ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chintamani News: ತಾತಯ್ಯನವರ 300ನೇ ಜಯಂತೋತ್ಸವದ ಅಂಗವಾಗಿ ನಾಮ ಸಂಕೀರ್ತನೆಯ ಸಂಗೀತೋತ್ಸವ : ವಾನರಾಶಿ ಭಾಗವತರ್

ಕೈವಾರ ತಾತಯ್ಯನವರ 300ನೇ ಜಯಂತೋತ್ಸವದ ಅಂಗವಾಗಿ ಮಾರ್ಚ್ 2 ಸೋಮ ವಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸದ್ಗುರು ತಾತಯ್ಯ ನವರಿಗೆ ವಿಶೇಷ ಅಭಿಷೇಕ, ಪೂಜೆ ಹಾಗೂ ಧರ್ಮಾಧಿಕಾರಿಗಳಾದ ಡಾ||ಎಂ.ಆರ್. ಜಯರಾಮ್ ರವರಿಂದ ಆತ್ಮಬೋಧಾಮೃತ ಪ್ರವಚನವನ್ನು ಹಮ್ಮಿಕೊಳ್ಳಲಾಗಿದೆ.

ತಾತಯ್ಯನವರ 300ನೇ ಜಯಂತೋತ್ಸವ: ನಾಮ ಸಂಕೀರ್ತನೆಯ ಸಂಗೀತೋತ್ಸವ

-

Ashok Nayak
Ashok Nayak Feb 19, 2026 10:39 PM

ಚಿಂತಾಮಣಿ: ಕೈವಾರದ ಸದ್ಗುರು ಶ್ರೀಯೋಗಿನಾರೇಯಣ ಮಠದಲ್ಲಿ ನಡೆಯಲಿರುವ ಕೈವಾರ ತಾತಯ್ಯನವರ 300ನೇ ಜಯಂತೋತ್ಸವದ ಅಂಗವಾಗಿ ನಾಮ ಸಂಕೀರ್ತನೆಯ ಸಂಗೀತೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೈವಾರ ನಾದಸುಧಾರಸ ಸಂಕೀರ್ತ ನೆಯ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ತಿಳಿಸಿದರು.

ಕೈವಾರದ ಶ್ರೀಯೋಗಿನಾರೇಯಣ ಮಠದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವ ಸಿದ್ಧತೆಯ ಸಭೆಯಲ್ಲಿ ಜಯಂತೋತ್ಸವ ಹಾಗೂ ರಥೋತ್ಸವದ ವಿವರಗಳನ್ನು ನೀಡುತ್ತಾ ಮಾತನಾಡಿದರು.

ಕೈವಾರ ತಾತಯ್ಯನವರ 300ನೇ ಜಯಂತೋತ್ಸವದ ಅಂಗವಾಗಿ ಮಾರ್ಚ್ 2 ಸೋಮ ವಾರದಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸದ್ಗುರು ತಾತಯ್ಯ ನವರಿಗೆ ವಿಶೇಷ ಅಭಿಷೇಕ, ಪೂಜೆ ಹಾಗೂ ಧರ್ಮಾಧಿಕಾರಿಗಳಾದ ಡಾ||ಎಂ.ಆರ್. ಜಯರಾಮ್ ರವರಿಂದ ಆತ್ಮಬೋಧಾಮೃತ ಪ್ರವಚನವನ್ನು ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: Chinthamani News: ಮುಂದಿನ ಪೀಳಿಗೆಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಉದ್ಯೋಗ ಸಿಗುವುದು ಅನುಮಾನ : ಇ ಒ ಆನಂದ್

ನಂತರ ಹಲವಾರು ಸಂಗೀತ ವಿದ್ವಾಂಸರು, ಭಜನೆಯ ಭಕ್ತರಿಂದ ನಾಮ ಸಂಕೀರ್ತನೆಯ ಸಂಗೀತೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಗೀತೋತ್ಸವದಲ್ಲಿ ಎ.ವಿ.ವಿಶ್ವನಾಥ್ ಚಿಂತಾಮಣಿ, ಭೈರತಿ ಆಂಜನಪ್ಪ, ಪಿ.ಜೆ. ಬ್ರಹ್ಮಾಚಾರಿ, ಜಿ.ಎಸ್.ಬ್ರಹ್ಮೇಂದ್ರ, ಹೊಸೂರು ಕೃಷ್ಣ, ವಿ.ಗೋವರ್ಧನ್, ಚಿಂತಾಮಣಿ ಸಂಗೀತ ಮಹಾವಿದ್ಯಾಲಯದ ಪದ್ಮಾವತಿ ಹಾಗೂ ಪರಿಮಳ, ಶ್ರೀಯೋಗಿನಾರೇಯಣ ಸಂಗೀತ ಮಹಾವಿದ್ಯಾಲಯದ ಲಕ್ಷ್ಮೀ ಕೆಂಪರಾಜು, ಶಾಲಿನಿ ನವೀನ್ ಕುಮಾರ್, ನಾದಸುಧಾರಸ ಮಹಿಳಾ ಮಂಡಳಿ, ಹಾಗೂ ಹಲವಾರು ಭಜನಾ ಮಂಡಳಿಯವರಿಂದ ಸಂಗೀತ ಸೇವೆಯನ್ನು ಸಮರ್ಪಿಸಲಾಗುವುದು ಎಂದರು.

ಮಾರ್ಚ್ 3 ರಂದು ಚಂದ್ರಗ್ರಹಣವಿರುವುದರಿಂದ ಕೈವಾರದ ಶ್ರೀ ಅಮರನಾರೇಯಣ ಸ್ವಾಮಿ ಬ್ರಹ್ಮರಥೋತ್ಸವವನ್ನು ಬೆಳಿಗ್ಗೆ 7.30 ಗಂಟೆಗೆ ನೆರವೇರಿಸಲಾಗುವುದು. ಬೆಳಿಗ್ಗೆ 6 ಗಂಟೆಗೆ ಅಮರನಾರೇಯಣಸ್ವಾಮಿ ದೇವಾಲಯದಲ್ಲಿ ಕೈವಾರ ತಾತಯ್ಯನವರ ವತಿ ಯಿಂದ ಶ್ರೀಕೃಷ್ಣಗಂಧೋತ್ಸವ ಸೇವೆಯನ್ನು ಸಮರ್ಪಿಸಲಾಗುವುದು.

ಸಂಜೆ 4.30 ಗಂಟೆಗೆ ಆಲಂಬಗಿರಿಯಲ್ಲಿ ಹುಣ್ಣಿಮೆ ಗಿರಿಪ್ರದಕ್ಷಣೆ-ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 7 ಗಂಟೆಗೆ ನಾದಸುಧಾರಸ ವೇದಿಕೆಯಲ್ಲಿ ವಿದುಷಿ ಜಮುನ ಭಾಗವತರಾಣಿ ರವರಿಂದ ಹರಿಕಥೆ ಇರುತ್ತದೆ. ರಾತ್ರಿ 9 ಗಂಟೆಗೆ ಶ್ರೀಯೋಗಿನಾರೇಯಣ ಕೃಪಾ ಪೋಷಿತ ನಾಟಕ ಮಂಡಳಿ ನಾಗದೇನಹಳ್ಳಿ ರವರಿಂದ “ದಾನವೀರ ಶೂರ ಕರ್ಣ” ಎಂಬ ಪೌರಾಣಿಕ ನಾಟಕವಿರುತ್ತದೆ ಎಂದರು.

ಮಾರ್ಚ್ 4 ರಂದು ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ರಥೋತ್ಸವವನ್ನು ಮಧ್ಯಾಹ್ನ 1.30 ಗಂಟೆಗೆ ನೆರವೇರಿಸಲಾಗುವುದು. ಅಂದು ಬೆಳಗಿನಿಂದಲೇ ಮಠದಲ್ಲಿ ಅಭಿಷೇಕ, ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 7 ಗಂಟೆಗೆ ಕೈವಾರದ ನಾಟ್ಯಾಂಜಲಿ ಕಲಾಕೇಂದ್ರ ಪರಿಮಳ ಅರಳುಮಲ್ಲಿಗೆ ತಂಡದವರಿಂದ ಭರತನಾಟ್ಯ, ರಾತ್ರಿ 9 ಗಂಟೆಗೆ ಶ್ರೀಬಸವಣ್ಣ ಕನ್ನಡ ಕಲಾ ಸಂಘ, ಮದ್ದೇರಿ ಟಿ.ಮುನಿರೆಡ್ಡಿ ತಂಡದವರಿಂದ ಶ್ರೀಕೃಷ್ಣ ಸಂಧಾನ ಎಂಬ ಪೌರಾಣಿಕ ನಾಟಕವಿರುತ್ತದೆ.

ರಾತ್ರಿ 10 ಗಂಟೆಗೆ ಕೈವಾರ ತಾತಯ್ಯನವರ ಮುತ್ತಿನ ಪಲ್ಲಕ್ಕಿ ಉತ್ಸವವಿರುತ್ತದೆ ಎಂದರು. ಸಭೆಯಲ್ಲಿ ಹಲವಾರು ಕಡೆಗಳಿಂದ ಆಗಮಿಸಿದ್ದ ಭಕ್ತರು ಭಾಗವಹಿಸಿದ್ದರು.