್ರೀ ಗರುಡಾದ್ರಿ ಲಕ್ಷ್ಮಿನರಸಿಂಹಸ್ವಾಮಿಯವರ ಅನುಗ್ರಹ ದಿಂದ ನಮ್ಮ ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಿ, ರೈತಾಪಿ ವರ್ಗವು ಸಂತೋಷದಿಂದಿರಬೇಕು ಹಾಗೂ ಸುಭಿಕ್ಷವಾಗಿ ಇರಬೇಕೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಇದನ್ನೂ ಓದಿ: Bagepally News: ಸರ್ಕಾರಿ ಘಂಟಂವಾರಿಪಲ್ಲಿ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನೆ ಕಾರ್ಯಕ್ರಮ

ಗರುಡಾದ್ರಿ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವದ ಸಮಯಕ್ಕೆ ನೆರೆಯ ಆಂಧ್ರ ಪ್ರದೇಶದ ಕದಿರಿಯಿಂದ ಗರುಡ ಪಕ್ಷಿ ಬಂದು ಸೂಚನೆ ಕೊಟ್ಟ ನಂತರವಷ್ಟೇ ಇಲ್ಲಿ ರಥಕ್ಕೆ ಚಾಲನೆ ನೀಡಲಾಗುತ್ತಿತ್ತು.  ಅದರಂತೆ ಈ ವರ್ಷವೂ ಗರುಡ ಪಕ್ಷಿ ಬಂದು ರಥದ ಪ್ರದಕ್ಷಿಣೆ ಹಾಕಿದ ನಂತರ ರಥವನ್ನು ಎಳೆಯಲಾಯಿತು.

ಭಕ್ತರು ಆಕಾಶದತ್ತ ಕಣ್ಣು ಹಾಯಿಸಿ ಜಯಘೋಷದೊಂದಿಗೆ ಗೋವಿಂದ., ಗೋವಿಂದ., ಎಂಬ ನಾಮ ಸ್ಮರಣೆ ಮಾಡಿದರು.ತದನಂತರ ಮಿಟ್ಟೇಮರಿ ರಾಜ ಬೀದಿಗಳಲ್ಲಿ ಸಂಚರಿಸ ಲಾಗುತ್ತಿತ್ತು.

cbpm1sr

ರಥೋತ್ಸವದಲ್ಲಿ ವ್ಯಾಪಾರ ವಹಿವಾಟು ಜೋರು

ರಥೋತ್ಸವದ ಸ್ಥಳದಲ್ಲಿ ವಿವಿಧ ಬಗೆಯ ಮಕ್ಕಳ ಆಟಿಕೆಗಳು, ತುತ್ತೂರಿ, ಬಗೆಬಗೆಯ ಬೆಲೂನ್ ಮತ್ತಿತರ ಆಟದ ಸಾಮಗ್ರಿಗಳ ಅಂಗಡಿ ಮಳಿಗೆಗಳು ತೆರಯಲಾಗಿತ್ತು. ಈ ವೇಳೆ, ವ್ಯಾಪಾರ ವಹಿವಾಟು ಜೋರಾಗಿತ್ತು. ಇದರ ಜೊತೆಗೆ ಬುರುಗು,ಬೂಂದಿ,ಬತ್ತಾಸು,ಕಾಶಿ ದಾರಗಳು,ಸರಗಳು ಸೇರಿದಂತೆ ಹಲವಾರು ಸಾಮಗ್ರಿಗಳ ಮಳಿಗೆಗಳನ್ನು ತೆರೆಯಲಾಗಿತ್ತು.
ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ  ಭಕ್ತರು ಆಗಮಿಸಿ ಈ ವರ್ಷ ರಥೋತ್ಸವಕ್ಕೆ ಹಾಜರಿದ್ದರು. 20ಕ್ಕೂ ಹೆಚ್ಚು ವಿವಿಧ ಕುಟುಂಬದವರು ಅರವಂಟಿಗೆ ಸ್ಥಾಪಿಸಿ ಭಕ್ತರಿಗೆ ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ಹಂಚುತ್ತಿರುವ ದೃಶ್ಯ ಕಂಡುಬಂತು. ಇನ್ನೂ ಅನೇಕರ ಮನೆಗಳಲ್ಲಿ ಆಹ್ವಾನಿತರಿಗೆ ಹಬ್ಬದೂಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.

ವಿಜಯ್ ನಾರಸಿಂಹ ಅರ್ಚಕರು ಹೋಮ ಹವನಗಳನ್ನು ನಡೆಸಿಕೊಟ್ಟರು. ಯಾವುದೇ ಅಹಿತಕರ ಟನೆ ನಡೆಯದಂತೆ ಬಾಗೇಪಲ್ಲಿ ತಾಲ್ಲೂಕು ಆರಕ್ಷಕ ವೃತ್ತ ನಿರೀಕ್ಷಕ ಅಜಯ್ ಸಾರಥಿ ನೇತೃತ್ವದಲ್ಲಿ  ಪೋಲಿಸರ ವ್ಯಾಪಕ ಬಂದೋಬಸ್ತನ್ನು ಏರ್ಪಡಿಸಿದ್ದರು.

cbpm1mla subbareddy

ಈ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹರಿನಾಥರೆಡ್ಡಿ ವತಿಯಿಂದ ದೇವರ ಪ್ರಸಾದ ವಿನಿಯೋಗ, ಬ್ರಾಹ್ಮಣರಿಗೆ ಅನ್ನ ಸಂತರ್ಪನೆ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ, ದೇವಸ್ಥಾನ ಸುತ್ತಮುತ್ತಲಿನ ಹಾಗೂ ರಾಜ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ,ಹಾಗೂ ಜಾತ್ರೆಗೆ ಆಗಮಿಸಿದ ಅಂಗಡಿ ಮಳಿಗೆಗಳಿಗೆ ಸುಂಕ ವಿನಾಯಿತಿ ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಲ್ಲಿಸಲಾಗಿತ್ತು.

ಗಗನ್ ಪೌಂಡೆಷನ್ ಅಧ್ಯಕ್ಷರಾದ ಗಗನ್, ವಿನಯ್, ನಾಗರಾಜು, ವೆಂಕಟೇಶ್ ಅವರ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮುಖಂಡರಾದ ಜೆ.ಪಿ.ಚಂದ್ರಶೇಖರರೆಡ್ಡಿ, ರಘುವೀರಶರ್ಮಾ, ಎಂ.ಬಿ. ಲಕ್ಷ್ಮೀನರಸಿಂಹಯ್ಯ, ವಿಜಯಗೋಪಾಲರೆಡ್ಡಿ, ಸುದರ್ಶನ್ ನಾಯ್ಡು, ಬಾಬುರೆಡ್ಡಿ, ಶ್ರೀನಿವಾಸಲು, ಜಗನ್ನಾಥ, ಅಮರನಾರಾಯಣ, ಅಜಯ್, ಈಶ್ವರಪ್ಪ, ಆನಂದರೆಡ್ಡಿ, ಮಂಜುನಾಥ, ಮಾರಪರೆಡ್ಡಿ, ಶ್ರೀನಾಥ್,  ಹಾಗೂ ಹಲವಾರು ಮುಖಂಡರು ಭಾಗವಹಿಸಿ ದ್ದರು.