ಕಾಟನಹಳ್ಳಿಯಲ್ಲಿ ಆಕಸ್ಮಿಕ ಅಗ್ನಿ ಅವಘಡ; ಪರಿಹಾರಕ್ಕೆ ರೈತ ಸಂಘ ಆಗ್ರಹ
ಕಟಾವಿನ ಬಳಿಕ ರಾಶಿ ಮಾಡಿಟ್ಟಿದ್ದ ಗೋವಿನ ಜೋಳದ ಬೆಳೆ ಆಕಸ್ಮಿಕ ಬೆಂಕಿಗೆ ಆಹುತಿಯಾಗಿ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಹಾವೇರಿ ತಾಲೂಕಿನ ಕಾಟನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಗ್ರಾಮದ ರೈತ ಈರಪ್ಪ ಬಸಪ್ಪ ಕದಮಂಡಗಿ ಅವರಿಗೆ ಸೇರಿದ ಗೋವಿನ ಜೋಳದ ರಾಶಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಸುಮಾರು 3 ಎಕರೆ ಪ್ರದೇಶದ ಬೆಳೆಯು ಸುಟ್ಟು ಕರಕಲಾಗಿದೆ. ಘಟನೆಯಿಂದ ಅಂದಾಜು ₹2.80 ಲಕ್ಷ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ತಿಳಿದು ಬಂದಿದೆ.
-
ಹಾವೇರಿ: ಕಟಾವಿನ ಬಳಿಕ ರಾಶಿ ಮಾಡಿಟ್ಟಿದ್ದ ಗೋವಿನ ಜೋಳದ ಬೆಳೆ ಆಕಸ್ಮಿಕ ಬೆಂಕಿಗೆ ಆಹುತಿಯಾಗಿ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಹಾವೇರಿ ತಾಲೂಕಿನ ಕಾಟನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಗ್ರಾಮದ ರೈತ ಈರಪ್ಪ ಬಸಪ್ಪ ಕದಮಂಡಗಿ ಅವರಿಗೆ ಸೇರಿದ ಗೋವಿನ ಜೋಳದ ರಾಶಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಸುಮಾರು 3 ಎಕರೆ ಪ್ರದೇಶದ ಬೆಳೆಯು ಸುಟ್ಟು ಕರಕಲಾಗಿದೆ. ಘಟನೆಯಿಂದ ಅಂದಾಜು ₹2.80 ಲಕ್ಷ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Haveri News: ಪ.ಪದವೀಧರ ಕ್ಷೇತ್ರದ ಕೈ ಗೆಲುವು ಖಚಿತ: ಉಸ್ತುವಾರಿ ಮಿನಿಸ್ಟರ್ ಆರ್.ಲಮಾಣಿ
ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತನಿಗೆ ಸರ್ಕಾರ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘದ ಅಧ್ಯಕ್ಷ ಅನಿಲ್ ಡೊಳ್ಳಿನ ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಬೆಳೆಯನ್ನು ಪರಿಶೀಲಿಸಿದ ಅವರು, ರೈತರು ವರ್ಷವಿಡೀ ಶ್ರಮಪಟ್ಟು ಬೆಳೆದ ಬೆಳೆ ಕಣ್ಣೆದುರೇ ಬೆಂಕಿಗೆ ಆಹುತಿಯಾಗಿರುವುದು ನೋವಿನ ಸಂಗತಿ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ರೈತನ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಪ್ರಕಾಶ ಗಾಣಿಗೇರ, ವಿರುಪಭದ್ರಪ್ಪ ಬುತ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.