ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kodagu News: ಕೊಡಗಿಯಲ್ಲಿ ಸೂಟ್‌ಕೇಸ್‌ ಒಳಗೆ 8 ತಿಂಗಳ ಮಗುವನ್ನಿಟ್ಟು ಪರಾರಿಯಾದ ತಾಯಿ!

ಮನೆ ಒಳಗಿನಿಂದ ಮಗುವಿನ ಜೋರಾದ ಅಳು ಕೇಳಿಸಿದಾಗ, ಸ್ಥಳೀಯರು ಅಲ್ಲಿಗೆ ಹೋಗಿ ನೋಡಿದ್ದಾರೆ. ತಾಯಿಯ ಫೋನ್ ಸ್ವಿಚ್ ಆಫ್ ಬಂದ ಹಿನ್ನೆಲೆಯಲ್ಲಿ ಮಗುವಿನ ಅಜ್ಜಿಗೆ ಫೋನ್ ಮಾಡಿ ವಿಷಯ ತಿಳಿಸಲಾಗಿತ್ತು. ಬಳಿಕ ಮನೆ ಬೀಗ ಒಡೆದು ನೋಡಿದಾಗ ಸೂಟ್‌ಕೇಸ್ ಒಳಗೆ ಇರುವುದು ಕಂಡುಬಂದಿದೆ.

ಕೊಡಗಿಯಲ್ಲಿ ಸೂಟ್‌ಕೇಸ್‌ ಒಳಗೆ 8 ತಿಂಗಳ ಮಗುವನ್ನಿಟ್ಟು ಪರಾರಿಯಾದ ತಾಯಿ!

-

Prabhakara R
Prabhakara R Nov 13, 2026 8:05 PM

ಕೊಡಗು: ತಾಯಿಯೊಬ್ಬಳು ತನ್ನ 8 ತಿಂಗಳ ಮಗುವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಪರಾರಿಯಾಗಿರುವ ಘಟನೆ ಜಿಲ್ಲೆಯ (Kodagu News) ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆಯಲ್ಲಿ ನಡೆದಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಮಗು ಬದುಕುಳಿದಿದೆ.

ಜಂಬೂರು ಗ್ರಾಮದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆಯಲ್ಲಿ ಘಟನೆ ನಡೆದಿದೆ. ಈ ಬಡಾವಣೆಯಲ್ಲಿ 2018-19ರಲ್ಲಿ ಪ್ರವಾಹ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗಿತ್ತು. ಇಲ್ಲಿಯ ಮನೆ ಸಂಖ್ಯೆ 255 ರಲ್ಲಿ ತಾಯಿ ಮತ್ತು 8 ತಿಂಗಳ ಮಗು ವಾಸವಿದ್ದರು. ಮಗುವಿನ ತಂದೆ ಚೆನ್ನೈನಲ್ಲಿ ಕೆಲಸದಲ್ಲಿದ್ದಾರೆ. ನವೆಂಬರ್ 11ರ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಮನೆ ಒಳಗಿನಿಂದ ಮಗುವಿನ ಜೋರಾದ ಅಳು ಕೇಳಿಸಿದಾಗ, ಸ್ಥಳೀಯರು ಅಲ್ಲಿಗೆ ಹೋಗಿ ನೋಡಿ ತಾಯಿಯ ಫೋನ್ ಕರೆ ಮಾಡಿದರೆ ಸ್ವಿಚ್ ಆಫ್ ಬಂದಿದೆ. ಹಾಗಾಗಿ ಮಗುವಿನ ಅಜ್ಜಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

ಅಜ್ಜಿ ಸ್ಥಳೀಯರ ಜತೆ ಸೇರಿ ಮನೆ ಬೀಗ ಒಡೆದು ನೋಡಿದಾಗ ಸೂಟ್‌ಕೇಸ್ ಒಳಗೆ ಮಗು ಜೋರಾಗಿ ಅಳುತ್ತಿರುವುದು ಕಂಡಿದೆ. ತಕ್ಷಣವೇ ಮಗುವನ್ನು ರಕ್ಷಣೆ ಮಾಡಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಇಂದು ಮಧ್ಯಾಹ್ನದ ವೇಳೆಗೆ ಮಗು ಸುಧಾರಿಸಿಕೊಂಡಿದೆ.

ಸದ್ಯ ಮಗುವಿನ ತಾಯಿಯನ್ನು ಹುಣಸೂರು ಬಳಿ ಪತ್ತೆಹಚ್ಚಲಾಗಿದೆ. ತಂದೆಯೂ ಚೆನ್ನೈನಿಂದ ಆಗಮಿಸಿದ್ದಾರೆ. ಮಗು ಆಸ್ಪತ್ರೆಯಲ್ಲಿ ಅಜ್ಜಿಯ ಆರೈಕೆಯಲ್ಲಿದೆ. ಯಾವ ಉದ್ದೇಶದಿಂದ ತಾಯಿ ತನ್ನ ಮಗುವನ್ನು ಸೂಟ್ ಕೇಸ್‌ಗೆ ಹಾಕಿ ಹೋಗಿದ್ದಾರೆ ಎಂಬುದೇ ಇದೀಗ ನಿಗೂಢವಾಗಿದೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.