ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸತ್ಯದ ಅನುಭವ ಬೋಧಿಸಿರುವ ಸಂತರ ಮಾರ್ಗ ಸಾಧನೆಗೆ ಸೋಪಾನ: ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್

ಕೈವಾರ ತಾತಯ್ಯನವರು ಸತ್ಯಶೋಧಕರು. ಮಾನವ ಜನ್ಮದ ಶ್ರೇಷ್ಠತೆ ಏನು ಎಂಬುದನ್ನು ಬಹಳವಾಗಿ ಅರಿತು ಯೋಗ ಸಾಧಕರಾಗಿ ಯೋಗಿಗಳಾದವರು. “ಜಂಟಗಾ ವಚ್ಚಿಂದಿ ಜಾಲಿ ಮಾಲಿಮಿ ಜೇಸಿ, ಒಂಟಿ ಜೇಸಿ ಪೋವುನು ತುಂಟ ಬೊಂದಿ,ನಮ್ಮರಾನಿ ಬೊಂದಿ ನಮ್ಮಿವುನ್ನಾ ರಯಾ..” ಶರೀರ ಮತ್ತು ಆತ್ಮ (ಜೀವಾತ್ಮ) ಜೊತೆಗೂಡಿ ಒಟ್ಟಾಗಿ ಭೂಮಿಗೆ ಬರುತ್ತದೆ.

ಸತ್ಯದ ಅನುಭವ ಬೋಧಿಸಿರುವ ಸಂತರ ಮಾರ್ಗ ಸಾಧನೆಗೆ ಸೋಪಾನ

-

Ashok Nayak
Ashok Nayak Mar 15, 2026 11:07 PM

ಚಿಕ್ಕಬಳ್ಳಾಪುರ: ಸಂತರ ಅಲೌಕಿಕವಾದ ಸಾಧನೆಯ ಅನುಭವ ಸತ್ಯವಾದುದು. ಸತ್ಯದ ಅನುಭವ ಬೋಧಿಸಿರುವ ಸಂತರ ಮಾರ್ಗವನ್ನು ಸಾಮಾನ್ಯರಾದ ನಾವುಗಳು ಅನುಸರಿಸ ಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಆತ್ಮಬೋಧಾಮೃತ ಪ್ರವಚನ ನೀಡುತ್ತಾ ಮಾತನಾಡಿದರು.

ಕೈವಾರ ತಾತಯ್ಯನವರು ಸತ್ಯಶೋಧಕರು. ಮಾನವ ಜನ್ಮದ ಶ್ರೇಷ್ಠತೆ ಏನು ಎಂಬುದನ್ನು ಬಹಳವಾಗಿ ಅರಿತು ಯೋಗ ಸಾಧಕರಾಗಿ ಯೋಗಿಗಳಾದವರು. “ಜಂಟಗಾ ವಚ್ಚಿಂದಿ ಜಾಲಿ ಮಾಲಿಮಿ ಜೇಸಿ, ಒಂಟಿ ಜೇಸಿ ಪೋವುನು ತುಂಟ ಬೊಂದಿ,ನಮ್ಮರಾನಿ ಬೊಂದಿ ನಮ್ಮಿವುನ್ನಾರಯಾ..” ಶರೀರ ಮತ್ತು ಆತ್ಮ (ಜೀವಾತ್ಮ) ಜೊತೆಗೂಡಿ ಒಟ್ಟಾಗಿ ಭೂಮಿಗೆ ಬರುತ್ತದೆ. ನಂತರ ಅನುಕಂಪ, ಪ್ರೀತಿ, ವಾತ್ಸಲ್ಯ, ವಿಶ್ವಾಸ, ಅಭಿಮಾನವನ್ನು ತೋರಿಸಿ, ಕೊನೆಗೆ ಜೀವಾತ್ಮನನ್ನು ಒಂಟಿಯನ್ನಾಗಿ ಮಾಡಿ ಹೋಗುವುದು ಈ ತುಂಟ ಶರೀರ. ಈ ನಂಬಿಕೆಯಿಲ್ಲದ ಶರೀರವನ್ನು ಜನರು ನಂಬಿರುವಿರಲ್ಲಾ ಇದಕ್ಕೆ ಏನೆಂದು ಹೇಳಲಿ ಎಂದಿದ್ದಾರೆ ತಾತಯ್ಯನವರು ಎಂದರು.

ಇದನ್ನೂ ಓದಿ: Chikkaballapura Bandh: ಹೆಚ್.ಎನ್.ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕಾಗಿ ಒತ್ತಾಯಿಸಿ ಕರೆ ನೀಡಿದ್ದ ಚಿಕ್ಕಬಳ್ಳಾಪುರ ಬಂದ್ ಸಂಪೂರ್ಣ ಯಶಸ್ವಿ

ನಶ್ವರ ಶರೀರವನ್ನು ಕುರಿತು ಪ್ರಸ್ತಾಪಿಸಿ, ದೇಹಾಭಿಮಾನ ಹೊಂದಬಾರದು ಎಂದು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಹುಟ್ಟುವಾಗ ಜೊತೆಯಾಗಿ ಬಂದಿರುವ ಶರೀರ ಸಾಯುವಾಗ ಜೀವಾತ್ಮನ ಜೊತೆಯಾಗಿ ಹೋಗುವುದಿಲ್ಲ, ಆದರೂ ಬದುಕಿರುವಷ್ಟು ಕಾಲ ದೇಹದ ಬಗ್ಗೆ ವ್ಯಾಮೋಹವಿರುತ್ತದೆ. ಜೀವಾತ್ಮವು ಹುಟ್ಟುಸಾವಿನ ಚಕ್ರದಲ್ಲಿ ಸುತ್ತುತ್ತಿರುತ್ತದೆ. ಆದರೆ ಶರೀರವು ಒಮ್ಮೆ ಸತ್ತಿತೆಂದರೆ ಅದರ ಋಣ ಮುಗಿಯಿತೆಂದೆ ಅರ್ಥ.

ಅದು ಮತ್ತೆ ಬರುವುದಿಲ್ಲ. ಶರೀರವು ಅಶಾಶ್ವತ. ಆಟವಾಡುವ ಮಕ್ಕಳು ಆಟ ಮುಗಿದ ನಂತರ ಎಲ್ಲವನ್ನು ಕೆಡವಿ ಹೋಗುವಂತೆ, ಶರೀರವು ಸಕಲ ಉಪಚಾರವನ್ನು ಸ್ವೀಕರಿಸಿ, ಕೊನೆಗೆ ಮರೆಯಾಗುತ್ತದೆ. ಶರೀರವನ್ನು ಕಡೆಗಣಿಸಬೇಕೆಂಬುದು ಈ ಬೋಧನೆಯ ಉದ್ದೇಶ ವಲ್ಲ, ಶಾಶ್ವತವಾದ ಸತ್ಯವನ್ನು ಅರಿತುಕೊಂಡು ಸಾರ್ಥಕವಾದ ಬದುಕನ್ನು ನಡೆಸ ಬೇಕೆಂಬುದೇ ಈ ತತ್ವದ ಆಶಯ. ತಾತಯ್ಯನವರು ತಮ್ಮ ಜೀವಿತಾವಧಿಯಲ್ಲಿ ಪರಬ್ರಹ್ಮ ತತ್ವದ ಬಗ್ಗೆ ಹಲವಾರು ಬೋಧನೆಗಳನ್ನು ವಿವರವಾಗಿ ತಿಳಿಸಿದ್ದಾರೆ ಎಂದರು.

cbpm4a

ಕಾರ್ಯಕ್ರಮಕ್ಕೂ ಮೊದಲು ಸದ್ಗುರು ತಾತಯ್ಯನವರ ಸನ್ನಿಧಿಯಲ್ಲಿ ಶ್ರೀರಾಮಭವತಾರಕ ಮಂತ್ರ ಪಠಣೆಯನ್ನು ಸಾಮೂಹಿಕವಾಗಿ ನೆರವೇರಿಸಲಾಯಿತು.

ಮಹಾಮಂಗಳಾರತಿಯನ್ನು ಬೆಳಗಲಾಯಿತು. ಭಕ್ತರಿಗೆ ತೀರ್ಥಪ್ರಸಾದವನ್ನು ವಿತರಿಸ ಲಾಯಿತು. ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ಪ್ರಸ್ತಾವಿಕವಾಗಿ ಮಾತನಾಡಿದರು.

ಶ್ರೀಯೋಗಿನಾರೇಯಣ ಟ್ರಸ್ಟ್ನ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್, ಸದಸ್ಯರುಗಳಾದ ಕೆ.ನರಸಿಂಹಪ್ಪ, ಸುರೇಶ್, ತ್ಯಾಗರಾಜ್ ಹಾಗೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.