ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಧಾರವಾಡದಲ್ಲಿ ಕಿಡ್ನ್ಯಾಪ್‌ ಆಗಿದ್ದ ಇಬ್ಬರು ಮಕ್ಕಳು ದಾಂಡೇಲಿಯಲ್ಲಿ ಪತ್ತೆ; ಬೈಕ್​​ನಲ್ಲೇ ಕೂರಿಸಿಕೊಂಡು ಪರಾರಿಯಾಗಿದ್ದ ಕಳ್ಳ!

Dharwad children Kidnap case: ಪೊಲೀಸರು ಹುಡುಕಾಟದಲ್ಲಿದ್ದಾಗ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿ ಆರೋಪಿಯ ಬೈಕ್ ಅಪಘಾತವಾಗಿತ್ತು. ಬೈಕ್ ಮೇಲೆ ಒಬ್ಬ ವ್ಯಕ್ತಿ ಹಾಗೂ ಇಬ್ಬರು ಮಕ್ಕಳಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದೇ ವೇಳೆ ದಾಂಡೇಲಿ ಪೊಲೀಸರು ವ್ಯಕ್ತಿಯ ವಿಚಾರಣೆ ನಡೆಸಿದಾಗ ಆತ ಧಾರವಾಡದವನು ಎನ್ನುವುದು ಖಚಿತವಾಗಿದೆ. ಈ ವೇಳೆ ಆರೋಪಿಯನ್ನು ಬಂಧಿಸಿ, ಮಕ್ಕಳನ್ನು ರಕ್ಷಿಸಲಾಗಿದೆ.

ಧಾರವಾಡದಲ್ಲಿ ಕಿಡ್ನ್ಯಾಪ್‌ ಆಗಿದ್ದ ಇಬ್ಬರು ಮಕ್ಕಳು ದಾಂಡೇಲಿಯಲ್ಲಿ ಪತ್ತೆ!

ಧಾರವಾಡದಲ್ಲಿ ಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ಯುತ್ತಿರುವ ಆರೋಪಿ. -

Prabhakara R
Prabhakara R Jan 12, 2026 10:46 PM

ಧಾರವಾಡ: ಧಾರವಾಡದ ಕಮಲಾಪುರ ಶಾಲೆಯಿಂದ ಕಿಡ್ನ್ಯಾಪ್‌ ಆಗಿದ್ದ ಇಬ್ಬರು ಮಕ್ಕಳು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪ ಪತ್ತೆಯಾಗಿದ್ದು, ಅವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಮಕ್ಕಳು ಶಾಲೆಯಲ್ಲಿ ಮಧ್ಯಾಹ್ನದ ಊಟದ ನಂತರ ನಾಪತ್ತೆಯಾಗಿದ್ದರು. ಈ ಬಗ್ಗೆ ಪೋಷಕರಿಗೆ ಶಿಕ್ಷಕರು ಫೋನ್‌ ಮಾಡಿ ವಿಚಾರಿಸಿದಾಗ ಮನೆಗೂ ಹೋಗಿಲ್ಲ ಎನ್ನುವುದು ಗೊತ್ತಾಗಿತ್ತು. ನಂತರ ಶಾಲೆ ಬಳಿಯ ಸಿಸಿಟಿವಿ ಕ್ಯಾಮೆರಾ ದೃಶ್ಯ ಚೆಕ್‌ ಮಾಡಿದಾಗ, ಇಬ್ಬರು ಮಕ್ಕಳನ್ನು ಓರ್ವ ವ್ಯಕ್ತಿ ತನ್ನ ಬೈಕ್ ಮೇಲೆ ಕರೆದೊಯ್ದಿರುವುದು ಗೊತ್ತಾಗಿತ್ತು.

ಲಕ್ಷ್ಮೀ ಕರೆಯಪ್ಪನವರ್ ಹಾಗೂ ಅನ್ವರ್ ದೊಡ್ಡಮನಿ ರಕ್ಷಿಸಲ್ಪಟ್ಟ ಮಕ್ಕಳು. ಆಸ್ಮಿನಗರದ ಅಬ್ದುಲ್‌ ಕರೀಮ್‌ ಮೇಸ್ತಿ ಬಂಧಿತ ಆರೋಪಿಯಾಗಿದ್ದಾನೆ. ಇಬ್ಬರು ಮಕ್ಕಳು ಧಾರವಾಡದ ಕಮಲಾಪುರ ಬಡಾವಣೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದರು. ಎಂದಿನಂತೆ ಸೋಮವಾರ ಶಾಲೆಗೆ ಹೋಗಿದ್ದರು. ಮಧ್ಯಾಹ್ನ ಬಿಸಿಯೂಟ ಸೇವಿಸಿ ಹೊರಗೆ ಬಂದಾಗ ಶಾಲೆ ಬಳಿ ಆರೋಪಿ ಅಬ್ದುಲ್‌ ಕರೀಮ್‌ ಮೇಸ್ತಿ ಬಂದಿದ್ದ. ಉಳವಿ ಬಸಪ್ಪ ದೇವಸ್ಥಾನದ ಜಾತ್ರೆಗೆ ಹೋಗೋಣ ಬರುತ್ತೀಯಾ ಎಂದು ಮಕ್ಕಳನ್ನು ಆರೋಪಿ ಕೇಳಿದ್ದಾನೆ. ಈ ವೇಳೆ ಬಾಲಕ ಅನ್ವರ್ ಬರುತ್ತೇನೆ‌ ಅಂತ ಹೇಳಿದಾಗ, ಪಕ್ಕದಲ್ಲಿಯೇ ಇದ್ದ ಲಕ್ಷ್ಮೀಯನ್ನು ಕರೆದುಕೊಂಡು ಹೋಗಿದ್ದಾನೆ.

ಇಬ್ಬರು ಮಕ್ಕಳನ್ನು ಬೈಕ್‌ ಮೇಲೆ ಹತ್ತಿಸಿಕೊಂಡ ಆರೋಪಿ, ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆ ಪೊಲೀಸರು ಎಲ್ಲಾ ಕಡೆ ಮಾಹಿತಿ ರವಾನಿಸಿ, ಹುಡುಕಾಟ ಆರಂಭಿಸಿದ್ದರು. ಮಕ್ಕಳು ಪೋಷಕರಲ್ಲಿ ಆತಂಕ ಉಂಟಾಗಿತ್ತು.

ಮೊಟ್ಟೆ ಕರಿ ಮಾಡದ್ದಕ್ಕೆ ಪತ್ನಿಯೊಂದಿಗೆ ಜಗಳ; ಅವಮಾನಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಪತಿ

ಮಕ್ಕಳು ಪತ್ತೆಯಾಗಿದ್ದು ಹೇಗೆ?

ಪೊಲೀಸರು ಮಕ್ಕಳಿಗಾಗಿ ಹುಡುಕಾಟದಲ್ಲಿದ್ದಾಗ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿ ಬೈಕ್ ಒಂದು ಅಪಘಾತಕ್ಕೀಡಾಗಿತ್ತು. ಬೈಕ್ ಮೇಲೆ ಒಬ್ಬ ವ್ಯಕ್ತಿ ಹಾಗೂ ಇಬ್ಬರು ಮಕ್ಕಳಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದೇ ವೇಳೆ ದಾಂಡೇಲಿ ಪೊಲೀಸರು ವ್ಯಕ್ತಿಯ ವಿಚಾರಣೆ ನಡೆಸಿದಾಗ ಆತ ಧಾರವಾಡ ನಗರದ ಅಬ್ದುಲ್ ಕರೀಂ ಮೇಸ್ತ್ರಿ ಎನ್ನುವುದು ಖಚಿತವಾಗಿದೆ. ಈ ವೇಳೆ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಅಪಘಾತದಲ್ಲಿ ಆರೋಪಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.