ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಎ ಪರೀಕ್ಷೆ ಟಾಪರ್ ಕಳ್ಳಾಟ ಬಯಲು: ಗೂಗಲ್ ಲೆನ್ಸ್ ಬಳಸಿ ನಕಲು ಮಾಡಿದ್ದ ಹಾವೇರಿ ಅಭ್ಯರ್ಥಿ ಬಂಧನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ 151.25 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಹಾವೇರಿ ಜಿಲ್ಲೆ ಹಾನಗಲ್ ಮೂಲದ ಅಭ್ಯರ್ಥಿ ಶಂಕರ್ ಬನ್ನೂರು ಅವರ ಕಳ್ಳಾಟ ಸಿಸಿಟಿವಿ ತನಿಖೆಯಿಂದ ಬಯಲಾಗಿದೆ.

ವಿಎ ಪರೀಕ್ಷೆ ಟಾಪರ್ ಕಳ್ಳಾಟ ಬಯಲು: ಹಾವೇರಿ ಅಭ್ಯರ್ಥಿ ಬಂಧನ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 1, 2026 1:27 PM

ಹಾವೇರಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ 151.25 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಹಾವೇರಿ ಜಿಲ್ಲೆ ಹಾನಗಲ್ ಮೂಲದ ಅಭ್ಯರ್ಥಿ ಶಂಕರ್ ಬನ್ನೂರು ಅವರ ಕಳ್ಳಾಟ ಸಿಸಿಟಿವಿ ತನಿಖೆಯಿಂದ ಬಯಲಾಗಿದೆ. ಶಂಕರ್ ಬನ್ನೂರು ಕೇವಲ 15 ದಿನಗಳ ಹಿಂದಷ್ಟೇ ನಡೆದಿದ್ದ ಕೆಎಸ್ಆರ್‌ಪಿ (KSRP) ಕಾನ್‌ಸ್ಟೆಬಲ್ ಪರೀಕ್ಷೆಯಲ್ಲಿ 100ಕ್ಕೆ ಕೇವಲ 25 ಅಂಕಗಳನ್ನು ಪಡೆದಿದ್ದರು. ಆದರೆ ಅದಾದ ಕೆಲವೇ ದಿನಗಳಲ್ಲಿ ನಡೆದ ವಿಎಒ ಪರೀಕ್ಷೆಯಲ್ಲಿ 200ಕ್ಕೆ 151.25 ಅಂಕ ಗಳಿಸಿ ಟಾಪರ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.

ಕೆಇಎ ಆದೇಶದಂತೆ ಹಾವೇರಿ ಜಿಲ್ಲಾಧಿಕಾರಿ ನಡೆಸಿದ ತನಿಖೆಯಲ್ಲಿ ಶಂಕರ್, ಮೊಬೈಲ್ ಬಳಸಿ ಪರೀಕ್ಷೆ ಬರೆದಿರುವುದು ಪತ್ತೆಯಾಗಿದ್ದು, ಹಾನಗಲ್ ಪೊಲೀಸರು ಶಂಕರ್ ನನ್ನು ವಶಕ್ಕೆ ಪಡೆದು ಶಿಗ್ಗಾಂವಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಪರೀಕ್ಷಾ ಕೇಂದ್ರದ ಕೊಠಡಿಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದ ಶಂಕರ್, ಗೂಗಲ್ ಲೆನ್ಸ್ ಆ್ಯಪ್ ಮೂಲಕ ಪ್ರಶ್ನೆ ಪ್ರಶ್ನೆ ಪತ್ರಿಕೆ ಸ್ಕ್ಯಾನ್ ಮಾಡಿ ಉತ್ತರ ಬರೆದಿದ್ದ. ಈ ದೃಶ್ಯ ಸಿಸಿಟಿವ್ಹಿಯಲ್ಲಿ ಕ್ಯಾಮರಾ ಸೆರೆಯಾಗಿದೆ. ಇದೇದೇ ಸಾಕ್ಷಿಯನ್ನ ಆಧಾರಿಸಿ ಪೊಲೀಸರು, ಶಂಕರನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

ಪರೀಕ್ಷಾ ಕೇಂದ್ರದ ಒಳಗೆ ಹೋಗುವಾಗ ಆಧಾರ್ ಕಾರ್ಡ್ ಮಾತ್ರ ಕೇಳಿದರು. ಅದನ್ನ ತೋರಿಸಿ ಮೊಬೈಲ್ ಸಮೇತ ಕೊಠಡಿ ಒಳಗೆ ಹೋದೆ. ಕೊಠಡಿ ಕೊನೆಯ‌ ಡೆಸ್ಕ್ ನಲ್ಲಿ ನನ್ನ ನಂಬರ್ ಇತ್ತು. ಗೂಗಲ್ ಸಹಾಯದ ಒಎಂಆರ್ ಭರ್ತಿ ಮಾಡಿದೆ. ಯಾರು‌ ಗಮನಿಸಲಿಲ್ಲ ಎಂದು ವಿಚಾರಣೆ ವೇಳೆ ಆತ ಹೇಳಿದ್ದಾನೆ. ಬಂಧನಕ್ಕೊಳಗಾಗುವ ಮೊದಲು, ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಅಂಕಗಳ ಬಗ್ಗೆ ಅನುಮಾನಗಳು ವ್ಯಕ್ತವಾದಾಗ ಆರೋಪಿ ಶಂಕರ್ ಬನ್ನೂರು ಮಾಧ್ಯಮಗಳ ಮುಂದೆ ತಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದೇನೆ ಎಂದು ಹೇಳಿಕೊಂಡಿದ್ದ.

14ನೇ ಜೆಪಿಎಸ್‌ಸಿ ಪರೀಕ್ಷೆ ರದ್ದು? ನೀಟ್ ಬಳಿಕ ಮತ್ತೊಂದು ವಿವಾದ ಎಬ್ಬಿಸಿದ ಜಾರ್ಖಂಡ್ ನಾಗರಿಕ ಸೇವಾ ಪರೀಕ್ಷೆ

ಕೆಎಸ್ಆರ್‌ಪಿ ಕಾನ್‌ಸ್ಟೆಬಲ್ ಪರೀಕ್ಷೆಗೂ ಮುನ್ನ ತನ್ನ ತಮ್ಮನಿಗೆ ಅಪಘಾತವಾಗಿದ್ದರಿಂದ ಮಾನಸಿಕವಾಗಿ ಬೇಸರಗೊಂಡು ಆ ಪರೀಕ್ಷೆಯನ್ನು ಸರಿಯಾಗಿ ಬರೆಯಲು ಸಾಧ್ಯವಾಗದೆ 25 ಅಂಕ ಬಂದಿತ್ತು. ಆದರೆ ವಿಎಒ ಪರೀಕ್ಷೆಯನ್ನು ಚೆನ್ನಾಗಿ ಓದಿ ಬರೆದಿದ್ದೆ ಎಂದು ತನ್ನ ಅಂಕಗಳ ವ್ಯತ್ಯಾಸಕ್ಕೆ ಸುಳ್ಳು ಕಥೆ ಕಟ್ಟಿ ಸಮರ್ಥಿಸಿಕೊಂಡಿದ್ದ.