Dundi Yatre Book: ಮಂಗಳೂರಿನಲ್ಲಿ ಡುಂಡಿರಾಜರ ದಂಡಯಾತ್ರೆಯ ಡಿಂಡಿಮ
H Dundiraj: ಖ್ಯಾತ ಕವಿ, ವಾಗ್ಮಿ ಎಚ್. ಡುಂಡಿರಾಜ್ ಅವರ ಜನಪ್ರಿಯ ಆತ್ಮಕಾದಂಬರಿ ‘ಡುಂಡಿಯಾತ್ರೆ’ ಕೃತಿ ಪರಿಚಯ ಮತ್ತು ‘ಸಾಹಿತ್ಯ ಸಂವಾದ’ ಕಾರ್ಯಕ್ರಮ ‘ಡುಂಡಿರಾಜರ ದಂಡಯಾತ್ರೆ’ ಮಂಗಳೂರು ನಗರದ ನಂತೂರಿನ ಶ್ರೀ ಭಾರತೀ ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆಯಿತು.
-
ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು ಹಾಗೂ ಮಂಗಳೂರು ಹವ್ಯಕ ಸಭಾ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಕವಿ, ವಾಗ್ಮಿ ಎಚ್. ಡುಂಡಿರಾಜ್ ಅವರ ಜನಪ್ರಿಯ ಆತ್ಮಕಾದಂಬರಿ ‘ಡುಂಡಿಯಾತ್ರೆ’ ಕೃತಿ ಪರಿಚಯ ಮತ್ತು ‘ಸಾಹಿತ್ಯ ಸಂವಾದ’ ಕಾರ್ಯಕ್ರಮ ‘ಡುಂಡಿರಾಜರ ದಂಡಯಾತ್ರೆ’ ಭಾನುವಾರ ನಗರದ ನಂತೂರಿನ ಶ್ರೀ ಭಾರತೀ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕವಿ ಎಚ್. ಡುಂಡಿರಾಜ್ ಅವರು ತಮ್ಮ ಕಾವ್ಯ ಪಯಣದ ದಾರಿಯನ್ನು ಪರಿಚಯಿಸುತ್ತಾ, ಮಂಗಳೂರೆಂದರೆ ತನಗೆ ತವರುಮನೆಯ ಹಾಗೆ ಎಂದರು. ಇಲ್ಲಿಯೇ ವೃತ್ತಿ ಜೀವನದ ಆರಂಭ , ಇಲ್ಲಿಯೇ ನಿವೃತ್ತಿ , ಬ್ಯಾಂಕ್ ಉದ್ಯೋಗದ 36 ವರ್ಷಗಳಲ್ಲಿ 13 ವರ್ಷಗಳನ್ನು ಇಲ್ಲಿ ಕಳೆಯುತ್ತಾ ಇಲ್ಲಿನ ಜನರ ಪ್ರೀತಿ , ವಿಶ್ವಾಸ , ಬೆಂಬಲವನ್ನು ಪಡೆದಿರುವುದು ತನ್ನ ಪಾಲಿನ ಭಾಗ್ಯ. ಇದೀಗ ಆತ್ಮ ಕಾದಂಬರಿ ಡುಂಡಿಯಾತ್ರೆಗೂ ಉತ್ತಮ ಸ್ಪಂದನೆ ದೊರೆತಿದೆ ಎಂದರು.
ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅವರು ಡುಂಡಿಯಾತ್ರೆ ಮತ್ತು ಅವರ ಸಾಹಿತ್ಯದ ಒಡನಾಟದ ಬಗ್ಗೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಈ ಕಾರ್ಯಕ್ರಮದ ಮೂಲಕ ಅವರನ್ನು ಬರಮಾಡಿಕೊಂಡದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಸಾಪ ಮಂಗಳೂರು ಘಟಕದ ಅಧ್ಯಕ್ಷ ಡಾ.ಮಂಜುನಾಥ ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಮಂಗಳೂರು ಹವ್ಯಕ ಸಭಾ ಅಧ್ಯಕ್ಷ ದಿವಾಣ ಗೋವಿಂದ ಭಟ್, ಕಸಾಪ ಕೇರಳ ಗಡಿನಾಡು ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ತೊಟ್ಟೆತ್ತೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಕಸಾಪ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಮುರಲೀಮೋಹನ ಚೂಂತಾರು ನಿರೂಪಿಸಿದರು. ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ವಂದಿಸಿದರು.