ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dharwad Accident: ಧಾರವಾಡದಲ್ಲಿ ದಾರುಣ ಘಟನೆ; ಶಾಲಾ ಬಸ್‌ ಹರಿದು 2 ವರ್ಷದ ಮಗು ಸಾವು

ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲಾ ವಾಹನ ಹುಲ್ಲಿಕೇರಿ ಗ್ರಾಮಕ್ಕೆ ಬಂದಿತ್ತು. ಈ ವೇಳೆ ರಸ್ತೆ ಬದಿ ನಿಂತಿದ್ದ ಮಗು ಮೇಲೆ ಶಾಲಾ ಬಸ್‌ ಹರಿದು ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಧಾರವಾಡದಲ್ಲಿ ದಾರುಣ ಘಟನೆ; ಶಾಲಾ ಬಸ್‌ ಹರಿದು 2 ವರ್ಷದ ಮಗು ಸಾವು

-

Prabhakara R
Prabhakara R Aug 11, 2026 7:41 PM

ಧಾರವಾಡ: ಶಾಲಾ ಬಸ್‌ ಹರಿದು ಎರಡು ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ ನಡೆದಿದೆ. ಮೃತ ಮಗುವನ್ನು ಹುಲ್ಲಿಕೇರಿ ಗ್ರಾಮದ ಲುಕ್ಮಾನ್ ಬೋಗೂರ (2) ಎಂದು ಗುರುತಿಸಲಾಗಿದೆ.

ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲಾ ವಾಹನ ಹುಲ್ಲಿಕೇರಿ ಗ್ರಾಮಕ್ಕೆ ಮಂಗಳವಾರ ಬಂದಿತ್ತು. ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಲುಕ್ಮಾನ್ ಮೇಲೆ ವಾಹನ ಹರಿದು ಹೋಗಿದೆ ಎನ್ನಲಾಗಿದೆ. ಘಟನೆಯಲ್ಲಿ ಮಗುವಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ವಸತಿ ಶಾಲೆಯಲ್ಲಿ ಏಕಾಏಕಿ ಕುಸಿದು ಬಿದ್ದು 8ನೇ ತರಗತಿ ವಿದ್ಯಾರ್ಥಿನಿ ಸಾವು

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಮಾಚೇನಹಳ್ಳಿಯಲ್ಲಿರುವ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಬಾಲಕಿಯನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಣ್ಣಪ್ಪನಹಟ್ಟಿ ಗ್ರಾಮದ ನಿವಾಸಿ ಅಕ್ಷರ ಎಂದು ಗುರುತಿಸಲಾಗಿದೆ.

ಶಾಲೆಯಲ್ಲಿದ್ದಾಗ ಬಾಲಕಿಗೆ ಏಕಾಏಕಿ ತಲೆತಿರುಗಿದ್ದು, ಆಕೆ ತಕ್ಷಣವೇ ನೆಲಕ್ಕೆ ಕುಸಿದು ಬಿದ್ದಿದ್ದಾಳೆ. ಇದನ್ನು ಕಂಡ ಸಹಪಾಠಿ ವಿದ್ಯಾರ್ಥಿಗಳು ತಕ್ಷಣವೇ ಸ್ಪಂದಿಸಿ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಅಕ್ಷರ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದುಬಂದಿದೆ.

ಪತ್ನಿ ನಡತೆ ಬಗ್ಗೆ ಸಂಶಯ ಪಟ್ಟು ಮನೆಯಲ್ಲೇ ಜಿಲೆಟಿನ್ ಸ್ಫೋಟ; ತಂದೆ–ಮಗಳು ಬಲಿ, ನಾಲ್ವರಿಗೆ ಗಂಭೀರ ಗಾಯ!

ಕಳೆದ ಆಗಸ್ಟ್ 7 ರಂದಷ್ಟೇ ಪೋಷಕರು ಬಾಲಕಿಯನ್ನು ಈ ವಸತಿ ಶಾಲೆಗೆ ಸೇರಿಸಿ ಮನೆಗೆ ತೆರಳಿದ್ದರು. ಶಾಲೆಗೆ ಸೇರಿದ ಕೆಲವೇ ದಿನಗಳಲ್ಲಿ ಬಾಲಕಿ ಹಠಾತ್ತಾಗಿ ಸಾವನ್ನಪ್ಪಿರುವುದು ಆಕೆಯ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಈ ದುರಂತ ಘಟನೆಗೆ ಸಂಬಂಧಿಸಿದಂತೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.