ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gubbi News: ಹಳೆ ವಿದ್ಯಾರ್ಥಿಗಳ ಸಂಘ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಲಿ : ಪ್ರಾಂಶುಪಾಲ ಡಾ.ಓ.ನಾಗರಾಜ್

ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹೆಚ್. ಟಿ.ಭೈರಪ್ಪ ಮಾತನಾಡಿ, ಕಾಲೇಜು ದಿನಗಳು ಪ್ರತಿಯೊಬ್ಬರ ಜೀವನದ ಸುವರ್ಣ ಕ್ಷಣಗಳು. ತಾವು ಕಲಿತ ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸುವುದು ಪ್ರತಿಯೊಬ್ಬ ಹಳೆ ವಿದ್ಯಾರ್ಥಿಯ ಕರ್ತವ್ಯ. ಈ ಸಂಸ್ಥೆ ಬೆಳೆದಂತೆ ನಾವೆಲ್ಲರೂ ಬೆಳೆದಿದ್ದೇವೆ ಎಂಬ ಹೆಮ್ಮೆ ನಮಗಿದೆ ಎಂದು ಅಭಿಪ್ರಾಯಪಟ್ಟರು.

ಹಳೆ ವಿದ್ಯಾರ್ಥಿಗಳ ಸಂಘ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಲಿ

-

Profile
Ashok Nayak Jul 21, 2026 11:02 PM

ಗುಬ್ಬಿ: ಶೈಕ್ಷಣಿಕ ಮತ್ತು ಭೌತಿಕ ಅಭಿವೃದ್ಧಿಯ ಮೂಲಕ ಉತ್ತಮ ವಾತಾವರಣ ಕಲ್ಪಿಸಿ ಹಳೆ ವಿದ್ಯಾರ್ಥಿಗಳ ಸಂಘ ಕ್ರಿಯಾಶೀಲವಾಗಿ ಕಾರ್ಯ ಚಟುವಟಿಕೆಗಳ ನಿರ್ವಹಿಸಲಿ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಡಾ. ಓ ನಾಗರಾಜ್ ತಿಳಿಸಿದರು. 

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಂಘದ ಸಭೆಯಲ್ಲಿ ಮಾತನಾಡಿದ ಅವರು ಹಳೆ ವಿದ್ಯಾರ್ಥಿಗಳು ಸಂಘಟಿತರಾಗಿ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿ ಎಂದರು.

ಇದನ್ನೂ ಓದಿ: Gubbi News: ದಸಂಸ ನೂತನ ತಾಲ್ಲೂಕು ಸಂಚಾಲಕರಾಗಿ ಕಡಬ ಶಂಕರ್ ಪುನರಾಯ್ಕೆ

ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹೆಚ್. ಟಿ.ಭೈರಪ್ಪ ಮಾತನಾಡಿ, ಕಾಲೇಜು ದಿನಗಳು ಪ್ರತಿ ಯೊಬ್ಬರ ಜೀವನದ ಸುವರ್ಣ ಕ್ಷಣಗಳು. ತಾವು ಕಲಿತ ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸುವುದು ಪ್ರತಿಯೊಬ್ಬ ಹಳೆ ವಿದ್ಯಾರ್ಥಿಯ ಕರ್ತವ್ಯ. ಈ ಸಂಸ್ಥೆ ಬೆಳೆದಂತೆ ನಾವೆಲ್ಲರೂ ಬೆಳೆದಿದ್ದೇವೆ ಎಂಬ ಹೆಮ್ಮೆ ನಮಗಿದೆ ಎಂದು ಅಭಿಪ್ರಾಯಪಟ್ಟರು.

ಸಂಘದ ಎಲ್ಲಾ ಪದಾಧಿಕಾರಿಗಳು ಸೇರಿಕೊಂಡು ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಂದಲ್ಲ ಒಂದು ರೀತಿಯ ಶೈಕ್ಷಣಿಕ ಅಭಿವೃದ್ಧಿ ಹೊಂದಲು ಪೂರಕವಾದ ವಾತಾವರಣ ಸೃಷ್ಟಿಸ ಬೇಕು ಎಂದರು.

ಸಭೆಯಲ್ಲಿ ಖಜಾಂಚಿ ಸೌಭಾಗ್ಯ,  ನಿರ್ದೇಶಕರಾದ ಡಿ.ಲೋಕೇಶ, ಕೋಟೆ ರಂಗಸ್ವಾಮಿ, ರಾಮಾಂಜ ನೇಯ, ಮಧು, ಬಸವರಾಜು, ಗ್ರಂಥ ಬಾಲಕರಾದ ಡಾ.ರಾಘವೇಂದ್ರ, ಉಪನ್ಯಾಸಕರಾದ ಡಾ. ಗಂಗಾಧರ್, ಸಂಚಾಲಕರಾದ ಮಲ್ಲಿಕಾರ್ಜುನ ಪ್ರಭು, ವ್ಯವಸ್ಥಾಪಕ ಶಿವಪ್ಪ ಮತ್ತಿತರರು ಇದ್ದರು.