ಅಶಕ್ತರಿಗೆ ನೆರವಾ ಗುವ ನೈಜ ಸೇವಾ ಮನೋಭಾವವುಳ್ಳ ಉತ್ತಮ ಸಮಾಜ ನಿರ್ಮಾಣದ ಅಗತ್ಯವಿದೆ
ಹಲವು ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಗುರುತು ಮೂಡಿಸಿರುವ ಈ ಸಂಸ್ಥೆಯು ತನ್ನ ಜನಪರ ಸೇವೆಯನ್ನು, ಸಮಾಜದ ಬಗೆಗಿನ ಕಳಕಳಿಯನ್ನು ಮತ್ತಷ್ಟು ವಿಸ್ತರಿಸುವ ಸದು ದ್ದೇಶದಿಂದ ದಾನಿಗಳ ನೆರವಿನಿಂದ ಮೂರು ನೂತನ ಬ್ಲಾಕ್ ಗಳನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು
-
ಚಿಕ್ಕಬಳ್ಳಾಪುರ: ಇಂದಿನ ಕೊಳ್ಳುಬಾಕ ಸಂಸ್ಕೃತಿಯ ಅಟ್ಟಹಾಸದ ನಡುವೆ ಅಶಕ್ತರಿಗೆ ನೆರವಾ ಗುವ ನೈಜ ಸೇವಾ ಮನೋಭಾವವುಳ್ಳ ಉತ್ತಮ ಸಮಾಜ ನಿರ್ಮಾಣದ ಅಗತ್ಯವಿದೆ ಎಂದು ನಿವೃತ್ತ ನ್ಯಾಯಮೂರ್ತಿ ಡಾ.ಸಂತೋಷ ಹೆಗಡೆ(Retired Justice Dr.Santosh Hegde) ಅಭಿಪ್ರಾಯ ಪಟ್ಟರು.
ನಗರದ ಹೊರವಲಯದಲ್ಲಿರುವ ಜೈನ್ ಮಿಷನ್ ಆಸ್ಪತ್ರೆಯಲ್ಲಿ ಮೂರು ಹೊಸ ಬ್ಲಾಕ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಸದ ಡಾ.ಕೆ.ಸುಧಾಕರ್(MP Dr.K.Sudhakar) ಹಾಗೂ JITO ಅಧ್ಯಕ್ಷ ಪ್ರಥ್ವಿರಾಜ್ ಕೋಠಾರಿ ಅವರು ದಾನಿಗಳ ಉಪಸ್ಥಿತಿಯಲ್ಲಿ ನೂತನ ಬ್ಲಾಕ್‌ಗಳನ್ನು ಉದ್ಘಾಟಿಸಿದರು.
ಬಡವರ ನೆರವಿಗೆ ಒದಗುವ ಆರೋಗ್ಯ ಕ್ಷೇತ್ರವು ಕೂಡ ಹಣದ ಹಿಂದೆ ಬಿದ್ದಿರುವುದು ನೋವಿನ ಸಂಗತಿ. ಆದರೂ ಮರುಭೂಮಿಯಲ್ಲಿ ನೀರನ್ನು ಅರಸುಸುವಂತೆ ಲಾಭರಹಿತ ಆರೋಗ್ಯ ಸೇವೆ ನೀಡುತ್ತಿರುವ ಜೈನ್ ಮಿಷನ್ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ ಎಂದರು.
ಇದನ್ನೂ ಓದಿ: Chikkaballapur News: ಶ್ರೀಮಂತಿಕೆ ಮತ್ತು ಅಧಿಕಾರ ಪೂಜಿಸುವಂತಹ ಸಮಾಜ ಅಗಿದೆ, ಪ್ರಾಮಾಣಿಕರಿಗೆ ಯಾವುದೇ ಬೆಲೆಯಿಲ್ಲ
ಹಲವು ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಗುರುತು ಮೂಡಿಸಿರುವ ಈ ಸಂಸ್ಥೆಯು ತನ್ನ ಜನಪರ ಸೇವೆಯನ್ನು, ಸಮಾಜದ ಬಗೆಗಿನ ಕಳಕಳಿಯನ್ನು ಮತ್ತಷ್ಟು ವಿಸ್ತರಿಸುವ ಸದು ದ್ದೇಶದಿಂದ ದಾನಿಗಳ ನೆರವಿನಿಂದ ಮೂರು ನೂತನ ಬ್ಲಾಕ್ ಗಳನ್ನು ನಿರ್ಮಿಸಿ ಲೋಕಾರ್ಪಣೆ ಗೊಳಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಮಹಾವೀರರ ಆಶಯದಂತೆ ಆರೋಗ್ಯ ಕ್ಷೇತ್ರದಲ್ಲಿ ಜೈನ್ ಮಿಷನ್ ಸಂಸ್ಥೆ ನಡೆದುಕೊಳ್ಳುತ್ತ ಸೇವಾ ಮನೋಭಾವವನ್ನು ಕಾರ್ಯರೂಪಕ್ಕೆ ತಂದಿರುವುದು ಸಂತೋಷಕರ ವಿಚಾರ ಎಂದು ಅಭಿಪ್ರಾಯಪಟ್ಟರು.
ಈ ಆಸ್ಪತ್ರೆ ಒಂದು ಮಿಷನ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಬಡಜನರಿಗೆ ಕಡಿಮೆ ದರದಲ್ಲಿ ಚಿಕಿತ್ಸೆಯನ್ನು ಒದಗಿಸುತ್ತಿರುವುದು ಸಂತೋಷದ ವಿಷಯ. ಜೈನ್ ಸಮುದಾಯವು ಯಾವ ಕ್ಷೇತ್ರದಲ್ಲಿದ್ದರೂ ತಮ್ಮ ಕಾರ್ಯದ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವುದನ್ನು ಕಾಣಬಹುದು ಎಂದರು.
ಮನುಷ್ಯನ ಜೀವನದಲ್ಲಿ ತೃಪ್ತಿ ಮತ್ತು ಮಾನವೀಯತೆಗೆ ಅತ್ಯಂತ ಮುಖ್ಯ ಸ್ಥಾನ ವಿರಬೇಕು. ತೃಪ್ತಿ ಸ್ವತಃ ಬರುವುದಿಲ್ಲ,ಅದನ್ನು ಮನುಷ್ಯನು ತನ್ನೊಳಗೆ ಬೆಳೆಸಿಕೊಳ್ಳಬೇಕು. ತೃಪ್ತಿ ಇದ್ದರೆ ದುರಾಸೆಗೆ ಅವಕಾಶ ಇರುವುದಿಲ್ಲ.ಆಗ ಸೇವಾ ಮನೋಭಾವ ಬೆಳೆಯುತ್ತದೆ. ಇಂತಹ ಸೇವಾ ಮನೋಭಾವ ಜೈನ್ ಮಿಷನ್ ಆಸ್ಪತ್ರೆಯ ಕಾರ್ಯಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದರು.
ಉತ್ತಮ ಸಮಾಜ ನಿರ್ಮಾಣಕ್ಕೆ ಮಾನವೀಯ ಮೌಲ್ಯಗಳು ಅಗತ್ಯ. ಆದ್ದರಿಂದ ಪೋಷಕರು ತಮ್ಮ ಮಕ್ಕಳಲ್ಲಿ ತೃಪ್ತಿ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಂಸದ ಡಾ ಕೆ ಸುಧಾಕರ್ ಮಾತನಾಡಿ ಜೈನ್ ಮಿಷನ್ ಆಸ್ಪತ್ರೆಯು ರೈತರು, ಬಡವರು ಮತ್ತು ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ನೀಡುತ್ತಾ ಸಮಾಜಕ್ಕೆ ಮಾದರಿ ಯಾಗಿದೆ.
ಜೈನ್ ಮಿಷನ್ ಟ್ರಸ್ಟ್ ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗೆ ಕೃತಜ್ಞತೆ ಸಲ್ಲಿಸಿದ ಅವರು ಈ ಆಸ್ಪತ್ರೆ ಆರಂಭವಾಗುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿ ಶೀಘ್ರವಾಗಿ ಅನುಕೂಲ ಕಲ್ಪಿಸಲು ಸೂಚಿಸಿದ್ದೆ.ಇಂದು ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ಉತ್ತಮ ಸೇವೆ ನೀಡುತ್ತಿರುವುದು ಸಂತೋಷ ತಂದಿದೆ
ಪ್ರಾರಂಭೋತ್ಸವದ ವೇಳೆಯಲ್ಲೇ ಇದರ ಸೇವೆ ವಿಸ್ತಾರವಾಗಲಿ ಎಂದು ಹಾರೈಸಿದ್ದೆ,ಈಗ ಅದು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವುದು ಸಂತೋಷಕರ ಸಂಗತಿ . ಈ ಆಸ್ಪತ್ರೆಗೆ ನನ್ನ ಸಿಎಸ್‌ಆರ್ ನಿಧಿ ಯಡಿಯಲ್ಲಿ ಸಾಧ್ಯವಾದ ಸಹಾಯವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಐಷಾರಾಮಿ ಜೀವನಕ್ಕಿಂತ ಆರೋಗ್ಯಕರ ಜೀವನ ಮುಖ್ಯವೆಂದು ಭಾವಿಸಿರುವ ಯುವ ಸಮು ದಾಯ ಪುರಾತನ ಆಹಾರ ಪದ್ಧತಿ ಮತ್ತು ಜೀವನ ಶೈಲಿಯನ್ನು ಅನುಕರಣೆ ಮಾಡುವುದು ನೋಡಬಹುದು.
ವಿದೇಶಿ ಜೀವನಶೈಲಿಯಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಮಾತ್ರೆಗಳನ್ನು ಊಟದಂತೆ ಬಳಸುವ ಪರಿಸ್ಥಿತಿ ಬಂದಿರುವುದು ನೋವಿನ ಸಂಗತಿ. ಆದ್ದರಿಂದ ದಿನನಿತ್ಯದ ಜೀವನದಲ್ಲಿ ಬದಲಾವಣೆ ತರಬೇಕು. ದೈಹಿಕ ಚಟುವಟಿಕೆಗೆ ಒತ್ತು ನೀಡಿ ಸರಿಯಾದ ಆಹಾರ ಪದ್ಧತಿ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗ ಬೇಕು. ಆರೋಗ್ಯವಂತ ಮನುಷ್ಯನೇ ನಿಜವಾದ ಶ್ರೀಮಂತ ಎಂದರು.
ನಾವು ಪರರಿಗೆ ಎಷ್ಟು ಸಹಾಯ ಮಾಡುತ್ತೇವೋ ದೇವರು ನಮ್ಮ ಜೊತೆ ಇರುತ್ತಾನೆ. ಒಳ್ಳೆಯ ಗುಣ ಗಳನ್ನು ಬೆಳೆಸಿಕೊಳ್ಳಬೇಕು. ಜೈನ್ ಸಮುದಾಯದ ಸೇವಾ ಮನೋಭಾವ ಮತ್ತು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರ ಎಂದು ಹೇಳಿದರು.
ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್ ವ್ಯವಸ್ಥಾಪಕ ಟ್ರಸ್ಟಿ ಬಿ. ಎಸ್. ಶ್ರೀನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮೂರು ಹೂಸ ಬ್ಲಾಕ್ ದಾನಿಗಳಾದ ಲೀಲಾದೇವಿ ರಂಜೀತ್ ಮಲ್ ಜಿ ಕಾನುಂಗಾ,ಭವರಿ ಬಾಯಿ ಘೇವರ್ ಚಂದ್ ಜಿ ಸುರಾಣಾ,ದುರ್ಗೇಶ್ ಪ್ರದೀಪ್ ಜಿ ಮಲ್ಹೋತ್ರಾ,ಪಂಚಗಿರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ ನವೀನ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ನಂಜುಂಡರಾಮಯ್ಯ ಶೆಟ್ಟಿ, ನಂದಿ ಗಿರಿಧಾಮ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಹರೀಶ್ ಕುಮಾರ್, ಸದ್ಗುರು ಸನ್ನಿದಿಯ ಸ್ವಾಮಿ ಲವಣ,ಜೈನ್ ಮಿಷನ್ ಟ್ರಸ್ಟ್ ಅಧ್ಯಕ್ಷ ಡಾ.ನರಪತ್ ಸೋಲಂಕಿ, ಸಿಒಒ ಸೈಯದ್ ಬಹಾವುದ್ದೀನ್, ವೈದ್ಯಕೀಯ ಸಲಹಾ ಮಂಡಳಿ ಅಧ್ಯಕ್ಷ ಡಾ.ಮಹೇಶ್.ಎಚ್ ಬಿಜ್ಜವಾರ, ವೈದ್ಯಕೀಯ ನಿರ್ದೇಶಕ ಡಾ.ಬಾಲಕೃಷ್ಣ, ಟ್ರಸ್ಟ್ ನ ಅಧ್ಯಕ್ಷ ಸುರೇಶ್ ಕುಮಾರ್ ಜೈನ್,vಕಾರ್ಯದರ್ಶಿ ಉತ್ತಮ ಚಂದ್ ಜೈನ್, ಖಜಾಂಚಿ ಗುಲಾಬ್ ಪಗಾರಿಯ, ಉಪಾಧ್ಯಕ್ಷ ಲಕ್ಷ್ಮಿ ಚಂದ್ ಭಂಡಾರಿ, ಮನೀಶ್ ಜೈನ್, ಜಿತೇಂದ್ರ ಮರಡಿಯ, ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಜೈನ್ ಇತರರು ಉಪಸ್ಥಿತರಿದ್ದರು.