ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಲಕಾವೇರಿಗೆ ಸಹಸ್ರಾರು ಭಕ್ತರ ಆಗಮನ ನಿರೀಕ್ಷೆ: ತೀರ್ಥೋದ್ಭವಕ್ಕೆ ಕ್ಷಣಗಣನೆ

ಭಾಗಮಂಡಲದ ತ್ರಿವೇಣಿ ಸಂಗಮದ ಹೂಳು ತೆಗೆದು ನದಿಯ ಹರಿವಿಗೆ ಮರದ ಹಲಗೆಗಳನ್ನು ಅಳವಡಿಸಿ ಪವಿತ್ರ ಸ್ಥಾನಕ್ಕೆ ನೀರಿನ ಶೇಖರಣೆ ಮಾಡಲಾಗಿದೆ. ಪಕ್ಕದಲ್ಲೇ ಕೇಶ ಮುಂಡನ ಮತ್ತು ಪಿಂಡ ಪ್ರದಾನಕ್ಕೆ ಸ್ಥಳಾವಕಾಶ ಒದಗಿಸಲಾಗಿದೆ. ಭಾಗಮಂಡಲದಿಂದ ತಲ ಕಾವೇರಿಗೆ ತೆರಳುವ ಭಕ್ತರಿಗೆ ಸಾರಿಗೆ ನಿಗಮದ ಬಸ್‌ಗಳನ್ನು ಕಲ್ಪಿಸಲಾಗುತ್ತಿದೆ. ಶ್ರೀ ತಲಕಾವೇರಿ ಮತ್ತು ಭಗಂಡೇಶ್ವರ ದೇವಾಲಯಗಳನ್ನು ವಿದ್ಯುತ್ ಬೆಳಕಿನಿಂದ ಸಿಂಗರಿಸಲಾಗಿದೆ.

ತೀರ್ಥೋದ್ಭವಕ್ಕೆ ಕ್ಷಣಗಣನೆ

-

Profile
Ashok Nayak Oct 17, 2026 8:46 AM

ಮಡಿಕೇರಿ: ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಅ.17ರ ರಾತ್ರಿ 7.50ಕ್ಕೆ ಕಾವೇರಿ ತೀರ್ಥೋದ್ಭವ ಸಂಭವಿಸಲಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ಗುರುರಾಜ್ ಆಚಾರ್ ಹಾಗೂ ಪ್ರಶಾಂತ್ ಆಚಾರ್ ನೇತೃತ್ವದ ಅರ್ಚಕರ ತಂಡ ತೀರ್ಥೋದ್ಭವದ ವಿಶೇಷ ಪೂಜೆ ನಡೆಸಲಿದ್ದಾರೆ.

ಭಾಗಮಂಡಲದ ತ್ರಿವೇಣಿ ಸಂಗಮದ ಹೂಳು ತೆಗೆದು ನದಿಯ ಹರಿವಿಗೆ ಮರದ ಹಲಗೆಗಳನ್ನು ಅಳವಡಿಸಿ ಪವಿತ್ರ ಸ್ಥಾನಕ್ಕೆ ನೀರಿನ ಶೇಖರಣೆ ಮಾಡಲಾಗಿದೆ. ಪಕ್ಕದಲ್ಲೇ ಕೇಶ ಮುಂಡನ ಮತ್ತು ಪಿಂಡ ಪ್ರದಾನಕ್ಕೆ ಸ್ಥಳಾವಕಾಶ ಒದಗಿಸಲಾಗಿದೆ. ಭಾಗಮಂಡಲದಿಂದ ತಲ ಕಾವೇರಿಗೆ ತೆರಳುವ ಭಕ್ತರಿಗೆ ಸಾರಿಗೆ ನಿಗಮದ ಬಸ್‌ಗಳನ್ನು ಕಲ್ಪಿಸಲಾಗುತ್ತಿದೆ. ಶ್ರೀ ತಲಕಾವೇರಿ ಮತ್ತು ಭಗಂಡೇಶ್ವರ ದೇವಾಲಯಗಳನ್ನು ವಿದ್ಯುತ್ ಬೆಳಕಿನಿಂದ ಸಿಂಗರಿಸಲಾಗಿದೆ.

ಇದನ್ನೂ ಓದಿ: Talakaveri Theerthodbhava: ನಾಳೆ ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ

ತೀರ್ಥೋದ್ಭವದ ಪ್ರಸಾರ ವೀಕ್ಷಣೆಗೆ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿದೆ. ತೀರ್ಥ ಕುಂಡಿಕೆಯ ಪ್ರವೇಶ ದ್ವಾರದಲ್ಲಿ ಪೊಲೀಸ್ ಇಲಾಖೆ ಭಕ್ತರ ದಟ್ಟಣೆಯನ್ನು ತಡೆಯಲು ಅಂದಾಜು 20 ಅಡಿ ಎತ್ತರದ ಬಿದಿರಿನ ತಾತ್ಕಾಲಿಕ ತಡೆಗೋಡೆ ನಿರ್ಮಿಸಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದ್ದು ಹದ್ದಿನ ಕಣ್ಣಿಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಭಕ್ತರಿಗೆ ತಲಕಾವೇರಿಯಲ್ಲಿ ಕೊಡಗು ಏಕೀಕರಣ ರಂಗದ ಮೂಲಕ ಅನ್ನ ಪ್ರಸಾದ ವಿತರಣೆಗೆ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ.

ಶಾಸಕರಿಂದ ಪರಿಶೀಲನೆ: ವಿರಾಜಪೇಟೆ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ(A S Ponnanna) ಶುಕ್ರವಾರ ಭಾಗಮಂಡಲ ಮತ್ತು ತಲಕಾವೇರಿಗೆ ತೆರಳಿ ಜಾತ್ರೆ ಸಿದ್ದತೆಗಳ ಪರಿಶೀಲನೆ ನಡೆಸಿದರು. ಇದೇ ಸಂದರ್ಭ ಭಾಗಮಂಡಲದಲ್ಲಿ 1 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಭಂಡಾರ ಕೊಠಡಿಯನ್ನು ಉದ್ಘಾಟಿಸಿದರು.

ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ(Dr Mantar Gowda), ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಶ್ರೀ ತಲಕಾವೇರಿ ಮತ್ತು ಭಗಂಡೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾನಂಡ ಪೃತ್ಯು, ಜಿಲ್ಲಾಧಿಕಾರಿ ಎಸ್.ಜಿ.ಸೋಮಶೇಖರ್, ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಕಾವೇರಿ ನೀರಾವರಿ ನಿಗಮ ಅಧಿಕಾರಿಗಳ ಸಹಿತ ಹಲವಾರು ಗಣ್ಯರು ಶನಿವಾರ ತೀರ್ಥೋದ್ಭವದ ಪವಿತ್ರ ಘಳಿಗೆಗೆ ಸಾಕ್ಷಿಯಾಗಲಿದ್ದಾರೆ.