ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Temple: ಧರ್ಮಸ್ಥಳ ದೇವಸ್ಥಾನದಲ್ಲಿ ಶಿವ ತಾಂಡವ ಪ್ರತ್ಯಕ್ಷ!

ಧರ್ಮಸ್ಥಳ ಕ್ಷೇತ್ರ ವಿರೋಧಿಗಳ ಸಂಚು ಒಂದೊಂದಾಗಿ ಬಯಲಾಗುತ್ತಿದೆ. ಇದೀಗ ಧರ್ಮಸ್ಥಳ ದೇವಸ್ಥಾನದ ಹಿನ್ನೆಲೆಯಲ್ಲಿ ಶಿವ ತಾಂಡವ ಮಾಡುತ್ತಿರುವ ಫೋಟೊವನ್ನು ಕ್ಷೇತ್ರದ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಆ ಮೂಲಕ ವಿರೋಧಿಗಳಿಗೆ ಸರಿಯಾಗಿ ತಿರುಗೇಟು ನೀಡಲಾಗಿದೆ.

ಧರ್ಮಸ್ಥಳ ದೇವಸ್ಥಾನದಲ್ಲಿ ಶಿವ ತಾಂಡವ ಪ್ರತ್ಯಕ್ಷ

Ramesh B Ramesh B Aug 23, 2025 4:28 PM

ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದ (Dharmasthala Temple) ವಿರುದ್ಧ ನಡೆದ ಷಡ್ಯಂತ್ರ, ಒಳಸಂಚು ಮತ್ತು ಕುತಂತ್ರ ಒಂದೊಂದಾಗಿಯೇ ಬಯಲಾಗುತ್ತಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಹೂಳಿದ್ದೆ ಎಂದು ಹೇಳಿದ್ದ ಮುಸುಕುಧಾರಿ ಚಿನ್ನಯ್ಯನ ವಾದ ಸುಳ್ಳು ಎಂದು ಸಾಬೀತಾಗಿದ್ದು, ಬೆಳ್ತಂಗಡಿ ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ. ಇತ್ತ ಧರ್ಮಸ್ಥಳ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಿರೀಶ್‌ ಮಟ್ಟೆಣವರ್‌, ಎಐ ವಿಡಿಯೊ ಮೂಲಕ ಜನರ ದಾರಿ ತಪ್ಪಿಸಿದ ಯೂಟ್ಯೂಬರ್‌ ಸಮೀರ್‌ ಎಂ.ಡಿ.ಗೂ ನೋಟಿಸ್‌ ನೀಡಲಾಗಿದೆ. ಸುಜಾತಾ ಭಟ್‌ ಹೇಳಿದ ಅನನ್ಯಾ ಭಟ್‌ ಕಥೆ ಸುಳ್ಳು ಎನ್ನುವುದೂ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಶಿವ ತಾಂಡವದ ಫೋಟೊ ಹಾಕಿ ಎಂದಿದ್ದರೂ ಸತ್ಯಕ್ಕೆ ಜಯ ಎನ್ನುವುದನ್ನು ಸೂಚ್ಯವಾಗಿ ತಿಳಿಸಲಾಗಿದೆ.

ಧರ್ಮಸ್ಥಳ ದೇವಸ್ಥಾನದ ಹಿನ್ನೆಲೆಯಲ್ಲಿ ಶಿವ ತಾಂಡವ ಮಾಡುತ್ತಿರುವ ಫೋಟೊ ಇದಾಗಿದೆ. ʼʼನಮೋ ಮಂಜುನಾಥʼʼ ಎಂದು ಕ್ಯಾಪ್ಷನ್‌ ಬರೆಯಲಾಗಿದೆ. ಆ ಮೂಲಕ ವಿರೋಧಿಗಳಿಗೆ ಸರಿಯಾಗಿ ತಿರುಗೇಟು ನೀಡಿದೆ.

ಈ ಸುದ್ದಿಯನ್ನೂ ಓದಿ: Dharmasthala case: ಮುಸುಕುಧಾರಿ ಬಂಧನ ನಿಜ, ಇದರ ಹಿಂದಿರುವ ಜಾಲ ಪತ್ತೆಗೆ ಕ್ರಮ: ಜಿ. ಪರಮೇಶ್ವರ್‌



ಶಿವ ತಾಂಡವ ಶುರು ಎಂದಿದ್ದ ಸಮೀರ್‌

ಧರ್ಮಸ್ಥಳ ಕ್ಷೇತ್ರದ ಅಧಿಕೃತ ಪೇಜ್‌ನಲ್ಲಿ ಈ ಪೋಸ್ಟ್‌ ಹಂಚಿಕೊಂಡಿರುವುದಕ್ಕೂ ಕಾರಣವಿದೆ. ಈ ಹಿಂದೆ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಕಟ್ಟುಕಥೆ ಕಟ್ಟಿ ಎಐ ವಿಡಿಯೊ ಮಾಡಿದ್ದ ಸಮೀರ್‌ ಎಂ.ಡಿ. ಈಗ ಶಿವ ತಾಂಡವ ಶುರು ಎಂದು ಹೇಳಿದ್ದ. ಜತೆಗೆ ದಂಗೆ ಏಳುವಂತೆ ಜನರಿಗೆ ಕರೆ ನೀಡಿದ್ದ. ಅದಾದ ಬಳಿಕ ದೇವಸ್ಥಾನದ ವಿರುದ್ಧ ಒಂದೊಂದೇ ಆರೋಪಗಳು ಕೇಳಿ ಬಂದಿದ್ದವು. ಆದರೆ ಇದೀಗ ಈ ಸಂಚೆಲ್ಲ ಬಟಾ ಬಯಲಾಗಿದ್ದು, ಎಲ್ಲರ ಮುಖವಾಡ ಕಳಚಿ ಬಿದ್ದಿದೆ. ಎಸ್‌ಐಟಿ ತನಿಖೆ ಕೈಗೆತ್ತಿಕೊಂಡಿದ್ದು, ಷಡ್ಯಂತ್ರ ಒಂದೊಂದಾಗಿ ಹೊರ ಬೀಳುತ್ತಿದೆ.

ಸದ್ಯ ಧರ್ಮಸ್ಥಳ ಕ್ಷೇತ್ರದ ಪೋಸ್ಟ್‌ ವೈರಲ್‌ ಆಗಿದೆ. ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʼʼಧರ್ಮೋ ರಕ್ಷತಿ ರಕ್ಷಿತಃʼʼ, ʼʼಸುಳ್ಳು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ, ಕೊನೆಗೆ ಸತ್ಯಕ್ಕೆ ಜಯʼʼ ಎಂದು ಅನೇಕರು ಕಮೆಂಟ್‌ ಮಾಡಿದ್ದಾರೆ.

ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ

ಇನ್ನು ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತಿದ್ದಾಗಿ ಹೇಳಿದ್ದ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಬಂಧನದ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ʼʼಈಗ ಒಂದೊಂದೆ ಸತ್ಯ ಹೊರಗೆ ಬರುತ್ತಿವೆ. ಎಲ್ಲ ಆರೋಪಗಳಿಂದ ತೊಳೆದಂತಾಗಿದೆ. ಇದರ ಬಗ್ಗೆ ನಾನು ಈಗ ಹೆಚ್ಚು ಮಾತನಾಡಲ್ಲ. ಸತ್ಯಕ್ಕೆ ಜಯ ಸಿಕ್ಕಿದೆʼʼ ಎಂದು ಹೇಳಿದ್ದಾರೆ.

ʼʼಜನರ ಪ್ರೀತಿ ಕ್ಷೇತ್ರದ ಮೇಲೆ ಹೀಗೆಯೇ ಇರಲಿ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು. ಎಸ್ಐಟಿ ತನಿಖೆ ಹಂತದಲ್ಲಿರುವುದರಿಂದ ಈ ಬಗ್ಗೆ ನಾನು ಹೆಚ್ಚು ಮಾತನಾಡಲ್ಲʼʼ ಎಂದು ತಿಳಿಸಿದ್ದಾರೆ.