Gubbi News: ಕೊಪ್ಪ ವಿಎಸ್ಎಸ್ಎನ್ ಪ್ರತಿಷ್ಠೆಯ ಚುನಾವಣೆ : ಅಧ್ಯಕ್ಷರಾಗಿ ಕೆ.ಎಸ್.ರಮೇಶ್, ಉಪಾಧ್ಯಕ್ಷರಾಗಿ ನಟರಾಜ್ ಆಯ್ಕೆ
ಅಧ್ಯಕ್ಷ ಸ್ಥಾನಕ್ಕೆ ಕೆ.ಎಸ್.ರಮೇಶ್ ಹಾಗೂ ಹೊನ್ನಶೆಟ್ಟಿಹಳ್ಳಿ ಬೋರೇಗೌಡ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಟರಾಜ್ ಹಾಗೂ ರಾಜಣ್ಣ ಸ್ಪರ್ಧಿಸಿದ್ದರು. ಒಟ್ಟು 13 ಮತಗಳ ಪ್ರತಿಷ್ಠೆಯ ಈ ಚುನಾವಣೆಯಲ್ಲಿ ಏಳು ಮತಗಳನ್ನು ಪಡೆಯುವ ಮೂಲಕ ಕೋಣನಕೆರೆ ಕೆ.ಎಸ್.ರಮೇಶ್ ಅಧ್ಯಕ್ಷರಾಗಿ ಜಯಗಳಿಸಿದರು. ಪ್ರತಿಸ್ಪರ್ಧಿ ಬೋರೇಗೌಡ ಆರು ಮತಗಳನ್ನು ಪಡೆಯುವ ಮೂಲಕ ಒಂದು ಮತದಲ್ಲಿ ಪರಾಜಿತಗೊಂಡರು.
-
ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿ ಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಪ್ರತಿಷ್ಠೆಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೋಣನಕೆರೆ ಕೆ.ಎಸ್.ರಮೇಶ್ ಉಪಾಧ್ಯಕ್ಷರಾಗಿ ಗೋಳೆನಹಳ್ಳಿ ನಟರಾಜು ಇಬ್ಬರೂ ಕೇವಲ ಒಂದು ಮತದ ಅಂತರದಲ್ಲಿ ಚುನಾಯಿತರಾದರು.
ಅಧ್ಯಕ್ಷ ಸ್ಥಾನಕ್ಕೆ ಕೆ.ಎಸ್.ರಮೇಶ್ ಹಾಗೂ ಹೊನ್ನಶೆಟ್ಟಿಹಳ್ಳಿ ಬೋರೇಗೌಡ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಟರಾಜ್ ಹಾಗೂ ರಾಜಣ್ಣ ಸ್ಪರ್ಧಿಸಿದ್ದರು. ಒಟ್ಟು 13 ಮತಗಳ ಪ್ರತಿಷ್ಠೆಯ ಈ ಚುನಾವಣೆಯಲ್ಲಿ ಏಳು ಮತಗಳನ್ನು ಪಡೆಯುವ ಮೂಲಕ ಕೋಣನಕೆರೆ ಕೆ.ಎಸ್.ರಮೇಶ್ ಅಧ್ಯಕ್ಷರಾಗಿ ಜಯಗಳಿಸಿದರು. ಪ್ರತಿಸ್ಪರ್ಧಿ ಬೋರೇಗೌಡ ಆರು ಮತಗಳನ್ನು ಪಡೆಯುವ ಮೂಲಕ ಒಂದು ಮತದಲ್ಲಿ ಪರಾಜಿತಗೊಂಡರು.
ಇದನ್ನೂ ಓದಿ: Gubbi News: ರಾಜ್ಯೋತ್ಸವ ಅಂಗವಾಗಿ ಕವಿಗೋಷ್ಠಿ ಆಯೋಜಿಸಿದ ಗುಬ್ಬಿ ಕಾರ್ಯನಿರತ ಪತ್ರಕರ್ತರ ಸಂಘ
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಟರಾಜು ಏಳು ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಚುನಾಯಿತರಾದರು. ರಾಜಣ್ಣ ಆರು ಮತಗಳನ್ನು ಪಡೆಯುವ ಮೂಲಕ ಒಂದು ಮತಗಳ ಅಂತರದಿಂದ ಪರಾಭವಗೊಂಡರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆಎಸ್.ರಮೇಶ್ ಮಾತನಾಡಿ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮುಂಬರುವ ದಿನಗಳಲ್ಲಿ ಪ್ರಾಥಮಿಕ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕರ ಸಹಕಾರದಿಂದ ನಿರ್ಮಿಸಲಾಗುವುದು ಎಂದು ತಿಳಿಸಿದರು.
ನೂತನ ಉಪಾಧ್ಯಕ್ಷ ನಟರಾಜು ಮಾತನಾಡಿ ಅಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರನ್ನು ವಿಶ್ವಾಸ ತೆಗೆದುಕೊಂಡು ಸಹಕಾರ ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು. ಚುನಾವಣಾ ಅಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಇದೇ ವೇಳೆ ಅಧ್ಯಕ್ಷ ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಧಿಕಾರಿ ನಂಜೇಗೌಡ, ಸೇರಿದಂತೆ ಸಂಘದ ಎಲ್ಲಾ ನಿರ್ದೇಶಕರು, ಸಿಬ್ಬಂದಿ, ಸ್ಥಳೀಯ ಮುಖಂಡರು ಹಾಜರಿದ್ದರು.