ಅಮೆಜಾನ್ ಇಂಡಿಯಾದಲ್ಲಿ ಕ್ಯುರೇಟೆಡ್ ಆಯ್ಕೆಗಳು, AI-ಚಾಲಿತ ಹುಡುಕಾಟ ಮತ್ತು ಅತಿ ವೇಗದ ವಿತರಣೆಯೊಂದಿಗೆ ಗ್ರಾಹಕರಿಂದ ವ್ಯಾಲೆಂಟೈನ್ಸ್ ಡೇ ಶಾಪಿಂಗ್
ಈ ಬಾರಿಯ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಚಾಕೊಲೇಟ್, ತಾಜಾ ಹೂವುಗಳು, ಸುಗಂಧ ದ್ರವ್ಯಗಳು, ಆಭರಣಗಳು, ಸೌಂದರ್ಯವರ್ಧಕಗಳು ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ವಿಭಾಗ ಗಳಲ್ಲಿ ಪ್ರೀಮಿಯಂ ಉಡುಗೊರೆಗಳ ಖರೀದಿಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಜೆನ್-ಜೆಡ್ (Gen Z) ಮತ್ತು ಮಿಲೇನಿಯಲ್ ಗ್ರಾಹಕರಲ್ಲಿ ವಿಶೇಷ ದಿನಗಳನ್ನು ಆಚರಿಸುವ ಉತ್ಸಾಹ ಹೆಚ್ಚುತ್ತಿರುವುದು ಈ ಟ್ರೆಂಡ್‌ಗಳಲ್ಲಿ ಕಂಡುಬರುತ್ತಿದೆ
-
ಬೆಂಗಳೂರು: ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಪ್ರೀಮಿಯಂ ಮತ್ತು ವೈಯಕ್ತಿಕಗೊಳಿಸಿದ ಉಡುಗೊರೆಗಳನ್ನು ಖರೀದಿಸಲು ಗ್ರಾಹಕರು ಕ್ಯುರೇಟೆಡ್ ಆಯ್ಕೆಗಳು, AI-ಚಾಲಿತ ಪರಿಕರ ಗಳು ಮತ್ತು ಅತಿ ವೇಗದ ವಿತರಣಾ ಸೌಲಭ್ಯಗಳನ್ನು ಬಳಸಿಕೊಂಡಿದ್ದಾರೆ ಎಂದು ಅಮೆಜಾನ್ ಇಂಡಿಯಾ ಇಂದು ತಿಳಿಸಿದೆ. ವ್ಯಾಪಕ ಶ್ರೇಣಿಯ ಆಯ್ಕೆಗಳು ಮತ್ತು ವೇಗದ ವಿತರಣೆಯಿಂದಾಗಿ ಗ್ರಾಹಕರು ಚಾಕೊಲೇಟ್, ತಾಜಾ ಹೂವುಗಳು, ಸುಗಂಧ ದ್ರವ್ಯಗಳು, ಆಭರಣಗಳು, ಸೌಂದರ್ಯವರ್ಧಕಗಳು, ಫ್ಯಾಷನ್, ಎಲೆಕ್ಟ್ರಾನಿಕ್ಸ್ ಮತ್ತು ಗಿಫ್ಟ್ ಕಾರ್ಡ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದಾರೆ.
ಈ ಕುರಿತು ಮಾತನಾಡಿದ ಅಮೆಜಾನ್ ಇಂಡಿಯಾದ ಉಪಾಧ್ಯಕ್ಷ ಸೌರಭ್ ಶ್ರೀವಾಸ್ತವ, "ಈ ಬಾರಿಯ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಚಾಕೊಲೇಟ್, ತಾಜಾ ಹೂವುಗಳು, ಸುಗಂಧ ದ್ರವ್ಯಗಳು, ಆಭರಣಗಳು, ಸೌಂದರ್ಯವರ್ಧಕಗಳು ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ವಿಭಾಗಗಳಲ್ಲಿ ಪ್ರೀಮಿಯಂ ಉಡುಗೊರೆಗಳ ಖರೀದಿಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಜೆನ್-ಜೆಡ್ (Gen Z) ಮತ್ತು ಮಿಲೇನಿಯಲ್ ಗ್ರಾಹಕರಲ್ಲಿ ವಿಶೇಷ ದಿನಗಳನ್ನು ಆಚರಿಸುವ ಉತ್ಸಾಹ ಹೆಚ್ಚುತ್ತಿರುವುದು ಈ ಟ್ರೆಂಡ್‌ಗಳಲ್ಲಿ ಕಂಡುಬರುತ್ತಿದೆ. ಚಾಕೊಲೇಟ್ ಮತ್ತು ತಾಜಾ ಹೂವುಗಳು ಅಗ್ರ ಆಯ್ಕೆಗಳಾಗಿದ್ದು, ತಾಜಾ ಹೂವುಗಳ ಮಾರಾಟವೊಂದೇ ವಾರ್ಷಿಕವಾಗಿ 1.4 ಪಟ್ಟು ಹೆಚ್ಚಾಗಿದೆ. FlowerAura ಮತ್ತು IGP ನಂತಹ ಬ್ರಾಂಡ್‌ಗಳ 50, 24 ಮತ್ತು 12 ಕೆಂಪು ಗುಲಾಬಿಗಳ ಪ್ಯಾಕ್‌ಗಳು ಹೆಚ್ಚು ಜನಪ್ರಿಯವಾಗಿದ್ದವು. ಗ್ರಾಹಕರು ಉಡುಗೊರೆಗಳ ಆಯ್ಕೆಗಳನ್ನು ಕೇಳಲು ಮತ್ತು ಉತ್ಪನ್ನಗಳನ್ನು ಹೋಲಿಸಲು 'Rufus' ನಂತಹ AI ಪರಿಕರಗಳನ್ನು ಸುಲಭವಾಗಿ ಬಳಸಿಕೊಂಡಿದ್ದಾರೆ. ನಮ್ಮ ಕ್ಯುರೇಟೆಡ್ ಸ್ಟೋರ್‌ಫ್ರಂಟ್‌ಗಳು, ಗಿಫ್ಟ್ ಗೈಡ್‌ಗಳು ಮತ್ತು ಕೆಲವೇ ನಿಮಿಷಗಳಲ್ಲಿ ತಲುಪಿಸುವ ಅತಿ ವೇಗದ ವಿತರಣಾ ಆಯ್ಕೆಗಳನ್ನು ಗ್ರಾಹಕರು ಅಪಾರವಾಗಿ ಮೆಚ್ಚಿದ್ದಾರೆ," ಎಂದು ಹೇಳಿದರು.
ಇದನ್ನೂ ಓದಿ: Amazon.in ನಲ್ಲಿ ವ್ಯಾಲೆಂಟೈನ್ಸ್ ಡೇ ಸ್ಟೋರ್‌ನೊಂದಿಗೆ ಪ್ರೀತಿಯನ್ನು ಸಂಭ್ರಮಿಸಿ
ವಿಶಿಷ್ಟ ಮತ್ತು ವೈಯಕ್ತಿಕಗೊಳಿಸಿದ ಉಡುಗೊರೆಗಳೇ ವ್ಯಾಲೆಂಟೈನ್ಸ್ ಶಾಪಿಂಗ್‌ನಲ್ಲಿ ಪ್ರಮುಖವಾಗಿದ್ದವು
ಉಡುಗೊರೆ ವಿಭಾಗವು ಅತ್ಯಂತ ಜನಪ್ರಿಯ ವಿಭಾಗಗಳಲ್ಲಿ ಒಂದಾಗಿ ಹೊರಹೊಮ್ಮಿದ್ದು, ವಾರ್ಷಿಕವಾಗಿ (YoY) 1.2 ಪಟ್ಟು ಬೆಳವಣಿಗೆ ಕಂಡಿದೆ. ಇದರಲ್ಲಿ ಐಷಾರಾಮಿ ಚಾಕೊಲೇಟ್ ಗಳು ಮತ್ತು ಕ್ಯುರೇಟೆಡ್ ಹ್ಯಾಂಪರ್‌ಗಳಂತಹ ಪ್ರೀಮಿಯಂ ವಿಭಾಗಗಳು 1.3 ಪಟ್ಟು ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿವೆ. ಕೇಕ್ ಮತ್ತು ಹೂವುಗಳ ಕಾಂಬೋಗಳು ಹಾಗೂ ಎಕ್ಸ್‌ಪೀರಿಯೆನ್ಶಿಯಲ್ ಗಿಫ್ಟ್ ಸೆಟ್‌ಗಳು ಇತರ ಜನಪ್ರಿಯ ಆಯ್ಕೆಗಳಾಗಿದ್ದವು.
ಈ ವಿಭಾಗದಲ್ಲಿ FlowerAura, Healthy Treats, Lindt ಮತ್ತು Cadbury ಜನಪ್ರಿಯ ಬ್ರಾಂಡ್‌ಗಳಾಗಿದ್ದವು. ಫೆರೆರೋ ರೋಚರ್ ಕಲೆಕ್ಷನ್‌ಗಳು, ಕ್ಯುರೇಟೆಡ್ ಬಾತ್ ಅಂಡ್ ಬಾಡಿ ಗಿಫ್ಟ್ ಸೆಟ್‌ಗಳು, ಸುಗಂಧ ದ್ರವ್ಯದ ಹ್ಯಾಂಪರ್‌ಗಳು, ಸ್ಟ್ರಾಬೆರಿಗಳು, ಗುಲಾಬಿಗಳು ಮತ್ತು ಚಾಕೊಲೇಟ್ ಆಧಾರಿತ ಗಿಫ್ಟ್ ಬಾಕ್ಸ್‌ಗಳು ಅತಿ ಹೆಚ್ಚು ಮಾರಾಟವಾಗಿದ್ದು, ಆಕರ್ಷಕವಾಗಿ ಪ್ಯಾಕ್ ಮಾಡಲಾದ ಉಡುಗೊರೆಗಳಿಗೆ ಗ್ರಾಹಕರು ಹೆಚ್ಚಿನ ಆದ್ಯತೆ ನೀಡಿರುವುದನ್ನು ಇದು ತೋರಿಸುತ್ತದೆ. ಟಯರ್ 2 ಮತ್ತು 3 ನಗರಗಳ ಹೊಸ ಗ್ರಾಹಕರು ಹೆಚ್ಚಿನ ಬೆಳವಣಿಗೆ ಮತ್ತು ಆಸಕ್ತಿಯನ್ನು ಪ್ರದರ್ಶಿಸಿದ್ದು, ಮೆಟ್ರೋ ನಗರಗಳ ಆಚೆಗೂ ಇಂತಹ ವಿಶೇಷ ದಿನಗಳ ಉಡುಗೊರೆ ಸಂಸ್ಕೃತಿ ಆಳವಾಗಿ ವಿಸ್ತರಿಸುತ್ತಿರುವುದನ್ನು ಇದು ಪ್ರತಿಬಿಂಬಿಸುತ್ತದೆ.
ಸಾಂಪ್ರದಾಯಿಕ ಪ್ರೇಮ: ಚಾಕೊಲೇಟ್ ಮತ್ತು ತಾಜಾ ಹೂವುಗಳೇ ಮುಂಚೂಣಿಯಲ್ಲಿ
ತಾಜಾ ಹೂವುಗಳ ವಿಭಾಗವು ವಾರ್ಷಿಕವಾಗಿ 1.4 ಪಟ್ಟು ಬೆಳವಣಿಗೆ ಕಂಡಿದ್ದು, ಕ್ಯುರೇಟೆಡ್ ಫ್ಲೋರಲ್ ಗಿಫ್ಟ್‌ಗಳಿಗಾಗಿ ಗ್ರಾಹಕರ ಬೇಡಿಕೆ ಹೆಚ್ಚಾಗಿದೆ. ಈ ವಿಭಾಗವು ಜೆನ್-ಜೆಡ್ (Gen Z) ಮತ್ತು ಮಿಲೇನಿಯಲ್ ಗ್ರಾಹಕರಲ್ಲಿ ಹೆಚ್ಚಿನ ಆಕರ್ಷಣೆ ಪಡೆದಿದ್ದು, ಸಾಂಪ್ರದಾಯಿಕ ರೋಮ್ಯಾಂಟಿಕ್ ಆಯ್ಕೆಗಳು ಮಾರಾಟದ ಏರಿಕೆಗೆ ಕಾರಣವಾದವು. ಅತಿ ಹೆಚ್ಚು ಮಾರಾಟವಾದ ಉತ್ಪನ್ನಗಳಲ್ಲಿ, 50 ಕೆಂಪು ಗುಲಾಬಿಗಳ ಪ್ಯಾಕ್ ವಾರ್ಷಿಕವಾಗಿ 1.7 ಪಟ್ಟು ಹೆಚ್ಚಿನ ಬೆಳವಣಿಗೆ ಕಂಡಿದೆ. ನಂತರದ ಸ್ಥಾನಗಳಲ್ಲಿ 24 ಕೆಂಪು ಗುಲಾಬಿಗಳ ಪ್ಯಾಕ್ (1.3 ಪಟ್ಟು) ಮತ್ತು 12 ಮಿಶ್ರ ಗುಲಾಬಿಗಳ ಪ್ಯಾಕ್ (1.2 ಪಟ್ಟು) ಇದ್ದು, ಪ್ರೀಮಿಯಂ ಮತ್ತು ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಹೂವಿನ ಅಲಂಕಾರಗಳಿಗೆ ಗ್ರಾಹಕರ ಒಲವು ಹೆಚ್ಚಿರುವುದನ್ನು ಇದು ಸ್ಪಷ್ಟಪಡಿಸುತ್ತದೆ.
FlowerAura, IGP, The FloralMart, EG2i, Floralbay ಮತ್ತು Shades of Spring ಈ ವಿಭಾಗದ ಪ್ರಮುಖ ಬ್ರಾಂಡ್‌ಗಳಾಗಿದ್ದು, ಗ್ರಾಹಕರಿಗೆ ತಾಜಾ ಮತ್ತು ಪ್ರೀಮಿಯಂ ಹೂವಿನ ಆಯ್ಕೆಗಳನ್ನು ಒದಗಿಸಿವೆ.
ಐಷಾರಾಮಿ ಉಡುಗೊರೆಗಳಾಗಿ ಹೊರಹೊಮ್ಮಿದ ಫ್ಯಾಷನ್ ಮತ್ತು ಸೌಂದರ್ಯವರ್ಧಕಗಳು
ಈ ಬಾರಿಯ ವ್ಯಾಲೆಂಟೈನ್ಸ್ ಡೇ ದಿನದಂದು ಯುವ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ವಾರ್ಷಿಕವಾಗಿ (YoY) 1.3 ಪಟ್ಟು ಬೆಳವಣಿಗೆಗೆ ಕಾರಣರಾಗಿದ್ದಾರೆ. ಇದಲ್ಲದೆ, ಯುವಜನತೆಯನ್ನು ಕೇಂದ್ರೀಕರಿಸಿದ ಪ್ರಮುಖ ಬ್ರಾಂಡ್‌ಗಳಾದ Tokyo Talkies, Sassafras, Highlander, Fastrack, Bewakoof, GAP, The Souled Store, Lavie, Puma, Casio ಮತ್ತು Salty ಮಾರಾಟದಲ್ಲಿ 2 ಪಟ್ಟು ಬೆಳವಣಿಗೆ ಕಂಡುಬಂದಿದೆ.
ಆಭರಣಗಳ ವಿಭಾಗವು ಮತ್ತೊಂದು ಅತಿ ಹೆಚ್ಚು ಮಾರಾಟವಾದ ವಿಭಾಗವಾಗಿ ಹೊರಹೊಮ್ಮಿದ್ದು, ಬೇಡಿಕೆಯಲ್ಲಿ 1.4 ಪಟ್ಟು ಹೆಚ್ಚಳವಾಗಿದೆ. ಇದರ ಬೆನ್ನಲ್ಲೇ ವಾಚ್‌ಗಳು ಮತ್ತು ಸೌಂದರ್ಯವರ್ಧಕಗಳು (ಪ್ರತಿಯೊಂದೂ 1.3 ಪಟ್ಟು) ಹಾಗೂ ಉಡುಪುಗಳು (1.2 ಪಟ್ಟು) ಹೆಚ್ಚಿನ ಬೇಡಿಕೆ ಕಂಡಿವೆ. ಇದು ಯುವ ಗ್ರಾಹಕರಲ್ಲಿ ವಿಶೇಷ ಸಂದರ್ಭಗಳಿಗೆ ಪೂರಕವಾದ ಫ್ಯಾಷನ್ ಮತ್ತು ಆಕ್ಸೆಸರಿಗಳ ಬಗ್ಗೆ ಹೆಚ್ಚುತ್ತಿರುವ ಒಲವನ್ನು ಪ್ರತಿಬಿಂಬಿಸುತ್ತದೆ.
ಅತಿ ವೇಗದ ವಿತರಣೆ ಮತ್ತು ಅನುಕೂಲತೆಯಿಂದಾಗಿ ಕೊನೆಯ ಕ್ಷಣದ ಸಂಭ್ರಮಾಚರಣೆ
ದೆಹಲಿ ಎನ್‌ಸಿಆರ್, ಮುಂಬೈ ಮತ್ತು ಬೆಂಗಳೂರಿನ ಗ್ರಾಹಕರು ಚಾಕೊಲೇಟ್ ಹಾಗೂ ಉಡುಗೊರೆಗಳನ್ನು ಕೆಲವೇ ನಿಮಿಷಗಳಲ್ಲಿ ಪಡೆಯಲು Amazon Now ಮೊರೆ ಹೋಗಿ ದ್ದಾರೆ. ಸಾವಿರಾರು ಉತ್ಪನ್ನಗಳು ವಿಶೇಷ ಕೊಡುಗೆಗಳೊಂದಿಗೆ ಗ್ರಾಹಕರ ಪ್ರೀತಿಪಾತ್ರರನ್ನು ತಲುಪಿವೆ.