ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raaka: ‘ಕಲ್ಕಿ’ ನಂತರ ಮತ್ತೊಮ್ಮೆ ತೆರೆಮೇಲೆ ಗರ್ಭಿಣಿಯಾದ ದೀಪಿಕಾ ಪಡುಕೋಣೆ; ಅಲ್ಲು ಅರ್ಜುನ್-ಅಟ್ಲಿ ಚಿತ್ರದಲ್ಲಿ ಜಾನ್ವಿ ‘ಬುಡಕಟ್ಟು ರಾಣಿ’!

ʻಐಕಾನ್ ಸ್ಟಾರ್ʼ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನ 'ರಾಕಾ' ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತೆ ಗರ್ಭಿಣಿ ಮಹಿಳೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ʻರಾಕಾʼ ಸಿನಿಮಾವು 2027ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂಬುದು ಚರ್ಚೆ ಆಗುತ್ತದೆ.

ಮತ್ತೊಮ್ಮೆ ಗರ್ಭಿಣಿ ಪಾತ್ರದಲ್ಲಿ ಮಿಂಚಲಿದ್ದಾರೆ ದೀಪಿಕಾ ಪಡುಕೋಣೆ!

-

Avinash GR
Avinash GR Aug 11, 2026 8:18 PM

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಗರ್ಭಿಣಿಯಾಗಿ ಕಾಣಿಸಿಕೊಂಡಿದ್ದ ನಟಿ ದೀಪಿಕಾ ಪಡುಕೋಣೆ, ಇದೀಗ ಮತ್ತೊಮ್ಮೆ ಅಂಥದ್ದೇ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನ ಬಹುನಿರೀಕ್ಷಿತ ಸೈನ್ಸ್-ಫಿಕ್ಷನ್ ಆಕ್ಷನ್ ಸಿನಿಮಾ 'ರಾಕಾ'ದಲ್ಲಿ ದೀಪಿಕಾ ಗರ್ಭಿಣಿ ಮಹಿಳೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಅಲ್ಲದೆ, ಈ ಬಹುತಾರಾಗಣದ ಚಿತ್ರದಲ್ಲಿ ಜಾನ್ವಿ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಮೃಣಾಲ್ ಠಾಕೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸದ್ಯ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ದೀಪಿಕಾ ಪಾತ್ರದ ವೈಶಿಷ್ಟ್ಯವೇನು?

ಚಿತ್ರತಂಡದ ಮೂಲಗಳ ಪ್ರಕಾರ, ದೀಪಿಕಾ ನಿರ್ವಹಿಸುತ್ತಿರುವ ಗರ್ಭಿಣಿ ಮಹಿಳೆಯ ಪಾತ್ರ ಹಾಗೂ ಆಕೆಯ ಬದುಕಿನ ಹೋರಾಟವು ಈ ಸಿನಿಮಾದ ಪ್ರಮುಖ ಭಾವನಾತ್ಮಕ ಎಳೆಯಾಗಿದೆ. ಪೌರಾಣಿಕ ವೈದಿಕ ಕಾಲದ ಹಿನ್ನೆಲೆಯಲ್ಲಿ ಮೂಡಿಬರಲಿರುವ ಈ ಪಾತ್ರದ ಭಾಗಗಳು ಕಥೆಗೆ ಹೊಸ ಆಯಾಮ ನೀಡಲಿವೆ. ಪ್ರಸ್ತುತ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ಅವರಿಗೆ ಈ ಗರ್ಭಿಣಿ ಲುಕ್ ಸ್ವಾಭಾವಿಕವಾಗಿ ಹೊಂದಿಕೆಯಾಗಿದ್ದು, ಈ ತಿಂಗಳಿನಲ್ಲೇ ಅವರು ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಲಿದ್ದಾರೆ.

Prabhas: ‘ಕಲ್ಕಿ 2’ ಅಡ್ಡದಿಂದ ದೀಪಿಕಾ ಪಡುಕೋಣೆ‌ ಔಟ್‌; ಸೈಲೆಂಟ್‌ ಆಗಿ ಅಖಾಡಕ್ಕಿಳಿದ ನಟಿ ಆಲಿಯಾ ಭಟ್!

'ರಾಕಾ' ಚಿತ್ರದಲ್ಲಿ ನಟಿಯರ ಪಾತ್ರಗಳು

'ರಾಕಾ' ಪ್ರಪಂಚದ ಮುಖ್ಯ ಆಧಾರಸ್ತಂಭಗಳಲ್ಲಿ ಒಂದಾದ 'ಬುಡಕಟ್ಟು ರಾಣಿ'ಯ ಪಾತ್ರದಲ್ಲಿ ಜಾನ್ವಿ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ಅವರ ಪಾತ್ರಕ್ಕೆ ಮಾರ್ಗದರ್ಶಕಿ ಮತ್ತು ರಕ್ಷಕಿಯಾಗಿ, ಅಪಾಯಕಾರಿ ಜಗತ್ತಿನಲ್ಲಿ ಅವರ ಉಳಿವಿಗಾಗಿ ಹೋರಾಡುವ ಬಲವಾದ ಪಾತ್ರದಲ್ಲಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಕಥೆಯ ಆಧುನಿಕ ಕಾಲಘಟ್ಟದಲ್ಲಿ ಅಲ್ಲು ಅರ್ಜುನ್ ಎದುರು ನಾಯಕಿಯಾಗಿ ಮೃಣಾಲ್ ಠಾಕೂರ್ ಮಿಂಚಲಿದ್ದಾರೆ.

ಮಹಿಳಾ ಪಾತ್ರಗಳಿಗೆ ಸಿಕ್ಕಿದೆ ಪ್ರಾಮುಖ್ಯತೆ

ರೆಗ್ಯುಲರ್‌ ಕಮರ್ಷಿಯಲ್ ಸಿನಿಮಾಗಳಂತೆ ನಾಯಕಿಯರ ಪಾತ್ರಗಳನ್ನು ಕೇವಲ ನಾಯಕನ ಸುತ್ತ ಸುತ್ತುವುದಕ್ಕಷ್ಟೇ ಸೀಮಿತಗೊಳಿಸದೆ, 'ರಾಕಾ' ಚಿತ್ರದಲ್ಲಿ ಮಹಿಳೆಯರ ಪಯಣ ಹಾಗೂ ಹೋರಾಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿಯೊಂದು ನಟಿಯ ಪಾತ್ರವೂ ಕಥೆಯ ಬೆಳವಣಿಗೆಗೆ ಗಟ್ಟಿ ಕೊಡುಗೆ ನೀಡಲಿದೆಯಂತೆ.

ಅಲ್ಲು ಅರ್ಜುನ್ ಬರ್ತ್‌ಡೇ ಧಮಾಕಾ: ನಿರ್ದೇಶಕ ಅಟ್ಲಿ ಜೊತೆಗಿನ ಹೊಸ ಚಿತ್ರಕ್ಕೆ 'ರಾಕಾ' ಟೈಟಲ್‌ ಫಿಕ್ಸ್!‌

ಅಲ್ಲು ಅರ್ಜುನ್ ಮತ್ತು ಅಟ್ಲಿ ಅವರ ಮೊದಲ ಕಾಂಬಿನೇಷನ್‌ನ ಈ ಮೆಗಾ ಪ್ರಾಜೆಕ್ಟ್‌ನ ಇನ್ನುಳಿದ ಕಲಾವಿದರ ಆಯ್ಕೆಯನ್ನು ಅಧಿಕೃತವಾಗಿ ಚಿತ್ರತಂಡ ಇನ್ನು ಘೋಷಿಸಬೇಕಿದ್ದರೂ, ಆಗಲೇ ಇಂಟರ್‌ನೆಟ್‌ನಲ್ಲಿ ಸುದ್ದಿಗಳು ಹರಿದಾಡುತ್ತಿವೆ. ʻರಾಕಾʼ ಸಿನಿಮಾವು 2027ರಲ್ಲಿ ತೆರೆಗೆ ಬರಲಿದೆ.