World Milk Day: 1 ಲಕ್ಷ 50 ಸಾವಿರ ಲೀಟರ್ ಹಾಲು ಉತ್ಪಾದನೆಯ ಶ್ರೇಯ ಶ್ರಮಜೀವಿ ಮಹಿಳೆಯರಿಗೆ ಸಲ್ಲಬೇಕು : ಊಲವಾಡಿ ಅಶ್ವತ್ಥನಾರಾಯಣ
ಆಸ್ಪತ್ರೆಯ ಒಳರೋಗಿಗಳಿಗೆ ಹಾಲು ವಿತರಿಸಿ ಮಾತನಾಡಿದ ಚಿಮುಲ್ ನಿರ್ದೇಶಕರಾದ ಊಲವಾಡಿ ಅಶ್ವಥನಾರಾಯಣಬಾಬು ಮಾತನಾಡಿ ಜೂನ್ ಒಂದನೇ ದಿನಾಂಕವನ್ನು ವಿಶ್ವ ಹಾಲು ದಿನವನ್ನಾಗಿ ಘೋಷಿಸಿರುವದರಿಂದ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮೊಟ್ಟ ಮೊದಲನೆಯದಾಗಿ ಇಂದು ವಿಶ್ವಹಾಲು ದಿನಾಚರಣೆಯನ್ನು ಸರ್ಕಾರಿ ಆಸ್ಪತ್ರೆ ಯಲ್ಲಿ ಬಡ ರೋಗಿಗಳಿಗೆ ಆಚರಣೆ ಮಾಡುತ್ತಿರುವುದಾಗಿ ಹೇಳಿದರು
-
ಚಿಂತಾಮಣಿ: ವಿಶ್ವ ಹಾಲು ದಿನಾಚರಣೆ(World Milk Day)ಯ ಅಂಗವಾಗಿ ಚಿಕ್ಕಬಳ್ಳಾ ಪುರ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಚಿಮುಲ್) ಚಿಂತಾಮಣಿ ನಗರದ ನಿರ್ದೇಶಕರು ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವಿತರಿಸಿದರು.
ಆಸ್ಪತ್ರೆಯ ಒಳರೋಗಿಗಳಿಗೆ ಹಾಲು ವಿತರಿಸಿ ಮಾತನಾಡಿದ ಚಿಮುಲ್ ನಿರ್ದೇಶಕರಾದ ಊಲವಾಡಿ ಅಶ್ವಥನಾರಾಯಣಬಾಬು ಮಾತನಾಡಿ ಜೂನ್ ಒಂದನೇ ದಿನಾಂಕವನ್ನು ವಿಶ್ವ ಹಾಲು ದಿನವನ್ನಾಗಿ ಘೋಷಿಸಿರುವದರಿಂದ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮೊಟ್ಟ ಮೊದಲನೆಯದಾಗಿ ಇಂದು ವಿಶ್ವಹಾಲು ದಿನಾಚರಣೆಯನ್ನು ಸರ್ಕಾರಿ ಆಸ್ಪತ್ರೆ ಯಲ್ಲಿ ಬಡ ರೋಗಿಗಳಿಗೆ ಆಚರಣೆ ಮಾಡುತ್ತಿರುವುದಾಗಿ ಹೇಳಿದರು.
ಡಾ.ಕುರಿಯನ್ ನಂತರ ಕರ್ನಾಟಕ ಕ್ಷೀರಬ್ರಹ್ಮ ದಿವಂಗತ ಎಂ.ವಿ.ಕೃಷ್ಣಪ್ಪವರು,ಮತ್ತು ದಿವಮಗತ ಕೆ.ಬಿ.ಪಿಳ್ಳಪ್ಪ ರವರಂತಹ ಮಾಹಾನುಭವರು ಸಂಸ್ಥೆಯನ್ನು ಬೃಹದಾಕಾರ ವನ್ನು ಕಟ್ಟಿದ್ದು ಇಂದು ಹಾಲು ಉತ್ಪಾದನೆಯಲ್ಲಿ ಭಾರತ ದೇಶ ಎರಡನೇ ಸ್ಥಾನದಲ್ಲಿದೆ ಎಂದರು, ರೈತರು ಈ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲ ರಾಗಿದ್ದಾರೆ ಎಂದರು.
ರಾಜ್ಯದಲ್ಲಿ 15 ಒಕ್ಕೂಟಗಳು ಇದ್ದು 30 ರಿಂದ 35 ವರ್ಷಗಳಿಂದ ರೈತರಿಗೆ ಈ ಹೈನುಗಾರಿಕೆ ಯಿಂದ ತುಂಬಾ ಅನುಕೂಲವಾಗಿದೆ ಎಂದರು. ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ,ಅವರ ಕೊಡುಗೆ ಅಪಾರ ಎಂದರು, ಕೃಷಿ ಚುಟುವಟಿಕೆಗಳಿಗಿಂತ ಹೈನುಗಾರಿಕೆಯಲ್ಲಿ ಹೆಚ್ಚು ಅನುಕೂಲವಾಗಿದ್ದರಿಂದ ಬಹುತೇಕ ರೈತರು ಹಾಲು ಉತ್ಪಾದನೆಯಲ್ಲಿ ತೊಡಗಿದ್ದು ಸರ್ಕಾರದ ಪ್ರೋತ್ಸಾಧನ, ಸಿಕ್ಕಿ ಅನುಕೂಲ ವಾಗಿದೆ ಎಂದರು.
ನಮ್ಮ ಅವಿಭಜಿತ ಜಿಲ್ಲೆಯಲ್ಲಿ ಒಟ್ಟು 11 ಲಕ್ಷ ಹಾಲು ಲಿಟರ್ ಉತ್ಪಾದನೆಯಾಗುತ್ತಿತ್ತು, ಕೋಲಾರ ಮತ್ತು ಚಿಕ್ಕ ಬಳ್ಳಾಪುರ ಜಿಲ್ಲೆ ವಿಭಜನೆಯಾದ ನಂತರ ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿದೆ ಎಂದ ಅವರು ಚಿಂತಾಮಣಿ ತಾಲ್ಲೂಕು 1 ಲಕ್ಷ 50 ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದು ಇದರ ಪರಿಶ್ರಮ ಮಹಿಳೆಯರಿಗೆ ಸೇರಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಚಿಮುಲ್ ನಿರ್ದೇಶಕರಾದ ಆವಲಪ್ಪ, ಕೆಂಚರ‍್ಲಹಳ್ಳಿ ಬ್ಯಾಂಕ್ ಕೃಷ್ಣಾ ರೆಡ್ಡಿ ಮತ್ತು ಸುಮಾ ರವಿಚಂದ್ರಾ ರೆಡ್ಡಿ ರವರು ಸಹ ಮಾತನಾಡಿದರು. ಇದೇ ಸಂದರ್ಭ ದಲ್ಲಿ ನಾಲ್ಕು ಮಂದಿ ಹೈನುಗಾರಿಕೆ ಮಾಡುವ ರೈತರಿಗೆ 70 ಸಾವಿರ ರೂಗಳ ವಿಮೆ ಚೆಕ್‌ನ್ನು ವಿತರಣೆ ಮಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷ್, ಚಿಂತಾಮಣಿ ಉಪ ಕಚೇರಿ ಉಪ ವ್ಯವಸ್ಥಾಪಕರಾದ ಡಾ ಮಹೇಶ್, ಡಾ ಕಾವ್ಯ,ಮತ್ತು ಶಿಬಿರ ಕಚೇರಿಯ ಎಲ್ಲಾ ವಿಸ್ತರಣಾಧಿಕಾರಿಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.