ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

UP ATS Raid in Kalaburagi: ಪಾಕಿಸ್ತಾನದ ಜತೆ ಸಂಪರ್ಕ ಶಂಕೆ: ಕಲಬುರಗಿಯಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಉತ್ತರ ಪ್ರದೇಶದ ಎಟಿಎಸ್

Kalaburagi News: ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಉತ್ತರ ಪ್ರದೇಶ ಎಟಿಎಸ್ ತಂಡ ಕಲಬುರಗಿಯಲ್ಲಿ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ. ಉತ್ತರ ಪ್ರದೇಶದ ನಿವಾಸಿ ವಿಳಾಸ ಹೊಂದಿರುವ ಸಮೀರ್ ಸಲ್ಮಾನ್ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಜತೆ ಸಂಪರ್ಕ ಶಂಕೆ: ಕಲಬುರಗಿಯಲ್ಲಿ ಇಬ್ಬರು ಎಟಿಎಸ್‌ ವಶಕ್ಕೆ

-

Prabhakara R
Prabhakara R Aug 13, 2026 3:12 PM

ಕಲಬುರಗಿ: ಪಾಕಿಸ್ತಾನದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರೆಂಬ ಶಂಕೆಯ ಮೇರೆಗೆ ಇಬ್ಬರನ್ನು ಉತ್ತರ ಪ್ರದೇಶದ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್‌ (ಎಟಿಎಸ್) ಅಧಿಕಾರಿಗಳು ಕಲಬುರಗಿಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಉತ್ತರ ಪ್ರದೇಶ ಎಟಿಎಸ್ ತಂಡ ಕಲಬುರಗಿಯಲ್ಲಿ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ. ಉತ್ತರ ಪ್ರದೇಶದ ನಿವಾಸಿ ವಿಳಾಸ ಹೊಂದಿರುವ ಸಮೀರ್ ಸಲ್ಮಾನ್ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇವರಿಬ್ಬರು ವಾಟ್ಸ್‌ಆ್ಯಪ್ ಕರೆ ಹಾಗೂ ಫೇಸ್‌ಬುಕ್‌ ಮೂಲಕ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.

ಎಟಿಎಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಸಮೀರ್ ಸಲ್ಮಾನ್ ಉಳಿದುಕೊಂಡಿದ್ದ ಕೊಠಡಿಯಲ್ಲಿ ಕೆಲವು ಮ್ಯಾಪ್‌ಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಪತ್ತೆಯಾದ ದಾಖಲೆಗಳು ಹಾಗೂ ಆರೋಪಿಗಳ ಪಾಕ್ ಸಂಪರ್ಕದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಪ್ರಸ್ತುತ ಇಬ್ಬರನ್ನೂ ಕಲಬುರಗಿಯ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಸಂಪರ್ಕ, ಚಟುವಟಿಕೆ ಹಾಗೂ ಪತ್ತೆಯಾದ ಮ್ಯಾಪ್‌ಗಳ ಕುರಿತು ತನಿಖೆ ಮುಂದುವರಿದಿದೆ. ಆರೋಪಿಗಳ ವಶಕ್ಕೆ ಸಂಬಂಧಿಸಿದ ಅಧಿಕೃತ ವಿವರಗಳನ್ನು ತನಿಖಾ ಸಂಸ್ಥೆಗಳು ಇನ್ನಷ್ಟೇ ಬಹಿರಂಗಪಡಿಸಬೇಕಿದೆ.

ಬೀದರ್ ಎಟಿಎಂ ದರೋಡೆ ಪ್ರಕರಣ; ಇಬ್ಬರು ಆರೋಪಿಗಳು ಅರೆಸ್ಟ್

ಬೀದರ್: ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಬೀದರ್ ಎಟಿಎಂ ದರೋಡೆ ಪ್ರಕರಣದ (Bidar ATM Robbery) ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಬೀದರ್ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಬಿಹಾರದಲ್ಲಿ ಆರೋಪಿಗಳ ಕಾರು ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಅಮನ್‌ಕುಮಾರ್ ಸಿಂಗ್ ಮತ್ತು ಅಲೋಕ್‌ಕುಮಾರ್ ಬಂಧಿತ ಆರೋಪಿಗಳು. ವೈಶಾಲಿ ಜಿಲ್ಲೆಯ ಧಾಮೋದರ್ ಎಂಬ ಗ್ರಾಮದಲ್ಲಿ ಇಬ್ಬರು ಆರೋಪಿಗಳ ಬಂಧನ ಮಾಡಿದ್ದು, ಪ್ರಕರಣ ನಡೆದ 1 ವರ್ಷ 7 ತಿಂಗಳ ಬಳಿಕ ದರೋಡೆಕೋರರ ಬಂಧನವಾಗಿದೆ.

ಕಳೆದ ಇಪ್ಪತ್ತು ದಿನಗಳ ಹಿಂದೆ ಆರೋಪಿಗಳ ಸುಳಿವು ಬೀದರ್ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ, ನಿರಂತರವಾಗಿ ಆರೋಪಿಗಳಿಗಾಗಿ ಬೀದರ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬೀದರ್ ಎಸ್‌ಪಿ ಪ್ರದೀಪ್ ಗುಂಟಿ ನೇತೃತ್ವದ ತಂಡದಿಂದ ಆಪರೇಷನ್ ಮಾಡಿ ಇಂದು ಮಧ್ಯಾಹ್ನ ಇಬ್ಬರು ದರೋಡೆಕೋರರನ್ನು ಬಂಧಿಸಿ ಬೀದರ್‌ಗೆ ಕರೆತರುತ್ತಿದ್ದಾರೆ‌‌‌‌.

ಯಾವುದೇ ರಾಜ್ಯದ ಪೊಲೀಸರ ಸಹಕಾರವಿಲ್ಲದೇ ದರೋಡೆಕೋರರನ್ನು ಬೀದರ್ ಪೊಲೀಸರು ಬಂಧಿಸಿದ್ದು, ಎಸ್‌ಪಿ 1, ಡಿಎಸ್‌ಪಿ 2, ಸಿಪಿಐ 2, ಪಿಎಸ್‌ಐ 4, ಕ್ರೈಂ ಸ್ಟಾಪ್ 12 ಸೇರಿ 20ಕ್ಕೂ ಅಧಿಕ ಸಿಬ್ಬಂದಿಯಿಂದ ದರೋಡೆಕೋರರ ಬಂಧನವಾಗಿದೆ.

ನಾಪತ್ತೆಯಾಗಿ 6 ದಿನ ಕಳೆದರೂ ಟೆಕ್ಕಿ ಅದ್ವೈತ್‌ ಸುಳಿವಿಲ್ಲ: ಶಿವಗಂಗೆ ಬೆಟ್ಟದ ನೆರಳಲ್ಲಿ ನಡೆಯಿತಾ ಹೈಟೆಕ್ ಎಸ್ಕೇಪ್ ಪ್ಲ್ಯಾನ್?

ಪ್ರಕರಣ ಏನು?: ಬೀದರ್‌ ನಗರದ ಹೃದಯ ಭಾಗದಲ್ಲಿ 2025 ಜನವರಿ‌ 16 ರಂದು ಹಾಡಹಗಲೇ ಬೈಕ್‌ನಲ್ಲಿ ಬಂದು ದರೋಡೆಕೋರರು ದರೋಡೆ ಮಾಡಿದ್ದರು. ಈ ವೇಳೆ ಎಂಎಸ್‌ ಏಜೆನ್ಸಿ ಸಿಬ್ಬಂದಿಯೊಬ್ಬರನ್ನು ಕೊಂದು ಇಬ್ಬರು ಖದೀಮರು 83 ಲಕ್ಷ ರೂ. ದರೋಡೆ ಮಾಡಿದ್ದರು. ದರೋಡೆಕೋರರ ಶೂಟೌಟ್‌ಗೆ ಗಿರಿ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಶಿವಕುಮಾರ್ ಗುನ್ನಳ್ಳಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ದರೋಡೆಕೋರರ ಬಂಧನದ ಹಿನ್ನೆಲೆ ಘಟನೆ ನಡೆದಿದ್ದ ಸ್ಥಳವಾದ ಎಸ್‌ಬಿಐ ಬ್ಯಾಂಕ್ ಮುಂದೆ ಪೊಲೀಸರು ಪಟಾಕಿ ಹಚ್ಚಿ ಸಂಭ್ರಮಾಚರಣೆ ಮಾಡಿದ್ದಾರೆ.