C.N. Muktha: ಕನ್ನಡದ ಖ್ಯಾತ ಕಾದಂಬರಿಗಾರ್ತಿ ಸಿ.ಎನ್.ಮುಕ್ತಾ ಅನಾರೋಗ್ಯದಿಂದ ನಿಧನ
ಕಳ್ಳಂಬೆಳ್ಳ ನರಸಿಂಹಮೂರ್ತಿ ಮುಕ್ತಾ ಅವರು ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ 25 ವರ್ಷಕ್ಕೂ ಹೆಚ್ಚು ಕಾಲ ವಿವಿಧೆಡೆ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿದ್ದರು. ಇವರ 75ಕ್ಕೂ ಅಧಿಕ ಕಾದಂಬರಿ, 15ಕ್ಕೂ ಅಧಿಕ ಕಥಾಸಂಕಲನಗಳು ಪ್ರಕಟವಾಗಿವೆ.
-
ಮೈಸೂರು: ಕನ್ನಡದ ಖ್ಯಾತ ಲೇಖಕಿ, ಕಾದಂಬರಿಗಾರ್ತಿ ಸಿ.ಎನ್.ಮುಕ್ತಾ (C.N. Muktha) (75) ಅವರು ಅನಾರೋಗ್ಯದಿಂದ ನಗರದ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.
ಕಳ್ಳಂಬೆಳ್ಳ ನರಸಿಂಹಮೂರ್ತಿ ಮುಕ್ತಾ ಅವರು ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ 25 ವರ್ಷಕ್ಕೂ ಹೆಚ್ಚು ಕಾಲ ವಿವಿಧೆಡೆ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿದ್ದರು. ಅವರ ಕಾದಂಬರಿಗಳಲ್ಲಿ ಸುಖದ ಸೋಪಾನ, ಕ್ಷಮಯಾ ಧರಿತ್ರಿ, ದಡ ಸೇರಿದ ನೌಕೆ, ಜೀವನಚಕ್ರ, ಅಮೃತಮಯಿ, ವಿಮುಕ್ತಿ ಪ್ರಸಿದ್ದವಾದವು.
ಇವರ ಕಾದಂಬರಿಗಳು ರಾಜ್ಯದ ಪ್ರಮುಖ ವಾರಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ. ಅಲ್ಲದೆ, 75ಕ್ಕೂ ಅಧಿಕ ಕಾದಂಬರಿ, 15ಕ್ಕೂ ಅಧಿಕ ಕಥಾಸಂಕಲನಗಳು ಪ್ರಕಟವಾಗಿವೆ. ಅವರ ವಿಮುಕ್ತಿ ಕಾದಂಬರಿ ಆಧರಿಸಿ ರಾಜೇಂದ್ರಸಿಂಗ್ ಬಾಬು ಅವರು ದೋಣಿ ಸಾಗಲಿ ಸಿನಿಮಾ ನಿರ್ದೇಶಿಸಿದ್ದರು. ಅಲ್ಲದೆ ಮೇಘ ಮಂದಾರ ಕಾದಂಬರಿ ಆಧರಿಸಿ ಕೋಡ್ಲು ರಾಮಕೃಷ್ಣ ಅವರು ಮಿಸ್ ಕ್ಯಾಲಿಫೋರ್ನಿಯಾ ಸಿನಿಮಾ ನಿರ್ದೇಶಿಸಿದ್ದರು.
ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.
ಕಾಡುಗೋಡಿ ವೆನ್ನೆಲ್ಲಾ ಹತ್ಯೆ; ಕರುಳ ಕುಡಿಯನ್ನೇ ಕೊಂದ ಪ್ರಿಯಕರನಿಗೆ ನೆರವಾದ ಪಾಪಿ ತಾಯಿ ಪ್ರಿಯಾಂಕಾಗೆ ಜಾಮೀನು
ಅವಿವಾಹಿತರಾಗಿದ್ದ ಅವರಿಗೆ ಸಹೋದರ, ಸಹೋದರಿ ಇದ್ದಾರೆ. ಲೇಖಕರಾಗಿದ್ದ ನವರತ್ನರಾಮ್ ರಾವ್ ಅವರು ಇವರ ಚಿಕ್ಕಪ್ಪ. ಮೃತರ ಅಂತ್ಯಕ್ರಿಯೆಯನ್ನು ಶುಕ್ರವಾರ ಮಧ್ಯಾಹ್ನ ನಗರದ ಚಾಮುಂಡಿಬೆಟ್ಟದ ತಪ್ಪಲಿನ ವಿದ್ಯುತ್ ಚಿತಾಗಾರದಲ್ಲಿ ನೆರವೇರಿದೆ.