ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಂತ್ರ ಮಾಗಲ್ಯದ ಮೂಲಕ ಹೊಸ ಬಾಳಿಗೆ ಕಾಲಿಟ್ಟ ಗಾಯಕಿ ಸುಹಾನಾ ಸೈಯದ್‌

Mantra Mangalya: ಸುಹಾನಾ ಸೈಯದ್‌ ಅವರು ಮಂತ್ರ ಮಾಂಗಲ್ಯದ ಆಶಯದಂತೆ ನಿತೀನ್‌ ಶಿವಾಂಶ್‌ ಅವರನ್ನು ಸರಳವಾಗಿ ಅಂತರ್ ಧರ್ಮೀಯ ವಿವಾಹವಾದರು. ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸರ ಸರ್ಪಗಾವಲಿನಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಮಂತ್ರ ಮಾಗಲ್ಯದ ಮೂಲಕ ಹೊಸ ಬಾಳಿಗೆ ಕಾಲಿಟ್ಟ ಸುಹಾನಾ ಸೈಯದ್‌

-

ಹರೀಶ್‌ ಕೇರ ಹರೀಶ್‌ ಕೇರ Oct 18, 2025 7:28 AM

ಬೆಂಗಳೂರು: ಜೀ ಕನ್ನಡ ಚಾನೆಲ್‌ನ ‘ಸರಿಗಮಪ’ (saregamapa) ರಿಯಾಲಿಟಿ ಶೋ ಮೂಲಕ ಫೇಮಸ್ ಆದ ಸುಹಾನಾ ಸೈಯದ್ (Suhana Sayed) ಅವರು ಈಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ರಂಗಭೂಮಿ ಕಲಾವಿದ ನಿತೀನ್ ಶಿವಾಂಶ್ (Nitin Shivansh) ಜೊತೆ ಅವರ ಮದುವೆ ನೆರವೇರಿದೆ. ಅವರು ಮಂತ್ರ ಮಾಂಗಲ್ಯದ ಮೂಲಕ ಕೆಲವೇ ಆಪ್ತೇಷ್ಟರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದಾರೆ.

ಸುಹಾನಾ ಅವರು ‘ಸರಿಗಮಪ’ ಶೋಗೆ ತೆರಳಿ ಮಿಂಚಿದ್ದರು. ಆ ಬಳಿಕ ‘ಶ್ರೀಕೃಷ್ಣನೇ ಶ್ರೀನಿವಾಸನೇ’ ಭಜನೆ ಹೇಳಿದ್ದರಿಂದ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದರು. ಮುಸ್ಲಿಂ ಧರ್ಮದ ಅನೇಕರು ಅವರ ಈ ಕೆಲಸವನ್ನು ಖಂಡಿಸಿದರು. ಈಗ ಅವರು ಗೆಳೆಯ ನಿತೀನ್ ಜೊತೆ ವಿವಾಹ ಆಗಿದ್ದಾರೆ. ಅವರ ಮಂತ್ರ ಮಾಂಗಲ್ಯ ಮಾಡಿಕೊಳ್ಳುತ್ತಿರುವ ವಿಡಿಯೋ ಗಮನ ಸೆಳೆದಿದೆ.

ಮಂತ್ರ ಮಾಂಗಲ್ಯದ ಆಶಯದಂತೆ ಅವರು ಸರಳವಾಗಿ ಅಂತರ್ ಧರ್ಮೀಯ ವಿವಾಹವಾದರು. ಇಬ್ಬರ ಧರ್ಮ ಬೇರೆ ಬೇರೆಯಾಗಿದ್ದರೂ ಧೈರ್ಯವಾಗಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಜಬ್ ಧರಿಸಿ ಹಿಂದೂ ಭಜನೆಯನ್ನು ಸುಹಾನ ಹಾಡುವಾಗ ತೀವ್ರ ವಿರೋಧ ವ್ಯಕ್ತವಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸರ ಸರ್ಪಗಾವಲಿನಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಸುಹಾನಾ ಹಾಗೂ ನಿತೀನ್ ದಂಪತಿಗೆ ಎಲ್ಲರೂ ಶುಭ ಕೋರಿದ್ದು, ಅವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: Singer Suhaana Syed: ಹಿಂದೂ ಹುಡುಗನ ಜೊತೆ ಸರಿಗಮಪ ಗಾಯಕಿ ಸುಹಾನಾ ಸೈಯದ್‌ಗೆ ಲವ್!

ಸುಹಾನಾ ಹಾಗೂ ನಿತೀನ್ 16 ವರ್ಷಗಳ ಹಿಂದಿನಿಂದಲೇ ಪರಿಚಿತರು. ಈ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಸುಹಾನಾ ಈ ಬಗ್ಗೆ ಮಾಹಿತಿ ನೀಡಿದ್ದರು. ‘ಪ್ರತಿ ಜೀವವೂ ಪ್ರೀತಿಗಾಗಿ ಹುಡುಕಾಡುತ್ತದೆ. ಪ್ರತಿ ಹೃದಯವು ಪ್ರೀತಿಗಾಗಿ ಹಾತೊರೆಯುತ್ತದೆ. ಪ್ರೀತಿಗೆ ಯಾವುದೇ ಮಿತಿಯಿಲ್ಲ. ಅದು ದೂರ, ಅನುಮಾನಗಳು ಮತ್ತು ಭಯಗಳನ್ನು ಮೀರಿದ ಪ್ರಯಾಣ. ಆ ಅಪರಿಮಿತ ಪ್ರೀತಿಗೆ ನಾವು ಸಾಕ್ಷಿಗಳಾಗಿ ನಿಲ್ಲುತ್ತೇವೆ. ಇಂದು, ನಾವು ನಮ್ಮ ರಹಸ್ಯವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಾ ಇದ್ದೇವೆ. ನಿಮ್ಮ ಆಶೀರ್ವಾದವನ್ನು ಕೋರುತ್ತೇವೆ’ ಎಂದು ಸುಹಾನಾ ಬರೆದುಕೊಂಡಿದ್ದರು.