ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala: ಚತುರ್ದಾನ ಪರಂಪರೆಯ ಕ್ಷೇತ್ರಕ್ಕೆ ಅಂಟಿದ ಕಳಂಕ -ಧರ್ಮಸ್ಥಳದ ಪಾವಿತ್ರತ್ಯೆಗೆ 'ಮಸಿ' ಬಳಿಯುವ ಹುನ್ನಾರ

ಹಸಿದವರಿಗೆ ಅನ್ನ, ಸಾಲದಿಂದ ಬಳಲುತ್ತಿರುವ ಕುಟುಂಬಗಳಿಗೆ ಸಾಲ ಮುಕ್ತಿ, ಮದ್ಯವ್ಯಸನದ ವಿರುದ್ಧ ಹೋರಾಟ, ಗ್ರಾಮೀಣ ಯುವಕರಿಗೆ ಶಿಕ್ಷಣ, ಉದ್ಯೊಗ, ಮತ್ತು ಲಕ್ಷಾಂತರ ಜನರಿಗೆ ಬಡತನದ ಕೂಪದಿಂದ ರಕ್ಷಿಸಿ ಅವರಿಗೆಲ್ಲ ನೆಮ್ಮದಿಯ ಬದುಕನ್ನು ಕಟ್ಟಿಕೊಡುವ ಮಹತ್ತರ ಸಾಮಾಜಿಕ ಕಾರ್ಯವನ್ನು ಮಾಡಿಕೊಂಡು ಬರುತ್ತಿರುವ ಧರ್ಮಸ್ಥಳ ವಿರುದ್ಧ ಇಂದು ದೊಡ್ಡ ಪಿತೂರಿ ನಡಿಯುತ್ತದೆ. ಇಂದು ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸಾಬೀತಾಗದ ಆರೋಪಗಳು ಈ ಭವ್ಯ ಪರಂಪರೆಯ ಮೇಲೆ ಸಂಶಯದ ಕಾರ್ಮೋಡ ಕವಿಯುವಂತೆ ಮಾಡಿದೆ.

ಧರ್ಮಸ್ಥಳದ ವಿರುದ್ಧ ಕಾಣದ ಶಕ್ತಿಗಳ ಕೈವಾಡ

ಧರ್ಮಸ್ಥಳ

Profile Sushmitha Jain Aug 20, 2025 8:11 AM

ಬೆಂಗಳೂರು: ಶತ ಶತಮಾನಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ (Dharmasthala) ಮಂಜುನಾಥೇಶ್ವರ ದೇವಸ್ಥಾನ (Manjunatheshwara Temple) ಕೇವಲ ಒಂದು ಧಾರ್ಮಿಕ ಕೇಂದ್ರವಾಗಿರದೆ, ಹಸಿದವರಿಗೆ ಅನ್ನ, ಸಾಲದಿಂದ ಬಳಲುತ್ತಿರುವ ಕುಟುಂಬಗಳಿಗೆ ಸಾಲ ಮುಕ್ತಿ, ಮದ್ಯವ್ಯಸನದ ವಿರುದ್ಧ ಹೋರಾಟ, ಗ್ರಾಮೀಣ ಯುವಕರಿಗೆ ಶಿಕ್ಷಣ, ಉದ್ಯೊಗ, ಮತ್ತು ಲಕ್ಷಾಂತರ ಜನರಿಗೆ ಬಡತನದ ಕೂಪದಿಂದ ರಕ್ಷಿಸಿ ಅವರಿಗೆಲ್ಲ ನೆಮ್ಮದಿಯ ಬದುಕನ್ನು ಕಟ್ಟಿಕೊಡುವ ಮಹತ್ತರ ಸಾಮಾಜಿಕ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ.
ಆದರೆ, ಇಂದು ಒಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿರುವ ಸಾಬೀತಾಗದ ಆರೋಪಗಳು ಈ ಭವ್ಯ ಪರಂಪರೆಯ ಮೇಲೆ ಸಂಶಯದ ಕಾರ್ಮೋಡ ಕವಿಯುವಮತೆ ಮಾಡಿದೆ.

ವಿವಾದದ ಗುರಿ

ಈ ಆರೋಪದ ಹಿಂದೆ ಯಾವುದೇ ಸತ್ಯಾನ್ವೇಷಣೆಯ ಉದ್ದೇಶವಿಲ್ಲ. ಕರ್ನಾಟಕದ ಸಾಮಾಜಿಕ-ಆಧ್ಯಾತ್ಮಿಕ ರಕ್ಷಣೆಯ ಕೇಂದ್ರವಾದ ಧರ್ಮಸ್ಥಳವನ್ನು ಗುರಿಯಾಗಿಸಿ ನಡೆಯುತ್ತಿರುವ ಒಂದು ಯೋಜಿತ ದಾಳಿ ಇದಾಗಿದೆ ಎಂಬುದು ಎಲ್ಲಾ ಶ್ರದ್ಧಾಳುಗಳ ಬೇಸರವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (skdrdp) ಮೂಲಕ ಲಕ್ಷಾಂತರ ಜನರಿಗೆ ಆರ್ಥಿಕ ಮತ್ತು ಸ್ವಾವಲಂಬತೆಯ ಭದ್ರತೆಯನ್ನು ಕಲ್ಪಿಸಿಕೊಡಲಾಗಿದೆ. ಇದರಿಂದಾಗಿ, ಸಮಾಜದ ದುರ್ಬಲ ವರ್ಗವನ್ನು ಶೋಷಿಸಿ ತಮಗೆ ಲಾಭ ಮಾಡಿಕೊಳ್ಳುತ್ತಿದ್ದ ದುಷ್ಟ ಜಾಲಗಲಿಗೆ ಬಹಳಷ್ಟು ನಷ್ಟ ಉಂಟಾಗಿದೆ ಎಂದರೆ ತಪ್ಪಾಗಲಾರದು.

ಸಾಮಾಜಿಕ ಶೋಷಣೆಗೆ ತಡೆ

ಕರಾವಳಿ ಮತ್ತು ಗ್ರಾಮೀಣ ಜಿಲ್ಲೆಗಳಲ್ಲಿ 60%ಕ್ಕಿಂತ ಹೆಚ್ಚು ಬಡ್ಡಿಯೊಂದಿಗೆ ಸಾಲ ನೀಡುತ್ತಿದ್ದ ಶೋಷಕ ಸಾಲಗಾರರಿಗೆ SKDRDP ಕೂಡ ಮಾಡುವ 12% ವಾರ್ಷಿಕ ಬಡ್ಡಿಯ ಸೂಕ್ಷ್ಮ ಸಾಲವು ನುಂಗಲಾದ ತುತ್ತಾಗಿ ಪರಿಣಮಿಸಿತು. ಇದರಿಂದ ಅದೆಷ್ಟೋ ಬಡ ಕುಟುಂಬಗಳು ಸಾಲ ಮುಕ್ತವಾಗಿ ನೆಮ್ಮದಿಯ ಜೀವನ ನಡೆಸುವಂತಾಯಿತು. ಆದರೆ, ಬಡವರ ರಕ್ತ ಹೀರುತ್ತಿದ್ದ ಸಾಲಗಾರರ ಆದಾಯದ ಮೂಲಕ್ಕೆ ಇದರಿಂದ ಹೊಡೆತ ಬಿತ್ತು. ಜನ ಜಾಗೃತಿ ವೇದಿಕೆಯ ಮೂಲಕ 1.3 ಲಕ್ಷಕ್ಕೂ ಹೆಚ್ಚು ಜನ ಮದ್ಯವರ್ಜನ ಶಿಬಿರದ ಮೂಲಕ ಮದ್ಯವ್ಯಸನವನ್ನು ತೊರೆದು, ವ್ಯಸನ ಮುಕ್ತ ಬದುಕನ್ನು ಕಟ್ಟಿಕೊಂಡಿದ್ದಾರೆ. ನವಜೀವನ ಸಮಿತಿಗಳ ಮೂಲಕ ಅವರೆಲ್ಲರೂ ಚಟ ಮುಕ್ತರಾಗಿ ಬದುಕುತ್ತಿದ್ದಾರೆ. ಇದರಿಂದ ಮದ್ಯದ ಮಾರಾಟ ಕಡಿಮೆಯಾಗಿ, ಮದ್ಯ ಸಿಂಡಿಕೇಟ್‌ಗಳಿಗೆ ಸಿಗುತ್ತಿದ್ದ ಲಾಭದಲ್ಲಿಈಗ ನಷ್ಟವಾಗಿದೆ.

ಈ ಸುದ್ದಿಯನ್ನೂ ಓದಿ: Dharmasthala Case: ಇಲ್ಲಿವರೆಗೂ ಬರೀ ಗುಂಡಿ ತೋಡಿದ್ದಾರೆ, ಆಟ ಈಗ ಶುರು: ಕಿರಿಕ್‌ ಕೀರ್ತಿ

ವ್ಯಾಪಕ ಸೇವೆ

ಧರ್ಮಸ್ಥಳದ ಧರ್ಮಾನುಸಾರದ ಕಾರ್ಯಕ್ರಮಗಳಾದ ಉಚಿತ ಆರೋಗ್ಯ ಸೇವೆ, ಸಾಮೂಹಿಕ ವಿವಾಹ, ಗ್ರಾಮೀಣ ಶಿಕ್ಷಣದಂತಹ ಕಾರ್ಯಗಳು ಸಮುದಾಯಗಳನ್ನು ಸ್ವಾವಲಂಬಿಗಳಾಗಿಸಿವೆ. ಇದರಿಂದ ಮತಾಂತರ ಜಾಲಗಳಿಗೆ ಆರ್ಥಿಕ ಮತ್ತು ಪ್ರಭಾವದ ಕೊರತೆ ಉಂಟಾಗಿದೆ. 60 ಲಕ್ಷ ಸ್ವಯಂ-ಸಹಾಯ ಗುಂಪಿನ ಸದಸ್ಯರು, 110 ಕೋಟಿ ರೂ. ವಿತರಿಸಿದ ಪಿಂಚಣಿ, ಮತ್ತು 37.85 ಕೋಟಿ ರೂ. ಡೈರಿ ಸಹಕಾರಿಗಳಿಗೆ ನೀಡಿದ ಸಹಾಯವು 23 ಲಕ್ಷಕ್ಕೂ ಹೆಚ್ಚು ಜನರನ್ನು ಬಡತನದಿಂದ ಮೇಲೆತ್ತಿದೆ.

ಒಳಸಂಚಿನ ಶಂಕೆ

ಸಾಲಗಾರರು, ಮದ್ಯ ಸಿಂಡಿಕೇಟ್‌ಗಳು, ಮತ್ತು ಮತಾಂತರ ಲಾಬಿಗಳು ಒಗ್ಗೂಡಿ, ಧರ್ಮಸ್ಥಳದ ಖ್ಯಾತಿಗೆ ಕಳಂಕ ತರಲು ಈ ಆರೋಪವನ್ನು ಮಾಡುತ್ತಿವೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಈ ಮಾಧ್ಯಮದ ಕತೆಯು ತಪ್ಪು ಬಿಂಬಿಸುವ ಯೋಜಿತ ಕುತಂತ್ರವಾಗಿದೆ ಎಂದು ಟೀಕಿಸಲಾಗಿದೆ