ʼʼಮುಂದೆ ಇದೆ ಭಾರಿ ಸವಾಲು, ಎಚ್ಚರಿಕೆ ಅಗತ್ಯʼʼ: ಡಿ.ಕೆ. ಶಿವಕುಮಾರ್‌ಗೆ ಸಿಎಂ ಪಟ್ಟ ದೊರೆಯುತ್ತಿದ್ದಂತೆ ಸ್ಫೋಟಕ ಭವಿಷ್ಯ ನುಡಿದ ಕರಿಬಸವೇಶ್ವರ ಸ್ವಾಮೀಜಿ
DK Shivakumar: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದ್ಯದಲ್ಲೇ ಸಿಎಂ ಪಟ್ಟಕ್ಕೆ ಏರಲಿದ್ದಾರೆ. ಹಾಗಂತ ಡಿಕೆಶಿ ಅವರ ಮುಂದಿನ ಹಾದಿ ಹೂವಿನ ಹಾಸಲ್ಲ. ಕಲ್ಲು-ಮುಳ್ಳುಗಳ, ಸವಾಲಿನ ಹಾದಿಯೇ ಮುಂದಿದೆ ಎಂದು ಡಿಕೆಶಿ ಅವರ ಪರಮ ದೈವ, ತುಮಕೂರಿನ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿಬಸವೇಶ್ವರ ಸ್ವಾಮೀಜಿ (ಅಜ್ಜಯ್ಯ) ಹೇಳಿದ್ದಾರೆ. ಸದ್ಯ ಈ ಭವಿಷ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಅಜ್ಜಯ್ಯ ಮತ್ತು ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -
ಬೆಂಗಳೂರು, ಮೇ 28: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಸದ್ಯದಲ್ಲೇ ಸಿಎಂ ಪಟ್ಟಕ್ಕೆ ಏರಲಿದ್ದಾರೆ. ಹಾಗಂತ ಡಿಕೆಶಿ ಅವರ ಮುಂದಿನ ಹಾದಿ ಹೂವಿನ ಹಾಸಲ್ಲ. ಕಲ್ಲು-ಮುಳ್ಳುಗಳ, ಸವಾಲಿನ ಹಾದಿಯೇ ಮುಂದಿದೆ. ಅದರ ಸೂಚನೆ ಎಂಬಂತೆ ಡಿಕೆಶಿ ಅವರ ಪರಮ ದೈವ, ತುಮಕೂರಿನ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿಬಸವೇಶ್ವರ ಸ್ವಾಮೀಜಿ (ಅಜ್ಜಯ್ಯ) ಭಯಾನಕ ಭವಿಷ್ಯ ನುಡಿದಿದ್ದಾರೆ.
“ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಮಾಧ್ಯಮಗಳ ಮುಂದೆ ಯಾವುದೇ ರೀತಿಯ ಹೇಳಿಕೆಗಳನ್ನು ಕೊಡಬೇಡಿ. ಈಗ ಆಡುವ ಒಂದು ಸಣ್ಣ ಮಾತು ಕೂಡ ಕೆಲಸವನ್ನು ಕೆಡಿಸಬಹುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್; ಡಿಕೆಶಿ ಸೇರಿ ಹಲವರು ಭಾಗಿ
ಕರಿಬಸವೇಶ್ವರ ಸ್ವಾಮೀಜಿ ನೀಡಿದ ಎಚ್ಚರಿಕೆ ಏನು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯದಲ್ಲೇ ಶನಿ ದೆಸೆ ಆರಂಭವಾಗಲಿದೆಯಂತೆ. ಗ್ರಹಗತಿಗಳ ಈ ಏರುಪೇರಿನ ಕಾಲದಲ್ಲಿ ಅತ್ಯಂತ ಜಾಗರೂಕರಾಗಿ ಇರಬೇಕು. ಇಲ್ಲದಿದ್ದರೆ ಸಿಎಂ ಕುರ್ಚಿ ಅತ್ಯಂತ ಹತ್ತಿರ ಬಂದರೂ ಕೊನೆಯ ಕ್ಷಣದಲ್ಲಿ ಕೈ ತಪ್ಪುವ ಗಂಡಾಂತರ ಎದುರಾಗಲಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಶೀರ್ವಾದ ಇರಲಿದೆ
ʼʼಶ್ರೀಮಠದ ಆಶೀರ್ವಾದ ಡಿಕೆಶಿ ಅವರಿಗೆ ಇರುತ್ತದೆ. ರಾಜ ಪ್ರತ್ಯಕ್ಷ ದೇವತಾ. ರಾಜ್ಯವನ್ನು ಆಳುವಂತ ದೊರೆ ನಾಯಕ. ಡಿಕೆಶಿ ರೈತರ ಪರ, ಬಡವರ ಪರ ಇರುವ ನಾಯಕನಾಗಿ ಹೊರಹೊಮ್ಮುತ್ತಾರೆʼʼ ಎಂದಿದ್ದಾರೆ.
ʼʼಶ್ರೀ ಮಠದ ಧರ್ಮದ ಧ್ವಜವನ್ನು ಕೊಟ್ಟು ಆರ್ಶಿವಾದ ಮಾಡುವ ಕಾಲ ಹತ್ತಿರ ಬಂದಿದೆ. ಎಲ್ಲರ ಪ್ರೀತಿ ವಿಶ್ವಾಸದಿಂದ ಅವರ ಬಾಳು ಬಂಗಾರವಾಗಲೆಂದು ಆರ್ಶಿವಾದ ಮಾಡುತ್ತೇನೆ. ಅವರ ಪ್ರಮಾಣ ವಚನ ಆಗುವವರೆಗೂ ನಾನು ಮಾತಾನಾಡಬಾರದು ಅಂತಿದ್ದೆ. ಶಾಸ್ತ್ರದ ಪ್ರಕಾರ ಸಕಲ ದೋಷವನ್ನು ನೋಡಿಕೊಂಡು ಡಿ.ಕೆ. ಶಿವಕುಮಾರ್ ನಡೆದುಕೊಳ್ಳಬೇಕಾಗುತ್ತದೆʼʼ ಎಂದು ಹೇಳಿದ್ದಾರೆ.
'ʼಮುಂದಿನ 8 ವರ್ಷ ಡಿಕೆಶಿಯೇ ಸಿಎಂ": ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯ
ಡಿಕೆಶಿಗೆ ರಾಜಯೋಗ ಇದೆ ಎಂದ ರಾಜಗುರು ದ್ವಾರಕನಾಥ್ ಗುರೂಜಿ
ʼʼಮುಂದಿನ 8 ವರ್ಷ ಡಿ.ಕೆ. ಶಿವಕುಮಾರ್ ಅವರನ್ನು ಅಲ್ಲಾಡಿಸಲು ಯಾರಿಗೂ ಆಗಲ್ಲʼʼ ಎಂದು ಇತ್ತ ಡಿಕೆಶಿ ಅವರ ಪರಮಾಪ್ತ ಗುರು ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ. ʼ'ಡಿ.ಕೆ. ಶಿವಕುಮಾರ್ ಸೋಮವಾರದ ಒಳಗೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ಮುಂದಿನ 8 ವರ್ಷಗಳ ಕಾಲ ಅವರ ಅಧಿಕಾರವನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದಿದ್ದಾರೆ. ʼʼಈಗ ಡಿಕೆಶಿಗೆ ಅತ್ಯಂತ ಸುವರ್ಣ ಸಮಯ ಆರಂಭವಾಗಿದೆ. ಗುರು ಈಗ ಮಿಥುನ ರಾಶಿಯಲ್ಲಿದ್ದಾನೆ. ಇದು ಡಿಕೆಶಿಗೆ ಭಾರಿ ರಾಜಯೋಗ ತರಲಿದೆ. ಹೀಗಾಗಿ ನನ್ನ ಲೆಕ್ಕಾಚಾರದ ಪ್ರಕಾರ ಮುಂದಿನ 8 ವರ್ಷ ರಾಜ್ಯದಲ್ಲಿ ಅವನನ್ನು ಸೋಲಿಸಲು ಯಾರಿಂದಲೂ ಆಗಲ್ಲʼʼ ಎಂದು ಅವರು ಹೇಳಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.