ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Nidumamidi Sri: ಮಠಾಧೀಶರು ರಾಯಭಾರಿಗಳಾಗಬೇಕು ಎಂಬ ಮಾತು ನೋವು ತಂದಿದೆ: ನಿಡುಮಾಮಿಡಿ ಶ್ರೀ

ಸರ್ಕಾರದ ಪರವಾಗಿ ಇರಬೇಕು ಎನ್ನುವುದು ತಪ್ಪಲ್ಲ. ಆದರೆ, ಸರ್ಕಾರದ ರಾಯಭಾರಿಗಳಾಗಿ, ಸೇವಕರಾಗಿ ಸೇವೆ ಮಾಡಿದರೆ ಮಾತ್ರ ಮುಕ್ತಿ ಎಂಬ ರೀತಿಯಲ್ಲಿ ಮಾತನಾಡುವುದು ಅನುಚಿತ. ಮಠಾಧಿಪತಿಗಳು ಯಾವುದೇ ರಾಜಕಾರಣಿ ಅಥವಾ ಪಕ್ಷದ ಸೇವೆ ಮಾಡಲು ಇರುವವರಲ್ಲ. ಅವರು ಸಮಾಜ ಹಾಗೂ ಸಾರ್ವಜನಿಕರ ಸೇವೆ, ಮಾರ್ಗದರ್ಶನಕ್ಕಾಗಿ ಇದ್ದಾರೆ ಎಂದರು.

ಮಠಾಧೀಶರು ರಾಯಭಾರಿಗಳಾಗಬೇಕು ಎಂಬ ಮಾತು ನೋವು ತಂದಿದೆ

-

Profile
Ashok Nayak Sep 29, 2026 1:15 PM

ಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಅಸಮಾಧಾನ; ರಾಜಕಾರಣಿಗಳ ಸೇವೆ ಮಾಡಲು ಮಠಾಧಿಪತಿಗಳಿಲ್ಲ

ಕಲಬುರಗಿ: ಮಠಾಧೀಶರು ಸರ್ಕಾರದ ರಾಯಭಾರಿಗಳಾಗಿ, ಸೇವಕರಾಗಿ ಕೆಲಸ ಮಾಡಿದರೆ ಮುಕ್ತಿ ದೊರೆಯುತ್ತದೆ ಎಂಬ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(Chief Minister D K Shivakumar) ಅವರ ಹೇಳಿಕೆ ನೋವುಂಟು ಮಾಡಿದೆ ಎಂದು ನಿಡುಮಾಮಿಡಿಯ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಸುಲಫಲ ಮಠದಲ್ಲಿ ನಡೆದ ಶ್ರೀಶೈಲ ಸಾರಂಗಮಠದ ಡಾ. ಶ್ರೀ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಅವರ 12ನೇ ಪೀಠಾರೋಹಣ ವಾರ್ಷಿಕೋತ್ಸವ ಹಾಗೂ 60ನೇ ವರ್ಷದ ವರ್ಧಂತಿ ಮಹೋತ್ಸವದಲ್ಲಿ ಮಾತನಾಡಿದರು.

ಇದನ್ನೂ ಓದಿ: Kalaburagi Red Gram: ‘ಮಾಲ್ಡೀವ್ಸ್‌’ಗೂ ಹಾರಿದ ‘ಕಲಬುರಗಿ ತೊಗರಿ’: ಕಲ್ಯಾಣ ಕರ್ನಾಟಕದ ರೈತನ ಬೆಳೆಗೆ ವಿಶ್ವಮನ್ನಣೆ, ಶೇ.30ಕ್ಕೂ ಹೆಚ್ಚು ಹೆಚ್ಚುವರಿ ಬೆಲೆ

ಸರ್ಕಾರದ ಪರವಾಗಿ ಇರಬೇಕು ಎನ್ನುವುದು ತಪ್ಪಲ್ಲ. ಆದರೆ, ಸರ್ಕಾರದ ರಾಯಭಾರಿಗಳಾಗಿ, ಸೇವಕರಾಗಿ ಸೇವೆ ಮಾಡಿದರೆ ಮಾತ್ರ ಮುಕ್ತಿ ಎಂಬ ರೀತಿಯಲ್ಲಿ ಮಾತನಾಡುವುದು ಅನುಚಿತ. ಮಠಾಧಿಪತಿಗಳು ಯಾವುದೇ ರಾಜಕಾರಣಿ ಅಥವಾ ಪಕ್ಷದ ಸೇವೆ ಮಾಡಲು ಇರುವವರಲ್ಲ. ಅವರು ಸಮಾಜ ಹಾಗೂ ಸಾರ್ವಜನಿಕರ ಸೇವೆ, ಮಾರ್ಗದರ್ಶನಕ್ಕಾಗಿ ಇದ್ದಾರೆ ಎಂದರು.

ಮುಖ್ಯಮಂತ್ರಿಯಾದವರು ಸಂಯಮ ಹಾಗೂ ಔಚಿತ್ಯದ ಎಲ್ಲೆಯನ್ನು ಮೀರಿ ಮಾತನಾಡ ಬಾರದು. ಇತ್ತೀಚೆಗೆ ಸಮಾಧಾನದಿಂದ ಮಾತನಾಡುತ್ತಿದ್ದ ಮುಖ್ಯಮಂತ್ರಿ ಶಿವಕುಮಾರ್(Chief Minister Shivakumar) ಅವರು ಶಿವಾಚಾರ್ಯರ ಸಮಾವೇಶದಲ್ಲಿ ಇಂತಹ ಮಾತು ಆಡಿರುವುದು ಸಲ್ಲದು ಎಂದು ಹೇಳಿದರು.

ಮಠಾಧೀಶರನ್ನು ಕಾರ್ಯಕ್ರಮಗಳಲ್ಲಿ ಕೆಳಗೆ ಕೂರಿಸುವ ಪದ್ಧತಿಯೂ ನಿಲ್ಲಬೇಕು. ನಾಡಿನ ಮುಖ್ಯಮಂತ್ರಿಯನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಅರಿಯಬೇಕು. ಸಾರ್ವಜನಿಕವಾಗಿ ಎಲ್ಲರನ್ನೂ ಸಮಭಾವದಿಂದ ಕಾಣುವ ಸಂಪ್ರದಾಯ ಬೆಳೆಸಬೇಕು ಎಂದರು.

ಯಡಿಯೂರಪ್ಪ(Yediyurappa), ದೇವೇಗೌಡ(Devegowda) ಹಾಗೂ ಸಿದ್ದರಾಮಯ್ಯ (Siddaramaiah) ಅವರಂತಹ ಮುಖ್ಯಮಂತ್ರಿಗಳಿಂದ ಗುರುವೃಂದವನ್ನು ಲಘುವಾಗಿ ಮಾತನಾಡುವ ಇಂತಹ ಹೇಳಿಕೆಗಳನ್ನು ಕೇಳಿಲ್ಲ. ಮುಖ್ಯಮಂತ್ರಿ ಹಿರಿಯರನ್ನು ನೋಡಿ ಕಲಿಯಬೇಕಿದೆ ಎಂದು ನಿಡುಮಾಮಿಡಿ ಶ್ರೀ ಹೇಳಿದರು