ಪಾಕ್ ಜಲಸಂಧಿಯ 29 ಕಿಲೋ ಮೀಟರ್ ದೂರವನ್ನು 10 ಗಂಟೆಯೊಳಗೆ ಈಜಿ ದಾಖಲೆ ನಿರ್ಮಿಸಿದ 7 ವರ್ಷದ ಪೋರ
Viral Video: ಜಾರ್ಖಂಡ್‌ನ ರಾಂಚಿಯ ಬಾಲಕನೊಬ್ಬ ಪಾಕ್ ಜಲಸಂಧಿ ಈಜಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ರಾಂಚಿಯ ಏಳು ವರ್ಷದ ಬಾಲಕ ಇಶಾಂಕ್ ಶ್ರೀಲಂಕಾ ಮತ್ತು ಭಾರತದ ನಡುವಿನ ಅಪಾಯಕಾರಿಯಾದ ಸಮುದ್ರ ಮಾರ್ಗವನ್ನು ದಾಟುವ ಮೂಲಕ ಅಪರೂಪದ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿದ್ದಾನೆ. ಸದ್ಯ ಈ ಬಾಲಕನ ಸಾಧನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಪಾಕ್ ಸಮುದ್ರ ಮಾರ್ಗ ಈಜಿ ವಿಶ್ವ ದಾಖಲೆ ಬರೆದ ಬಾಲಕ ಇಶಾಂಕ್ -
ರಾಂಚಿ, ಮೇ 1: ಇಂದು ವಿದ್ಯಾರ್ಥಿಗಳ ಶಿಕ್ಷಣದ ಜತೆಗೆ ಅವರ ಕ್ರಿಯಾಶೀಲತೆ ಕೂಡ ಪ್ರಮುಖವಾಗುತ್ತದೆ. ಇದೀಗ ಜಾರ್ಖಂಡ್‌ನ ರಾಂಚಿಯ 7 ವರ್ಷದ ಬಾಲಕನೊಬ್ಬ ಪಾಕ್ ಜಲಸಂಧಿ ಈಜಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ರಾಂಚಿಯ ಬಾಲಕ ಇಶಾಂಕ್ ಶ್ರೀಲಂಕಾ ಮತ್ತು ಭಾರತದ ನಡುವಿನ ಅಪಾಯಕಾರಿಯಾದ ಸಮುದ್ರ ಮಾರ್ಗವನ್ನು ದಾಟುವ ಮೂಲಕ ಅಪರೂಪದ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿದ್ದಾನೆ. ಸದ್ಯ ಈ ಬಾಲಕನ ಸಾಧನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ.
ಬಾಲಕನು 9 ಗಂಟೆ 50 ನಿಮಿಷಗಳಲ್ಲಿ 29 ಕಿಲೋ ಮೀಟರ್ ದೂರವನ್ನು ಕ್ರಮಿಸಿದ್ದಾನೆ. ಅಷ್ಟೇ ಅಲ್ಲದೆ ಈ ಮಾರ್ಗವನ್ನು ತಲುಪಿದ ವಿಶ್ವದ ಅತ್ಯಂತ ಕಿರಿಯ ಈಜುಗಾರ ಎಂಬ ಗೌರವಕ್ಕೂ ಪಾತ್ರನಾಗಿದ್ದಾನೆ. ಬಾಲಕನ ಸಾಧನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದು ಅಪ್ರತಿಮ ಸಾಧನೆ ಎಂದು ಕೊಂಡಾಡಿದ್ದಾರೆ.
ವಿಡಿಯೊ ನೋಡಿ:
#Watch | 7-Year-Old From Jharkhand Swims 29 Km In Nearly 10 Hours, Creates Record pic.twitter.com/wPSUJscpH8
— NDTV (@ndtv) May 1, 2026
ಬಾಲಕನು ಶ್ರೀಲಂಕಾದ ತಲೈಮನ್ನಾರ್‌ನಿಂದ ಭಾರತದ ಧನುಷ್ಕೋಡಿಯವರೆಗೆ ಪ್ರಯಾಣಿಸಿದ್ದು ಕೇವಲ 9 ಗಂಟೆ 50 ನಿಮಿಷದಲ್ಲಿಯೇ ಈಜು ಮುಗಿಸಿದ್ದಾನೆ. ಈ ಸಾಧನೆಯನ್ನು ಏಪ್ರಿಲ್ 30ರಂದು ಪೂರ್ಣಗೊಳಿಸಲಾಗಿದ್ದು, ಬಾಲಕನ ಸಾಧನೆಗಾಗಿ, ಯೂನಿವರ್ಸಲ್ ರೆಕಾರ್ಡ್ಸ್ ಫೋರಮ್‌ನಿಂದ ಅತ್ಯಂತ ಕಿರಿಯ ಮತ್ತು ವೇಗದ ಈಜುಗಾರ ಎಂಬ ವಿಶ್ವ ದಾಖಲೆ ಪ್ರಮಾಣ ಪತ್ರವನ್ನು ನೀಡಲಾಗಿದೆ.
ಅಸೆಂಬ್ಲಿಯಲ್ಲೇ ಬಿಟ್ಟಿ ಹಣಕ್ಕಾಗಿ ಮುಗಿಬಿದ್ದ ಪಾಕ್ ಸಂಸದರು
ಇಂತಹ ಅಪ್ರತಿಮ ಸಾಧನೆಗೆ ತರಬೇತಿಯೂ ಪ್ರಮುಖವಾಗಿದ್ದು, ಇಶಾಂಕ್ ರಾಂಚಿಯ ಧುರ್ವಾ ಅಣೆಕಟ್ಟಿನಲ್ಲಿ ಪ್ರತಿದಿನ 4ರಿಂದ 5 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದ. ತರಬೇತುದಾರರಾದ ಅಮನ್ ಕುಮಾರ್ ಜೈಸ್ವಾಲ್ ಮತ್ತು ಬಜರಂಗ್ ಕುಮಾರ್ ಅವರ ಮಾರ್ಗದರ್ಶನದ ಮೂಲಕ ವಿಶೇಷ ತರಬೇತಿ ಪಡೆದಿದ್ದಾನೆ. ಈ ಸಾಧನೆಗೆ ಸ್ಥಳೀಯರು ಮೆಚ್ಚುಗೆ ಸೂಚಿಸಿದ್ದು, ಶಾಲೆಯೂ ಪ್ರಶಂಸಿಸಿದೆ.
ಇಶಾಂಕ್ ಸಾಧನೆ ಶಾಲೆ, ರಾಂಚಿ ನಗರ ಮತ್ತು ಇಡೀ ದೇಶಕ್ಕೆ ಹೆಮ್ಮೆಯ ವಿಷಯ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ವಿಡಿಯೊ ನೋಡಿದ ಅನೇಕರು ಲೈಕ್, ಕಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಬಾಲಕನ ಸಾಧನೆ ಇತರರಿಗೂ ಸ್ಪೂರ್ತಿ ಎಂದು ಬರೆದಿದ್ದಾರೆ. ಮತ್ತೊಬ್ಬರು ಬಾಲಕನ ಧೈರ್ಯಕ್ಕೆ ತನ್ನದೊಂದು ಸಲಾಂ ಎಂದಿದ್ದಾರೆ.