ಹಾವೇರಿಯ ಗುತ್ತಲ ವ್ಯಾಪ್ತಿಯಲ್ಲಿ ಅಕ್ರಮ ಮರಳು ಅಡ್ಡೆ ಮೇಲೆ ಅಧಿಕಾರಿಗಳ ದಾಳಿ: ಪ್ರಕರಣ ದಾಖಲು
Haveri News: ಹಾವೇರಿ ತಾಲೂಕಿನ ಗುತ್ತಲ ವ್ಯಾಪ್ತಿಯಲ್ಲಿ ಹರಿಯುವ ತುಂಗಭದ್ರಾ ತೀರದಲ್ಲಿ ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿರುವ ಹಾವೇರಿಯ ಗಣಿ ಮತ್ತು ಭೂ ವಿಜ್ಞಾನ ಹಿರಿಯ ಅಧಿಕಾರಿಗಳು, 80 ಟನ್ ಮರಳು ಹಾಗೂ ಎರಡು ತೆಪ್ಪಗಳು ಸೇರಿದಂತೆ ಲಾರಿಗಳನ್ನು ವಶಪಡಿಸಿಕೊಂಡಿರುವ ಘಟನೆ ಜರುಗಿದೆ.
ಹಾವೇರಿ ತಾಲೂಕಿನ ಗುತ್ತಲ ವ್ಯಾಪ್ತಿಯಲ್ಲಿ ಆಕ್ರಮ ಮರಳು ಅಡ್ಡೆ ಮೇಲೆ ಅಧಿಕಾರಿಗಳ ದಾಳಿ. -
ಹಾವೇರಿ, ಜೂ.30: ತಾಲೂಕಿನ ಗುತ್ತಲ ವ್ಯಾಪ್ತಿಯಲ್ಲಿ ಹರಿಯುವ ತುಂಗಭದ್ರಾ ತೀರದಲ್ಲಿ ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿರುವ ಹಾವೇರಿಯ (Haveri News) ಗಣಿ ಮತ್ತು ಭೂ ವಿಜ್ಞಾನ ಹಿರಿಯ ಅಧಿಕಾರಿಗಳು, 80 ಟನ್ ಮರಳು ಹಾಗೂ ಎರಡು ತೆಪ್ಪಗಳು ಸೇರಿದಂತೆ ಲಾರಿಗಳನ್ನು ವಶಪಡಿಸಿಕೊಂಡಿರುವ ಘಟನೆ ಜರುಗಿದೆ.
ಗುತ್ತಲ ವ್ಯಾಪ್ತಿಯ ತುಂಗಭದ್ರಾ ನದಿ ದಡದ ಗ್ರಾಮಗಳಾದ ಹರಳಹಳ್ಳಿ, ಹಾವನೂರು, ಚೌಡದಾನಪುರ, ಮೇವುಂಡಿ, ಹಾಂಶಿ, ಶಾಕಹಾರ, ಗಳಗನಾಥಗಳ ಪ್ರದೇಶದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ಕುರಿತು ವಿಶ್ವವಾಣಿ ಪತ್ರಿಕೆ ಸರಣಿ ಸುದ್ದಿಗಳನ್ನು ನೈಜವಾದ ವರದಿ ಪ್ರಕಟಿಸಿದ ಬೆನ್ನಲ್ಲೇ ಹಾವೇರಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕಂದಾಯ ಇಲಾಖೆ, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸೋಮವಾರ ಮತ್ತು ಮಂಗಳವಾರ ಸತತ ಗಸ್ತು ನಡೆಸಿ ಮರಳು ಎತ್ತಲು ಬಳಸುತ್ತಿದ್ದ ಅಂದಾಜು 1ಲಕ್ಷ 20 ಸಾವಿರ ಮೌಲ್ಯದ ಎರಡು ತೆಪ್ಪಗಳನ್ನು ವಶಕ್ಕೆ ಪಡೆದು ನಾಶ ಪಡೆಸಿದ್ದಾರೆ. ಇದರೊಂದಿಗೆ ಸುಮಾರು 68 ಸಾವಿರ ಮೌಲ್ಯದ 80 ಟನ್ ಮರಳು ವಶಕ್ಕೆ ಪಡೆದುಕೊಂಡಿದ್ದಾರೆ.
ಮರಳು ದಂಧೆ ಸಹಕರಿಸಿದ ಜಮೀನು ಮಾಲೀಕರ ಮೇಲೆ ಹಾಗೂ ಮರಳು ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಹರಳಹಳ್ಳಿಯ ಮಾರುತಿ ಆಂಜನಪ್ಪ ಕೋಟೆಪ್ಪ ಅವರ ಮೇಲೆ ಗುತ್ತಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಳಿಯ ವೇಳೆ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಅಕ್ರಮ ಸಂಬಂಧದ ಕುರಿತು ಪ್ರಶ್ನಿಸಿದ ಪತ್ನಿಯನ್ನೇ ರಾಡ್‌ನಿಂದ ಹೊಡೆದು ಕೊಂದ ಪತಿ
ಖಚಿತ ಮಾಹಿತಿಯೊಂದಿಗೆ ದಾಳಿ ಕೈಗೊಂಡು ಯಾವುದೇ ಪರವಾನಗಿ ಇಲ್ಲದೇ ನದಿಯಲ್ಲಿನ ಮರಳು ಕಳ್ಳತನ ಮಾಡುತ್ತಿದ್ದವರ ಪತ್ತೆ ನಡೆಸಿ ಅಪಾರ ಪ್ರಮಾಣದ ಮರಳು ಹಾಗೂ ಮರಳು ಎತ್ತಲು ಬಳಸುತ್ತಿದ್ದ ಎರಡು ತೆಪ್ಪವನ್ನು ವಶಕ್ಕೆ ಪಡೆದು ಜಖಂ ಮಾಡಲಾಗಿದೆ. ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಶಬ್ಬಿರ ದಿಡಗೂರ, ಗುತ್ತಲ ಪೊಲೀಸ್ ಠಾಣೆಯ ಪಿಎಸ್ಐ ಲಮಾಣಿ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.