ವಿಕಾಸ ಅಹರ್ನಿಶಿ ಸ್ವಯಂಚಾಲಿತ ಲಾಕರ್ ಲೋಕಾರ್ಪಣೆ
ನಗರದ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಕೇಂದ್ರ ಕಛೇರಿ ಕಟ್ಟಡದಲ್ಲಿ ಜಪಾನ್ ತಂತ್ರಜ್ಞಾನ ಬಳಸಿ ಗೋದ್ರೇಜ್ ಕಂಪನಿ ನಿರ್ಮಿಸಿದ ವಿಕಾಸ ಅಹರ್ನಿಶಿ ಲಾಕರ್ ಸ್ವಯಂಚಾಲಿತವನ್ನು ಕೊಪ್ಪಳದ ಗವಿಶ್ರೀಗಳಿಂದ ಲೋಕಾರ್ಪಣೆಗೊಳಿಸಿದರು. ವರ್ಷದ 365 ದಿನವೂ, ನಿರಂತರ 24 ಗಂಟೆಯೂ ಬಳಸಬಹುದಾದ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಸ್ವಯಂಚಾಲಿತ ವಿಕಾಸ ಅಹರ್ನಿಶಿ ಲಾಕರ್ ಉದ್ಘಾಟಿಸಲಾಯಿತು.
-
ಹೊಸಪೇಟೆ: ನಗರದ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಕೇಂದ್ರ ಕಛೇರಿ ಕಟ್ಟಡದಲ್ಲಿ ಜಪಾನ್ ತಂತ್ರಜ್ಞಾನ ಬಳಸಿ ಗೋದ್ರೇಜ್ ಕಂಪನಿ ನಿರ್ಮಿಸಿದ ವಿಕಾಸ ಅಹರ್ನಿಶಿ ಲಾಕರ್ ಸ್ವಯಂಚಾಲಿತವನ್ನು ಕೊಪ್ಪಳದ ಗವಿಶ್ರೀಗಳಿಂದ ಲೋಕಾರ್ಪಣೆಗೊಳಿಸಿದರು.
ವರ್ಷದ 365 ದಿನವೂ, ನಿರಂತರ 24 ಗಂಟೆಯೂ ಬಳಸಬಹುದಾದ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಸ್ವಯಂಚಾಲಿತ ವಿಕಾಸ ಅಹರ್ನಿಶಿ ಲಾಕರ್ ಉದ್ಘಾಟಿಸಲಾಯಿತು.
ಇದನ್ನೂ ಓದಿ: Hospet News: ಶ್ರೀಮಧ್ವಾಚಾರ್ಯ ಜಯಂತಿ ಆಚರಣೆ
ಸಮಾರಂಭದಲ್ಲಿ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಶ್ರೀ ಮ. ನಿ. ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಬಯಿ ಗೋದ್ರೇಜ್ ಅಂಡ್ ಬಾಯ್ಸ್ ಮಾರ್ಕೆಟಿಂಗ್ ಅಂಡ್ ಸೇಲ್ಸ್
ಅಸಿಸ್ಟೆಂಟ್ ವೈಸ್-ಪ್ರೆಸಿಡೆಂಟ್ ಪರ್ಸಿ ಮಾಸ್ಟರ್, ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ. ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ ಉಪಸ್ಥಿತರಿದ್ದರು.