ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MLA Pradeep Eshwar: ಶಾಸಕ ಪ್ರದೀಪ್ ಈಶ್ವರ್ ಸಚಿವರಾಗಬೇಕು ಎಂಬುದು ಕ್ಷೇತ್ರದ ಜನತೆಯ ಆಶಯವಾಗಿದೆ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್

ಹಳ್ಳಿಗಳ ಬೆಳವಣಿಗೆಯಲ್ಲಿಯೇ ದೇಶದ ಅಭಿವೃದ್ದಿಯ ಗುಟ್ಟು ಅಡಗಿದೆ ಎಂಬ ಮಹಾತ್ಮಾ ಗಾಂಧೀಜಿ ಅವರ ಗ್ರಾಮಸ್ವರಾಜ್ಯ ತತ್ವದಲ್ಲಿ ನಂಬಿಕೆ ಇಟ್ಟಿರುವ ನಮ್ಮ ಶಾಸಕ ಪ್ರದೀಪ್ ಈಶ್ವರ್ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕರಾಗಿದ್ದಾರೆ. ಕ್ಷೇತ್ರದ ಪ್ರತಿಹಳ್ಳಿಯ ರಸ್ತೆಗಳು ಚೆನ್ನಾಗಿರಬೇಕು ಎಂದು ಭಾವಿಸಿ ಎಲ್ಲೆಲ್ಲಿ ಸಾಧ್ಯವೋ ಎಲ್ಲೆಲ್ಲಾ ಸಿ ಸಿ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ. ಇದಕ್ಕೆ ಇಂದಿನ  ಶಂಕುಸ್ಥಾಪನೆಯೇ ಸಾಕ್ಷಿ ಎಂದರು

ಶಾಸಕ ಪ್ರದೀಪ್ ಈಶ್ವರ್ ಸಚಿವರಾಗಬೇಕು ಎಂಬುದು ಕ್ಷೇತ್ರದ ಜನತೆಯ ಆಶಯ

-

Profile
Ashok Nayak May 21, 2026 8:39 PM

ಚಿಕ್ಕಬಳ್ಳಾಪುರ: ಜನಪ್ರಿಯ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಕಾಂಗ್ರೆಸ್ ಸರಕಾರದ ಅವಧಿಯಲ್ಲಿಯೇ ಸಚಿವರಾಗಬೇಕು ಎಂಬುದು ಕಾಂಗ್ರೆಸ್ ಮುಖಂಡರು ಮತ್ತು ಕ್ಷೇತ್ರದ ಲಕ್ಷಾಂತರ ಜನರ ಆಶಯವಾಗಿದೆ. ಅದು ಆಗಿಯೇ ತಿರಲಿದೆ ಎಂದು ಮಂಡಿಕಲ್ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್ ತಿಳಿಸಿದರು.

ತಾಲೂಕಿನ ಮಂಡಿಕಲ್ ಹೋಬಳಿ ರಾಮಪಟ್ಟಣದಿಂದ ಸಿದ್ದಗಾನಹಳ್ಳಿವರೆಗೆ 15 ಅಗಲ 2 ಕಿ.ಮಿ ಉದ್ದದ ಸಿಸಿರಸ್ತೆ ನಿರ್ಮಾಣದ ನೂತನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಹಳ್ಳಿಗಳ ಬೆಳವಣಿಗೆಯಲ್ಲಿಯೇ ದೇಶದ ಅಭಿವೃದ್ದಿಯ ಗುಟ್ಟು ಅಡಗಿದೆ ಎಂಬ ಮಹಾತ್ಮಾ ಗಾಂಧೀಜಿ ಅವರ ಗ್ರಾಮಸ್ವರಾಜ್ಯ(Grama Swaraj)ತತ್ವದಲ್ಲಿ ನಂಬಿಕೆ ಇಟ್ಟಿರುವ ನಮ್ಮ ಶಾಸಕ ಪ್ರದೀಪ್ ಈಶ್ವರ್ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕರಾಗಿದ್ದಾರೆ. ಕ್ಷೇತ್ರದ ಪ್ರತಿಹಳ್ಳಿಯ ರಸ್ತೆಗಳು ಚೆನ್ನಾಗಿರಬೇಕು ಎಂದು ಭಾವಿಸಿ ಎಲ್ಲೆಲ್ಲಿ ಸಾಧ್ಯವೋ ಎಲ್ಲೆಲ್ಲಾ ಸಿ ಸಿ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ. ಇದಕ್ಕೆ ಇಂದಿನ  ಶಂಕುಸ್ಥಾಪನೆಯೇ ಸಾಕ್ಷಿ ಎಂದರು.

ಇದನ್ನೂ ಓದಿ: MLA Pradeep Eshwar: ಲೋಕಕ್ಕೆ ಆಧ್ಯಾತ್ಮಿಕ ಮುಕ್ತಿಮಾರ್ಗ ತೋರಿದ ಶ್ರೇಷ್ಠ ಸಂತ ಕಾಲಜ್ಞಾನಿ ಕೈವಾರ ತಾತಯ್ಯ : ಶಾಸಕ ಪ್ರದೀಪ್ ಈಶ್ವರ್ ಬಣ್ಣನೆ

ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಈ ಗ್ರಾಮಕ್ಕೆ ಬಂದಿದ್ದಾಗ ರಾಮಪಟ್ಟಣದಿಂದ ಸಿದ್ದಗಾನಹಳ್ಳಿವರೆಗೆ ರಸ್ತೆ ನಿರ್ಮಿಸಿ ಕೊಡುವ ಮಾತು ಕೊಟ್ಟಿದ್ದರು. ಅದನ್ನು ಉಳಿಸಿಕೊಂಡಿದ್ದಾರೆ. ಎಲ್ಲ ಕಡೆಯೂ ಶಾಸಕರೇ ಬಂದು ಕಾಮಗಾರಿಗಳಿಗೆ ಚಾಲನೆ ನೀಡುವುದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಪದ್ಧತಿ. ಆದರೆ ನಮ್ಮ ನಾಯಕರು ಜನರಿಗೆ ಒಳ್ಳೆಯದಾಗಬೇಕು ಎಂಬ ಮಹದಾಸೆಯನ್ನಿಟ್ಟುಕೊಂಡಿದ್ದು, ಸ್ಥಳೀಯ ನಾಯಕರಾದ ನಮ್ಮ ಮೂಲಕ ಆ ಕೆಲಸ ಮಾಡಿ ಸುತ್ತಿದ್ದಾರೆ. ಹೀಗಾಗಿ ಅವರ ಉಪಸ್ಥಿಯ ಬದಲಿಗೆ ಅವರು ಮಾಡಿರುವ ಕೆಲಸಗಳು ಮಾತನಾಡಲಿವೆ ಎಂದರು.

cbpm8c

ಚಿಕ್ಕಬಳ್ಳಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್‌ ರೆಡ್ಡಿ ಮಾತನಾಡಿ, ಎಂಎಲ್‌ಎ ಪ್ರದೀಪ್ ಈಶ್ವರ್ ಎಂದರೆ ಕೇವಲ ಹೆಸರು ಮಾತ್ರವಲ್ಲ ಬಡವರು ಮತ್ತು ಹಳ್ಳಿಗಳ ಅಭಿವೃದ್ದಿಯ ಕನಸುಳ್ಳ ದೂರ ದೃಷ್ಟಿಯ ನಾಯಕ.ಅವರಿಗೆ ಪಕ್ಷನಿಷ್ಟೆಯ ಮೇಲಿರುವಷ್ಟೇ ಮಮತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಮೇಲಿದೆ.ಪಕ್ಷ ಮತ್ತು ಪಕ್ಷದ ವರಿಷ್ಠರು ಹೇಳುವ ಕೆಲಸವನ್ನು ಪ್ರಥಮ ಆದ್ಯತೆಯಾಗಿ ಮಾಡುವುದು ಅವರು ರೂಢಿಸಿಕೊಂಡು ಬಂದಿರುವ ಪಾಲಿಸಿಯಾಗಿದೆ.ಇಂತಹ ಪ್ರಾಮಾಣಿಕ ಶಾಸಕರನ್ನು ಪಡೆದ ಈ ಕ್ಷೇತ್ರವು ಮುಂದಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ದಿಯನ್ನು ಕಾಣಲಿದೆ. ಯಾರು ಏನೇ ಹೇಳಿದರೂ ಪ್ರದೀಪ್ ಈಶ್ವರ್ ಅಯ್ಯರ್ ಸಚಿವರಾಗಿ ಬರುವುದು ಸತ್ಯ ಎಂದರು.

ಮಂಡಿಕಲ್ ಹೋಬಳಿ ರಾಮಪಟ್ಟಣದಿಂದ ಸಿದ್ದಗಾನಹಳ್ಳಿವರೆಗೆ 15 ಅಗಲ 2 ಕಿಮಿ ಉದ್ದದ ಸಿಸಿ ರಸ್ತೆ ನಿರ್ಮಾಣಕ್ಕೆ ಮಡಿಕಲ್ ಬ್ರಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್, ಮಂಡಿಕಲ್ ರಮೇಶ್, ಆದಿನಾರಾಯಣ, ನಸೀಮಾ, ವೆಂಕಟೇಶಪ್ಪ, ರಾಮಪಟ್ಟಣ ಮಹಬೂಬ್‌ಸಾಬ್ ಇದ್ದರು.