Manikanta Rathod: ಕೊಲೆ ಯತ್ನ ಆರೋಪದಲ್ಲಿ ಬಿಜೆಪಿ ಲೀಡರ್ ಮಣಿಕಂಠ ರಾಠೋಡ್ ಬಂಧನ
Kalaburagi News: ಕೊಲೆ ಯತ್ನ ಆರೋಪದಲ್ಲಿ ಬಿಜೆಪಿ ಲೀಡರ್ ಮಣಿಕಂಠ ರಾಠೋಡ್ ಬಂಧನವಾಗಿದೆ. ನಾಟಿ ಔಷಧಿ ನೀಡುತ್ತಿದ್ದ ರಶೀದ್ ಮುತ್ಯಾ ಎಂಬಾತನನ್ನು ಬಂಧಿಸುವಂತೆ ಆಗ್ರಹಿಸಿ ಮಣಿಕಂಠ ರಾಠೋಡ್ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಹಲವು ಜನರೊಂದಿಗೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕೊಲೆ ಯತ್ನ ನಡೆದಿತ್ತು ಎಂದು ಆರೋಪಿಸಲಾಗಿದೆ.
ಮಣಿಕಂಠ ರಾಠೋಡ್ ಬಂಧನ -
ಕಲಬುರಗಿ, ನ.21: ಕೊಲೆ ಯತ್ನ (Murder attempt) ಆರೋಪದಲ್ಲಿ ಬಿಜೆಪಿ ಮುಖಂಡ (BJP Leader) , ರೌಡಿಶೀಟರ್ ಮಣಿಕಂಠ ರಾಠೋಡ್ (Manikanta Rathod) ಬಂಧನವಾಗಿದೆ. ಕಲಬುರಗಿ (Kalaburagi news) ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ಮಣಿಕಂಠ ರಾಠೋಡ್ನನ್ನು ಬಂಧಿಸಿದ್ದಾರೆ. ಸದ್ಯ ಮಣಿಕಂಠ ರಾಠೋಡ್ನನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ನಾಟಿ ಔಷಧಿ ನೀಡುತ್ತಿದ್ದ ರಶೀದ್ ಮುತ್ಯಾ ಎಂಬಾತನನ್ನು ಬಂಧಿಸುವಂತೆ ಆಗ್ರಹಿಸಿ ಮಣಿಕಂಠ ರಾಠೋಡ್ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಹಲವು ಜನರೊಂದಿಗೆ ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ರಶೀದ್ ಬೆಂಬಲಿಗರೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಪ್ರತಿಭಟನೆಯ ಬಳಿಕ ರಶೀದ್ ಮುತ್ಯಾ ಗ್ರಾಮದಿಂದ ಕಾರಿನ ಮೂಲಕ ಬೇರೆ ಕಡೆಗೆ ಹೋಗುತ್ತಿದ್ದ ವೇಳೆ ಕಾರಿಗೆ ಕಲ್ಲು ಹೊಡೆಯಲಾಗಿದೆ.
ರಶೀದ್ ಮುತ್ಯಾನ ಕಾರು ಚಾಲಕನಿಗೆ ಕಲ್ಲೇಟು ಬಿದ್ದು ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಗಾಯಾಳು ಕಾರು ಚಾಲಕ ನೀಡಿದ ದೂರಿನನ್ವಯ ಕೊಲೆ ಯತ್ನ ಆರೋಪದಲ್ಲಿ ಮಣಿಕಂಠ ರಾಠೋಡ್ ಅನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಮಣಿಕಂಠ ರಾಠೋಡ್ ಈ ಹಿಂದೆ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರ ಎದುರಿಗೆ ಸ್ಪರ್ಧಿಸಿದ್ದರು. ಕೊಲೆ ಯತ್ನ, ಅಪಹರಣ ಸೇರಿದಂತೆ ಹಲವು ಪ್ರಕರಣಗಳು ಮಣಿಕಂಠ ರಾಠೋಡ್ ಮೇಲೆ ಇವೆ.
ಇದನ್ನೂ ಓದಿ: Udupi news: ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆ ರಹಸ್ಯ ಗೂಢಚರ್ಯೆ ಮಾಡುತ್ತಿದ್ದ ಇಬ್ಬರು ಉಡುಪಿಯಲ್ಲಿ ಸೆರೆ
ಕಿಲ್ಲರ್ ಬಿಎಂಟಿಸಿಗೆ ವೃದ್ಧ ಬಲಿ
ಬೆಂಗಳೂರು: ಬಿಎಂಟಿಸಿ ಬಸ್‌ಗೆ ಇಂದು ಮತ್ತೊಬ್ಬರನ್ನು ಬಲಿ (BMTC Bus Accident) ಪಡೆದುಕೊಂಡಿದೆ. ಮಡಿವಾಳದ ಪೊಲೀಸ್ ಠಾಣೆ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ವೃದ್ಧನ ಮೇಲೆ ಬಸ್ ಹರಿದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಡಿವಾಳ ನಿವಾಸಿ ವೆಂಕಟರಾಮಯ್ಯ ಮೃತ ವ್ಯಕ್ತಿ. ಘಟನೆಗೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಜನರು ಅಕ್ರೋಶ ಹೊರಹಾಕಿದ್ದಾರೆ. ವೃದ್ಧನ ತಲೆ ಮೇಲೆಯೇ ಬಸ್ ಚಕ್ರಗಳು ಹರಿದಿದ್ದು, ತಲೆ ಛಿದ್ರವಾಗಿದೆ. ಮಡಿವಾಳ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದೆಯಿಂದ ಬಂದ ಬಿಎಂಟಿಸಿ ಬಸ್ ವೃದ್ಧನಿಗೆ ಡಿಕ್ಕಿಯಾಗಿದೆಎ ಎಂದು ತಿಳಿದು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
ಕಳೆದ ತಿಂಗಳು ಬಿಎಂಟಿಸಿ ಎಲೆಕ್ಟ್ರಿಕ್ ಬಸ್ (BMTC bus accident) ಡಿಕ್ಕಿ ಹೊಡೆದು ವೃದ್ಧೆಯೊಬ್ಬರು ಸಾವಿಗೀಡಾಗಿರುವ ಘಟನೆ ಸೆಂಟ್ರಲ್ ಸಿಲ್ಕ್ ಬೋರ್ಡ್ (Silk Board) ಬಸ್ ನಿಲ್ದಾಣದ ಬಳಿ ನಡೆದಿತ್ತು. 62 ವರ್ಷದ ಹಿರಿಯ ನಾಗರಿಕರೊಬ್ಬರು ಎಲೆಕ್ಟ್ರಿಕ್ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದರು. ಬೆಂಗಳೂರಿನಲ್ಲಿ ಚಾಲಕರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಬಿಎಂಟಿಸಿ ಬಸ್ಸುಗಳಿಗೆ ಅನೇಕರು ಬಲಿಯಾಗುತ್ತಿದ್ದಾರೆ.