ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿ.ಜೆ. ರಾಯ್‌ ಬೆನ್ನಲ್ಲೇ ಕರ್ನಾಟಕದ ಮತ್ತೊಬ್ಬ ಉದ್ಯಮಿ ಕೇರಳದಲ್ಲಿ ಆತ್ಮಹತ್ಯೆ; ಸಾಲ ಕೊಟ್ಟಿದ್ದೇ ಮುಳುವಾಯ್ತು

Kodagu News: ಕರ್ನಾಟಕ ಮೂಲದ ಉದ್ಯಮಿಯೊಬ್ಬರು ಕೇರಳದ ವಯನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಕೊಡಗಿನ ಪೊನ್ನಂಪೇಟೆಯ ಕುಟ್ಟ ಗ್ರಾಮದ ನಿವಾಸಿ ಉದ್ಯಮಿ ಸಜೀರ್ ಎಂದು ಗುರುತಿಸಲಾಗಿದೆ. ಕಾರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಮಕ್ಕಳನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಕರ್ನಾಟಕದ ಉದ್ಯಮಿ ಕೇರಳದಲ್ಲಿ ಆತ್ಮಹತ್ಯೆ; ಕಾರಣವೇನು?

ಎಐ ಚಿತ್ರ. -

Ramesh Ballamoole
Ramesh Ballamoole Feb 7, 2026 10:34 PM

ತಿರುವನಂತಪುರಂ, ಫೆ. 7: ಸಾವಿರಾರು ಕೋಟಿ ರುಪಾಯಿ ಆಸ್ತಿಗಳ ಒಡೆಯ, ಕಾನ್ಫಿಡೆಂಟ್ ಗ್ರೂಪ್‌ ಚೇರ್ಮನ್‌, ರಿಯಲ್‌ ಎಸ್ಟೇಟ್‌ ಉದ್ಯಮಿ ಸಿ.ಜೆ. ರಾಯ್ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿ ಹೆಚ್ಚು ದಿನವಾಗಿಲ್ಲ (CJ Roy Death Case). ಅದಾಗಲೇ ಕರ್ನಾಟಕದ ಮತ್ತೊಬ್ಬ ಉದ್ಯಮಿಯ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ (Self Harming). ಕರ್ನಾಟಕ ಮೂಲದ ಉದ್ಯಮಿಯೊಬ್ಬರು ಕೇರಳದ ವಯನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ (Kodagu News). ಮೃತರನ್ನು ಕೊಡಗಿನ ಪೊನ್ನಂಪೇಟೆಯ ಕುಟ್ಟ ಗ್ರಾಮದ ನಿವಾಸಿ ಉದ್ಯಮಿ ಸಜೀರ್ ಎಂದು ಗುರುತಿಸಲಾಗಿದೆ.

ಸಜೀರ್ ಕಾರಿನಲ್ಲಿ ಕುಟುಂಬ ಸಮೇತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಉಳಿದವರು ಪಾರಾಗಿದ್ದಾರೆ. ಸಜೀರ್‌ ಮೃತಪಟ್ಟಿದ್ದಾರೆ. ಅವರ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಈ ಪೈಕಿ ಗಂಭೀರ ಗಾಯಗೊಂಡಿರುವ ಸಜೀರ್ ಪತ್ನಿಯನ್ನು ಕಲ್ಲಿಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಪು ಎಂಬಾತ ಸಜೀರ್​​ ಬಳಿ 20 ಲಕ್ಷ ರುಪಾಯಿ ಸಾಲ ಪಡೆದಿದ್ದ ಎನ್ನಲಾಗಿದೆ. ಸಾಲ ಪಡೆದಿದ್ದ ಹಣವನ್ನು ಬಾಪು ವಾಪಸ್ ಕೊಟ್ಟಿರಲಿಲ್ಲ. ಪದೇ ಪದೆ ಕೇಳಿದರೂ ಹಣ ಹಿಂದಿರುಗಿಸಿರಲಿಲ್ಲ. ಇದರಿಂದ ಮನನೊಂದು ಸಜೀರ್ ಆತನ ಮನೆ ಎದುರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಜೀರ್​ ವಿಡಿಯೊ ಮಾಡಿ ತಮ್ಮ ಸಾವಿಗೆ ಬಾಪು ಕಾರಣ ಎಂದು ಹೇಳಿದ್ದಾರೆ. ಸದ್ಯ ಮಾನಂದವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತಾವೇ ಎದೆಗೆ ಗುಂಡು ಹಾರಿಸಿಕೊಂಡ ಸಿ.ಜೆ.ರಾಯ್‌; ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೃಢ

ಸಿ.ಜೆ. ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ ಎಸ್‌ಐಟಿ ಹೆಗಲಿಗೆ

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್‌ ಚೇರ್ಮನ್‌ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಎಸ್ಐಟಿ (SIT) ರಚಿಸಲಾಗಿದೆ. ಜಂಟಿ ಆಯುಕ್ತ ವಂಶಿಕೃಷ್ಣ ಎಸ್‌ಐಟಿ ನೇತೃತ್ವ ವಹಿಸಲಿದ್ದಾರೆ. ತಂಡದಲ್ಲಿ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್, ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್, ಹಲಸೂರು ಗೇಟ್ ಎಸಿಪಿ ಸುಧೀರ್, ಸಿಸಿಆರ್‌ಬಿ ಎಸಿಪಿ ರಾಮಚಂದ್ರ ಹಾಗೂ ಅಶೋಕನಗರ ಇನ್ಸ್‌ಪೆಕ್ಟರ್‌ ರವಿ ಇದ್ದಾರೆ.

ಜನವರಿ 30ರಂದು ಮಧ್ಯಾಹ್ನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ ಸಮಯದಲ್ಲಿ ಸಿ.ಜೆ. ರಾಯ್ ಬೆಂಗಳೂಡಿನ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಎಸ್ಐಟಿ ಮೂಲಕ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.