ಮಂಡ್ಯದಲ್ಲಿ ಘೋರ ಘಟನೆ; ಪಕ್ಕದ ಮನೆಯವರ ಕಿರುಕುಳ, ಬೆದರಿಕೆಗೆ ಬೇಸತ್ತು ತಾಯಿ-ಮಗಳು ಆತ್ಮಹತ್ಯೆ
Mandya News: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ಘಟನೆ ನಡೆದಿದೆ. ಪಕ್ಕದ ಮನೆಯವರ ಬೆದರಿಕೆಗೆ ಹೆದರಿ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ತಾಯಿ ಶಕುಂತಲಾದೇವಿ, ಪುತ್ರಿ ಪ್ರಿಯಾಂಕಾ. -
ಮಂಡ್ಯ, ಫೆ.9: ಪಕ್ಕದ ಮನೆಯವರ ಕಿರುಕುಳ ಹಾಗೂ ಬೆದರಿಕೆಗೆ ಬೇಸತ್ತು ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ (Mandya) ಜಿಲ್ಲೆ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ನಡೆದಿದೆ. ಶಕುಂತಲಾದೇವಿ (46), ಪುತ್ರಿ ಪ್ರಿಯಾಂಕಾ (19) ಮೃತರು. ಶಕುಂತಲಾದೇವಿ ಮಗಳ ಮದುವೆಗೆ ಸಿದ್ಧತೆ ಮಾಡಿಕೊಳ್ತಿದದರು. ಇತ್ತ ಪ್ರಿಯಾಂಕಾ ಕೂಡ ಗಂಡನ ಮನೆ ಸೇರುವ ತವಕದಲ್ಲಿದ್ದಳು. ಆದರೆ, ಇವರ ಆತ್ಮಹತ್ಯೆಯಿಂದ ಮದುವೆ ಮನೆಯಲ್ಲಿ ಸೂತಕ ಆವರಿಸಿದೆ.
ಪಕ್ಕದ ಮನೆಯ ವ್ಯಕ್ತಿಯ ಬೆದರಿಕೆಗೆ ಹೆದರಿ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಕ್ಕದ ಮನೆಯ ನಿವಾಸಿ 35 ವರ್ಷದ ವಿವಾಹಿತ ಮುತ್ತುರಾಜು ಎಂಬ ವ್ಯಕ್ತಿ, ನನ್ನ ಮಗಳಾದ ಪ್ರಿಯಾಳನ್ನು ಪರಿಚಯ ಮಾಡಿಕೊಂಡು, ನಿನ್ನನ್ನು ಮದುವೆ ಮಾಡಿಕೊಳ್ಳುವೆ ಎಂದು ಪುಸಲಾಯಿಸಿದ್ದಾನೆ. ಇದಕ್ಕೆ ಯುವತಿ ತಂದೆ-ತಾಯಿ ಒಪ್ಪದೆ, ನಿನಗೆ ಈಗಾಗಲೇ ಮದುವೆಯಾಗಿದ್ದು, ಹೆಂಡತಿ ಮತ್ತು ಮಕ್ಕಳಿದ್ದಾರೆ. ಮತ್ತೆ ಮದುವೆ ಸಾಧ್ಯವಿಲ್ಲ ಎಂದು ಮುತ್ತುರಾಜನಿಗೆ ಬುದ್ದಿ ಹೇಳಿದ್ದಾರೆ. ನಂತರ ಮಗಳಾದ ಪ್ರಿಯಾಳಿಗೆ ಬೇರೆಯ ವರನಿಗೆ ಮದುವೆ ಮಾಡೋಣ ಎಂದು ಸಿದ್ದತೆ ಮಾಡಿಕೊಳ್ಳುತ್ತಿರುವ ವಿಷಯ ತಿಳಿದ ಮುತ್ತುರಾಜು, ಯುವತಿಗೆ ತಾಯಿ ಶಕುಂತಲಾ ಅವರಿಗೆ ಕರೆ ಮಾಡಿ, ಪ್ರಿಯಾಳನ್ನು ಬೇರೆ ಕಡೆಗೆ ಮದುವೆ ಮಾಡಿದರೇ ನಿಮ್ಮನ್ನು ಕೊಲೆ ಮಾಡುವೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಬೀದರ್‌ನಲ್ಲಿ ಭೀಕರ ಅಪಘಾತ; ಬ್ರಿಡ್ಜ್‌ಗೆ ಸ್ಕೂಟಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರ ದುರ್ಮರಣ
ಇದರಿಂದ ಮನನೊಂದ ಶಕುಂತಲಾ ಮತ್ತು ಪ್ರಿಯಾ ಇಬ್ಬರು ಭಾನುವಾರ ಬೆಳಗ್ಗೆ ನೇಣು ಬಿಗಿದುಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಂದೆ ಎಂ.ಮಹೇಶ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಗಳ್ಳರಿಂದ ಬಿಡಿಸಿಕೊಳ್ಳುವಾಗ ಬಿದ್ದು ಮಹಿಳೆ ಸಾವು
ಬೆಂಗಳೂರು: ಸರಗಳ್ಳರು (chain snatchers) ಕತ್ತಿನಲ್ಲಿದ್ದ ಸರ ಕದಿಯಲು ಯತ್ನಿಸುತ್ತಿದ್ದಾಗ ಅವರಿಂದ ಬಿಡಿಸಿಕೊಳ್ಳಲು ಯತ್ನಿಸಿ ಕುಸಿದು ಬಿದ್ದು ಮಹಿಳೆ ಒಬ್ಬರು ಸಾವನ್ನಪ್ಪಿರುವ (woman death) ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಜ್ಯೋತಿ (45) ಎಂದು ಗುರುತಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಮನೆಯ ಮುಂದೆ ಕಸ ಗುಡಿಸುತ್ತಿದ್ದಾಗ ಸರಗಳ್ಳರು ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿಯಾಗುತ್ತಿದ್ದರು. ಇದೇ ವೇಳೆ ಕಳ್ಳರು ಸ್ಪ್ರೇ ಸಿಂಪಡಿಸಿದ್ದರಿಂದ ಮಹಿಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸರಗಳ್ಳರ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ.