ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಮಾ.24 ರಿಂದ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ

ಹವಾಮಾನ ಬದಲಾವಣೆ ಮತ್ತು ನೀರಿನ ಭದ್ರತೆಯ ಹಿನ್ನೆಲೆಯಲ್ಲಿ ಸರೋವರ ಮತ್ತು ಜಲಾಶಯಗಳ ಸಂರಕ್ಷಣೆಗೆ ಸುಸ್ಥಿರ ಹಾಗೂ ಮಾಹಿತಿ-ಆಧಾರಿತ ಪರಿಹಾರಗಳನ್ನು ಚರ್ಚಿಸಲು ಈ ಸಮ್ಮೇಳನವು ವಿದ್ಯಾರ್ಥಿಗಳು, ಸಂಶೋಧಕರು, ಅಧ್ಯಾಪಕರು, ನೀತಿ ನಿರೂಪಕರು ಮತ್ತು ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ.

ಮಾ.24 ರಿಂದ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ

-

Ashok Nayak
Ashok Nayak Mar 5, 2026 5:47 PM

ಚಿಕ್ಕಬಳ್ಳಾಪುರ: ಪ್ರಯೋಗ ಶೈಕ್ಷಣಿಕ ಸಂಶೋಧನಾ ಸಂಸ್ಥೆಯು “ಸರೋವರಗಳು ಮತ್ತು ಜಲಾಶಯಗಳ ಕುರಿತು ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಮಾ.24 ರಿಂದ 26 ರವರೆಗೆ ಬೆಂಗಳೂರಿನ ಪ್ರಯೋಗ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ.

ಈ ಸಮ್ಮೇಳನವನ್ನು ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ , ಪರಿಸರ ರ‍್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಗಳು  ಪ್ರಾಯೋಜಿಸಿವೆ.

ಹವಾಮಾನ ಬದಲಾವಣೆ ಮತ್ತು ನೀರಿನ ಭದ್ರತೆಯ ಹಿನ್ನೆಲೆಯಲ್ಲಿ ಸರೋವರ ಮತ್ತು ಜಲಾಶಯಗಳ ಸಂರಕ್ಷಣೆಗೆ ಸುಸ್ಥಿರ ಹಾಗೂ ಮಾಹಿತಿ-ಆಧಾರಿತ ಪರಿಹಾರಗಳನ್ನು ಚರ್ಚಿಸಲು ಈ ಸಮ್ಮೇಳನವು ವಿದ್ಯಾರ್ಥಿಗಳು, ಸಂಶೋಧಕರು, ಅಧ್ಯಾಪಕರು, ನೀತಿ ನಿರೂಪಕರು ಮತ್ತು ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ.

ಇದನ್ನೂ ಓದಿ: Chikkaballapur News: ಸಮಾಜದಲ್ಲಿ ಗುರುಗಳಿಗೆ ಗೌರವದ ಸ್ಥಾನವಿದೆ, ಜವಾಬ್ದಾರಿಯರಿತು ಕರ್ತವ್ಯ ನಿರತರಾಗಿ: ಡಾ.ಬಿ.ಕೆ.ರವಿ ಅಭಿಮತ

ಈ ಸಮ್ಮೇಳನದಲ್ಲಿ ವಿಷಯ ತಜ್ಞರ ವಿಶೇಷ ಪನ್ಯಾಸಗಳು, ವಿಚಾರ ಸಂಕಿರಣಗಲು ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಈ ವಿಭಾಗಗಳಲ್ಲಿ ಮೌಖಿಕ ಪ್ರಸ್ತುತಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ನೋಂದಣಿ ಮತ್ತು ಸಾರಾಂಶ ಸಲ್ಲಿಕೆಗಾಗಿ 12ನೇ ಮಾರ್ಚ್ ಆಗಿದ್ದು, ಪ್ರಸ್ತುತಿಗೆ ಆಯ್ಕೆ ಯಾದ ಸಾರಾಂಶಗಳ ಮಾಹಿತಿಯನ್ನು ಲೇಖಕರಿಗೆ 16ನೇ ಮಾರ್ಚ್ ರೊಳಗೆ ತಿಳಿಸಲಾಗುವುದು.

ಶೈಕ್ಷಣಿಕ ಸಂಸ್ಥೆಗಳು ಅರ್ಹರನ್ನು ನಾಮನಿರ್ದೇಶನ ಮಾಡಿ ಈ ಮಹತ್ವದ ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವಂತೆ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಪ್ರಯೋಗ ಸಂಸ್ಥೆಯ ವೆಬ್ ತಾಣದಲ್ಲಿ ಪಡೆಯಬಹುದಾಗಿದೆ ಹಾಗೂ ಡಾ.ಎ.ಎಂ.ರಮೇಶ್, ಯೋಜನಾ ಮುಖ್ಯಸ್ಥರು, ಯುಗಾ ಕಾರ್ಯಯೋಜನೆ, ಪ್ರಯೋಗಾ ಶೈಕ್ಷಣಿಕ ಸಂಶೋಧನಾ ಸಂಸ್ಥೆ, ರಾವುಗೊಡ್ಲು ಗ್ರಾಮ, ಕನಕಪುರ ರಸ್ತೆ, ಬೆಂಗಳೂರು-560116, ಮೊ.9845258894 ಗೆ ಸಂಪರ್ಕಿಸಬಹುದು.