ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gauribidanur News: ಚನ್ನಕೇಶವ ದೇವಾಲಯದಲ್ಲಿ ಪ್ರತಿಷ್ಟಾಪನೆಗೊಳ್ಳುವ ನಂದಿ ವಿಗ್ರಹಕ್ಕೆ ಪೂಜೆ

ಮೈಸೂರಿನ ಪ್ರಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಸಂಪರ್ಕಿಸಿ ನೂತನ ನಂದಿ ವಿಗ್ರಹವನ್ನು ಮಾಡಿಕೊಡಬೇಕೆಂದು ಒಪ್ಪಿಸಿದರು. ಮೈಸೂರಿನ ಶಿಲ್ಪಿ ಆದಿತ್ಯ ಯೋಗಿ ರಾಜ್ ಅವರು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಿರುವ ಬಾಲ ರಾಮನ ವಿಗ್ರಹ ವನ್ನು ಇವರೇ ಕಡೆದಿರುವುದು ನಮಗೆ ಹೆಮ್ಮೆಯೂ ಹೌದು

ಚನ್ನಕೇಶವ ದೇವಾಲಯದಲ್ಲಿ ಪ್ರತಿಷ್ಟಾಪನೆಗೊಳ್ಳುವ ನಂದಿ ವಿಗ್ರಹಕ್ಕೆ ಪೂಜೆ

-

Ashok Nayak
Ashok Nayak Feb 19, 2026 11:52 PM

ಗೌರಿಬಿದನೂರು : ನಗರದ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿದ ಬೃಹತ್ ಗಾತ್ರದ ನಂದಿ ವಿಗ್ರಹವನ್ನು ನಗರದ ಪ್ರಮುಖರು ಅತ್ಯಂತ ಶ್ರದ್ದಾ ಭಕ್ತಿಯಿಂದ ಬರಮಾಡಿಕೊಂಡರು.

ನಂದಿ ವಿಗ್ರಹಕ್ಕೆ ಪೂಜೆ ಸಲ್ಲಿಸಿದ ನಂತರ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಜಿಕೆ.ರಮೇಶ್ ಮಾತನಾಡುತ್ತಾ ,ತಾಲೂಕಿನ ಅಲಕಾಪುರ ಗ್ರಾಮದ ಶ್ರೀ ಚನ್ನಸೋಮೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿಯನ್ನು ಕೈಗೆತ್ತಿಕೊಂಡಿದ್ದರು. ಅಂದಿನ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದ ಲಿಂಗೈಕ್ಯ ಎಂ.ಎನ್. ಶಶಿಧರ್ ಅವರು ದೇವಸ್ಥಾನದ ಅಭಿವೃದ್ಧಿಯ ಜೊತೆಗೆ ದೇವಸ್ಥಾನದ ಮುಂಭಾಗದಲ್ಲಿದ್ದ ಬೃಹತ್ ನಂದಿ ವಿಗ್ರಹವನ್ನು ಪುನರ್ ಪ್ರತಿಷ್ಠಾನೆ ಮಾಡಬೇಕೆಂಬ ಸಂಕಲ್ಪ ಹೊಂದಿದ್ದರು.

ಮೈಸೂರಿನ ಪ್ರಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಸಂಪರ್ಕಿಸಿ ನೂತನ ನಂದಿ ವಿಗ್ರಹವನ್ನು ಮಾಡಿಕೊಡಬೇಕೆಂದು ಒಪ್ಪಿಸಿದರು. ಮೈಸೂರಿನ ಶಿಲ್ಪಿ ಆದಿತ್ಯ ಯೋಗಿ ರಾಜ್ ಅವರು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಿರುವ ಬಾಲ ರಾಮನ ವಿಗ್ರಹವನ್ನು ಇವರೇ ಕಡೆದಿರುವುದು ನಮಗೆ ಹೆಮ್ಮೆಯೂ ಹೌದು ಎಂದ ಅವರು  ಶಿಲ್ಪಿ ಅರುಣ್ ಯೋಗಿರಾಜ್ ಅವರು ಆರು ಅಡಿ ಉದ್ದ,ಐದು ಅಡಿ ಎತ್ತರ ಹಾಗೂ ಐದು ಅಡಿ ಅಗಲದ ನಂದಿ ವಿಗ್ರಹವನ್ನು ಅತ್ಯಂತ ಶ್ರದ್ಧೆಯಿಂದ ಕೆತ್ತಿ ಕಳುಹಿಸಿದ್ದಾರೆ ಇದರ ಸಂಪೂರ್ಣ ಖರ್ಚು ವೆಚ್ಚಗಳನ್ನು ದಿವಂಗತ ಎಂಎನ್.ಶಶಿಧರ್ ಮತ್ತು ಗುತ್ತಿಗೆದಾರರಾದ ದಿವಂಗತ ಸೋಮೇಶ್ ಅವರುಗಳೆ ಭರಿಸಿದ್ದರು.

ಇದನ್ನೂ ಓದಿ:Chintamani News: ತಾತಯ್ಯನವರ 300ನೇ ಜಯಂತೋತ್ಸವದ ಅಂಗವಾಗಿ ನಾಮ ಸಂಕೀರ್ತನೆಯ ಸಂಗೀತೋತ್ಸವ : ವಾನರಾಶಿ ಭಾಗವತರ್

ಮುಂದಿನ ಧಾರ್ಮಿಕ ಕೈಂಕರ್ಯಗಳ ನಂತರ ಅಲಕಾಪುರದ ಶ್ರೀ ಚನ್ನಸೋಮೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಂದಿ ವಿಗ್ರಹದ ಪ್ರತಿಷ್ಠನೆಯನ್ನು ನೆರೆವೇರಿಸ ಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರದ ವಾಣಿಜ್ಯೋಧ್ಯಮಿ ಬಿಆರ್.ಶ್ರೀನಿವಾಸ್ ಮೂರ್ತಿ,ನಗರಸಭೆ ಮಾಜಿ ಅಧ್ಯಕ್ಷೆ ರೂಪಾ ಅನಂತರಾಜು, ಜಿಎನ್.ನಾಗರಾಜ್, ಇಸ್ತೂರಿ ಸಂಪಂಗಿ, ಸತೀಶ್, ಪೋತೇನಹಳ್ಳಿ ರಾಮಣ್ಣ, ವಿಶ್ವ ಹಿಂದು ಪರಿಷದ್ ಜಿಲ್ಲಾ ಸಹ ಕಾರ್ಯದರ್ಶಿ ಸಾಗಾನಹಳ್ಳಿ ಶಿವಕುಮಾರ್, ವಿಎಚ್ಪಿ ನಗರ ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್, ನಟರಾಜ್, ಎನ್ವಿ ರಾಮಕೃಷ್ಣಪ್ಪ, ಸೂರಜ್, ಮುದ್ದುವೀರಪ್ಪ , ಪ್ರಭಾಕರ್ ಹಾಗೂ ಇನ್ನಿತರರು ಭಾಗವಹಿಸಿದ್ದರು.ಇದೇ ಸಂಧರ್ಭದಲ್ಲಿ ನೆರೆದಿದ್ದ ಭಕ್ತಾಧಿಗಳಿಗೆ ವಾಣಿಜ್ಯೋ ದ್ಯಮಿ ಬಿಆರ್ ಶ್ರೀನಿವಾಸ್ ಮೂರ್ತಿ ಅವರು ಸಿಹಿ ವಿತರಣೆಯನ್ನು ನಡೆಸಿಕೊಟ್ಟರು.