ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜೀರಿಗೆ ನೀರು ಅಥವಾ ಮೆಂತ್ಯ ನೀರು: ಬೊಜ್ಜು ಕರಗಿಸಲು ಯಾವುದು ಉತ್ತಮ?

Health Tips: ಹೊಟ್ಟೆಯ ಬೊಜ್ಜು ಅನ್ನೋದು ಹೆಚ್ಚಿನವರಿಗೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಹೀಗಾಗಿ ಇದನ್ನು ಪರಿಹರಿಸಲು ಯುವಕ- ಯುವತಿಯರು ನಾನಾ ರೀತಿಯ ಸಾಹಸವನ್ನು ಮಾಡುತ್ತಲೇ ಇರುತ್ತಾರೆ. ಜಿಮ್ ,ವರ್ಕೌಟ್ ಎಂದು ದಿನನಿತ್ಯ ಹೋರಾಡಿದರೂ ಬೊಜ್ಜು ನಿವಾರಣೆಯಾಗುತ್ತಿಲ್ಲ.ಆದರೆ ಇಷ್ಟೆಲ್ಲ ಕಷ್ಟ ಪಡುವ ಬದಲು ನೈಸರ್ಗಿಕ ಮನೆ ಮದ್ದುಗಳನ್ನು ಬಳಸುವ ಮೂಲಕ ಇದಕ್ಕೆ ಪರಿಹಾರ ಪಡೆಯಬಹುದು. ಬೆಳಗ್ಗಿನ ಸಮಯದಲ್ಲಿ ಖಾಲಿ ಹೊಟ್ಟೆಗೆ ಮೆಂತ್ಯೆ ನೀರು ಅಥವಾ ಜೀರಿಗೆ ನೀರು ಕುಡಿಯ‌ ಬಹುದು‌. ಆದರೆ ಇವೆರಡರಲ್ಲಿ ಯಾವುದು ಹೆಚ್ಚು ವೇಗವಾಗಿ ಕೆಲಸ ಮಾಡುತ್ತದೆ ಎಂದು ತಜ್ಞರೊಬ್ಬರು ಸಲಹೆ ನೀಡಿದ್ದಾರೆ

ಜೀರಾ ಅಥವಾ ಮೆಂತ್ಯ ನೀರು: ಯಾವ ಪಾನೀಯ ಹೊಟ್ಟೆಯ ಕೊಬ್ಬನ್ನು ಸುಡುತ್ತದೆ?

ಇಂಟರ್ ನೆಟ್ ಚಿತ್ರ -

Profile
Pushpa Kumari Jun 3, 2026 7:00 AM

ನವದೆಹಲಿ, ಜೂ.2: ​ಇತ್ತೀಚಿನ ದಿನಗಳಲ್ಲಿ ಹೊಟ್ಟೆಯ ಬೊಜ್ಜು ಅನ್ನೋದು (Weight Loss) ಹೆಚ್ಚಿನವರಿಗೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಹೀಗಾಗಿ ಇದನ್ನು ಪರಿಹರಿಸಲು ಯುವಕ- ಯುವತಿ ಯರು ನಾನಾ ರೀತಿಯ ಸಾಹಸವನ್ನು ಮಾಡುತ್ತಲೇ ಇರುತ್ತಾರೆ. ಜಿಮ್ ,ವರ್ಕೌಟ್ ಎಂದು ದಿನನಿತ್ಯ ಹೋರಾಡಿದರೂ ಬೊಜ್ಜು ನಿವಾರಣೆಯಾಗುತ್ತಿಲ್ಲ. ಆದರೆ ಇಷ್ಟೆಲ್ಲ ಕಷ್ಟ ಪಡುವ ಬದಲು ನೈಸರ್ಗಿಕ ಮನೆ ಮದ್ದುಗಳನ್ನು ಬಳಸುವ ಮೂಲಕ ಇದಕ್ಕೆ ಪರಿಹಾರ ಪಡೆಯಬಹುದು. ಬೆಳಗ್ಗಿನ ಸಮಯದಲ್ಲಿ ಖಾಲಿ ಹೊಟ್ಟೆಗೆ ಮೆಂತ್ಯೆ ನೀರು ಅಥವಾ ಜೀರಿಗೆ ನೀರು ಕುಡಿಯ‌ ಬಹುದು‌. ಆದರೆ ಇವೆರಡರಲ್ಲಿಯಾವುದು ಹೆಚ್ಚು ವೇಗವಾಗಿ ಕೆಲಸ ಮಾಡುತ್ತದೆ ಎಂದು ತಜ್ಞರೊಬ್ಬರು ಸಲಹೆ ನೀಡಿದ್ದಾರೆ.

ಜೀರಿಗೆ ನೀರಿನ ಉಪಯೋಗ:

ಜೀರಿಗೆಯನ್ನು ನೀರಿನಲ್ಲಿ ನೆನೆಸಿಡುವ ಮೂಲಕ ಇದನ್ನು ಸೇವನೆ ಮಾಡಲಾಗುತ್ತದೆ. ಆದರೆ ಕೆಲವರು ತಮ್ಮ ಆರೋಗ್ಯ ಪ್ರಯೋಜನಗಳನ್ನು ಇನ್ನಷ್ಟು ಹೆಚ್ಚಿಸಲು ಅದನ್ನು ಕುದಿಸಿ ನಂತರ ಕುಡಿಯುತ್ತಾರೆ...ನಿರಂತರ ಹೊಟ್ಟೆ ಉಬ್ಬುವುದು, ಜೀರ್ಣಕಾರಿ ಸಮಸ್ಯೆಗಳಿದ್ದಾಗ ಜೀರಿಗೆ ನೀರು ಕುಡಿದರೆ ಉತ್ತಮ. ಹೊಟ್ಟೆಯಲ್ಲಿ ಸಂಗ್ರಹವಾದ ಕೊಬ್ಬನ್ನು ನಿಯಂತ್ರಣ ಮಾಡುವ ಮೂಲಕ ನಿಮ್ಮ ಚಯಾಪಚಯ ಕ್ರಿಯೆಯನ್ನು ಇದು ಬೆಂಬಲಿಸುತ್ತದೆ.

Health Tips: ಅರಿಶಿನದ ಹಾಲಿನ ಸೇವನೆ: ಅತಿಯಾದರೆ ಅಮೃತವೂ ವಿಷ; ಈ ಆರೋಗ್ಯ ಸಮಸ್ಯೆ ಇರುವವರು ಎಚ್ಚರ!

ಮೆಂತ್ಯ ನೀರಿನ ಪ್ರಯೋಜನಗಳು:

ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಗ್ಗಿನ ಸಮಯದಲ್ಲಿ ಸೇವಿಸಲಾಗುತ್ತದೆ. ಹಸಿವನ್ನು ನಿಯಂತ್ರಿಸಲು ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಲು ಮೆಂತ್ಯೆ ನೀರು ಸಹಾಯ ಮಾಡುತ್ತದೆ. ಹೊಟ್ಟೆಯ ಸುತ್ತಲೂ ಕೊಬ್ಬಿನ ಅಂಗಾಂಶಗಳ ಶೇಖರಣೆಯನ್ನು ತಪ್ಪಿಸಲು ಅಗತ್ಯವಿರುವ ಚಯಾಪಚಯ ಕ್ರಿಯೆಯನ್ನು ಬೆಂಬಲಿಸುತ್ತದೆ.

ಬೊಜ್ಜು ಕರಗಿಸಲು ಯಾವುದು ಹೆಚ್ಚು ವೇಗವಾಗಿ ಕೆಲಸ ಮಾಡುತ್ತದೆ?

ಜೀರಾ ವಾಟರ್ ಆಗಿರಲಿ ಅಥವಾ ಮೇಥಿ ವಾಟರ್ ಆಗಿರಲಿ, ಇವೆರಡೂ ಹೊಟ್ಟೆಯ ಕೊಬ್ಬನ್ನು ಒಮ್ಮೆಲೆ ಇಳಿಯುವುದಿಲ್ಲ. ಇವೆರಡೂ ದೇಹವನ್ನು ಸುಗಮಗೊಳಿಸಿ ಆರೋಗ್ಯಕರ ವಾಗಿಸುತ್ತದೆ, ​ಇವೆರಡೂ ಪಾನೀಯಗಳು ನೇರವಾಗಿ ಬೊಜ್ಜನ್ನು ಸುಡುವುದಿಲ್ಲ, ಬದಲಿಗೆ ದೇಹದ ಆರೋಗ್ಯ ವನ್ನು ರಕ್ಷಿಸಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ​ಒಂದು ವೇಳೆ ನಿಮಗೆ ಪದೇ ಪದೇ ಹಸಿವಾಗುವ ಅಭ್ಯಾಸವಿದ್ದು, ಆಹಾರ ನಿಯಂತ್ರಣದ ಮೂಲಕ ನಿಜವಾದ ಕೊಬ್ಬನ್ನು ಕರಗಿಸಬೇಕಿದ್ದರೆ ಮೆಂತ್ಯ ನೀರು ಹೆಚ್ಚು ಪ್ರಯೋಜನಕಾರಿಯಾಗಿದೆ.​ಆದರೆ ಮೆಂತ್ಯ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ವೇಗವಾಗಿ ಕಡಿಮೆ ಮಾಡುವುದರಿಂದ, ಮಧುಮೇಹಿಗಳು ತಮ್ಮ ಶುಗರ್ ಲೆವೆಲ್ ಬಗ್ಗೆ ಜಾಗೃತಿ ವಹಿಸಿ.