ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Koppal Accident: ಕೊಪ್ಪಳದಲ್ಲಿ ಭೀಕರ ಅಪಘಾತ; ಟಾಟಾ ಏಸ್‌ಗೆ ಬೈಕ್ ಡಿಕ್ಕಿಯಾಗಿ ಮೂವರು ಸವಾರರ ದುರ್ಮರಣ

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬನ್ನಿಕೊಪ್ಪ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಅಪಘಾತ ನಡೆದಿದೆ. ಈದ್ ಮಿಲಾದ್ ಸಂಭ್ರಮದಲ್ಲಿ ಭಾಗಿಯಾಗಲು ನೆರೆಯ ಗದಗ ಜಿಲ್ಲೆಯ ನರಗುಂದದಿಂದ ಕೊಪ್ಪಳಕ್ಕೆ ಯುವಕರು ತೆರಳುತ್ತಿದ್ದ ವೇಳೆ ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಬೈಕ್‌ ಡಿಕ್ಕಿ ಹೊಡೆದು, ದುರಂತ ಸಂಭವಿಸಿದೆ.

ಕೊಪ್ಪಳದಲ್ಲಿ ಟಾಟಾ ಏಸ್‌ಗೆ ಬೈಕ್ ಡಿಕ್ಕಿಯಾಗಿ ಮೂವರ ದುರ್ಮರಣ

-

Prabhakara R
Prabhakara R Aug 26, 2026 7:51 PM

ಕೊಪ್ಪಳ: ಕೊಪ್ಪಳದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಟಾಟಾ ಏಸ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸವಾರರು ಮೃತಪಟ್ಟಿದ್ದಾರೆ. ಜಿಲ್ಲೆಯ (Koppal accident) ಕುಕನೂರು ತಾಲೂಕಿನ ಬನ್ನಿಕೊಪ್ಪ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಈ ಅಪಘಾತ ನಡೆದಿದೆ.

ನರಗುಂದದ ಮಾಬುಸಾಬ್ ಬುಡೇನಸಾಬ್ ಮಟಗೇರಿ (17), ಫಕ್ರುಸಾಬ್ ಹಸನಸಾಬ್ (18), ಚಾನುಸಾಬ್‌ ಮುಕ್ತಮ್ ಸಾಬ್‌ (15) ಮೃತರು. ಈದ್ ಮಿಲಾದ್ ಸಂಭ್ರಮದಲ್ಲಿ ಭಾಗಿಯಾಗಲು ನೆರೆಯ ಗದಗ ಜಿಲ್ಲೆಯ ನರಗುಂದದಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ವೇಳೆ ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಬೈಕ್‌ ಡಿಕ್ಕಿ ಹೊಡೆದಿದ್ದು, ಮೂವರೂ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ಸಾವು

ಉಡುಪಿ: ತೆಂಕಪೇಟೆಯ ದೇವಸ್ಥಾನದ ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. ಬೆಳ್ಳಂಪಳ್ಳಿ ಕುಕ್ಕಿಕಟ್ಟೆಯ ಕೃಷ್ಣ ನಾಯಕ್ ಅವರ ಪುತ್ರ ಆದಿತ್ಯ ನಾಯಕ್ (15) ಮೃತ ಬಾಲಕ.

ಕುಕ್ಕಿಕಟ್ಟೆಯ ಸರಕಾರಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಆದಿತ್ಯ ನಾಯಕ್ ದೇಗುಲದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೋಷಕರ ಜತೆ ಆಗಮಿಸಿದ್ದ. ಸರಿಯಾಗಿ ಈಜು ಬಾರದಿದ್ದರೂ ಇತರ ಬಾಲಕರ ಜತೆ ಕೆರೆಗೆ ಹಾರಿದ್ದ ಬಾಲಕ ಸುಮಾರು 20 ಅಡಿ ಆಳದ ಕೆರೆಯಲ್ಲಿ ಮುಳುಗಿದ್ದಾನೆ. ಬಾಲಕ ನೀರಿನಲ್ಲಿ ಮುಳುಗುತ್ತಿದ್ದಾಗ ಇತರ ಬಾಲಕರು ಅದನ್ನು ಕಂಡು ಗಾಬರಿಗೊಂಡು ಬೊಬ್ಬೆ ಹಾಕಿ ದೇವಸ್ಥಾನದಲ್ಲಿದ್ದ ಇತರರನ್ನು ಸಹಾಯಕ್ಕೆ ಕೂಗಿದ್ದರು.

Gold smuggling: ಬಾಯಲ್ಲಿ 82 ಗ್ರಾಂ ತೂಕದ ಚಿನ್ನದ ಕ್ಯಾಪ್ಸುಲ್ ಕಳ್ಳ ಸಾಗಣೆ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕ ಅರೆಸ್ಟ್

ಅಷ್ಟರಲ್ಲೇ ನೀರು ಕುಡಿದು ಸಂಪೂರ್ಣ ಮುಳುಗಿದ್ದ ಬಾಲಕ ಕೆರೆಯಲ್ಲಿ ಎಲ್ಲೂ ಕಾಣದಿದ್ದಾಗ ಕೂಡಲೇ ಈಜು ತಜ್ಞ ಈಶ್ವರ್ ಮಲ್ಪೆ ತಂಡವನ್ನು ಕರೆಯಿಸಲಾಗಿತ್ತು. ಈಶ್ವರ್ ಮಲ್ಪೆ ತಂಡದಿಂದ ಸುಮಾರು 15 ನಿಮಿಷ ಕಾರ್ಯಾಚರಣೆ ನಡೆಸಿದ ಬಳಿಕ ಬಾಲಕನನ್ನು ನೀರಿನಿಂದ ಮೇಲೆತ್ತಲಾಗಿದೆ. ಬಳಿಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಪರಿಶೀಲಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.