ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Railway Minister V.Somanna: ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ರೈಲ್ವೆ ಸಚಿವ ವಿ.ಸೋಮಣ್ಣ

ಕೇಂದ್ರ ಸರ್ಕಾರ ಮಹತ್ವದ ಲಸಿಕೆ ಅಭಿಯಾನ ಇಂದು ಆರಂಭಿಸಿದೆ. ಆದರೆ ಈ ವ್ಯಾಕ್ಸಿನ್ ಬಗ್ಗೆ ಯಾರಿಗೂ ಮಾಹಿತಿಯಾಗಲಿ, ಪ್ರಚಾರವಾಗಲಿ ಮಾಡಿಲ್ಲ. 16900 ವ್ಯಾಕ್ಸಿನ್ ಜಿಲ್ಲೆಗೆ ಬಂದಿ ದ್ದರೂ ಹೆಣ್ಣು ಮಕ್ಕಳ ಆರೋಗ್ಯ ಬಗ್ಗೆ ಇಲಾಖೆಯು ನಿರಾಸಕ್ತಿ ತೋರಿರುವುದು ಬೇಸರ ತಂದಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ

-

Profile
Ashok Nayak Jun 2, 2026 12:41 AM

ಗುಬ್ಬಿ: ಅಭಿವೃದ್ದಿ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡಬೇಕು. ಸಾಮರಸ್ಯತೆ ಇಲ್ಲವಾದಲ್ಲಿ ಜನಪರ ಕೆಲಸಗಳು ನಡೆಯುವುದಿಲ್ಲ ಎಂದು ಕೇಂದ್ರದ ರೈಲ್ವೆ ಸಚಿವ ವಿ.ಸೋಮಣ್ಣ(Railway Minister V. Somanna) ತಿಳಿಸಿದರು.

ತಾಲ್ಲೂಕಿನ ಕಸಬ ಹೋಬಳಿ ಕಳ್ಳಿಪಾಳ್ಯ ಗೇಟ್ ಬಳಿಯ ರೈಲ್ವೇ ಕೆಳ ಸೇತುವೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಕೇಂದ್ರ ಸರ್ಕಾರ ಮಹತ್ವದ ಲಸಿಕೆ ಅಭಿಯಾನ ಇಂದು ಆರಂಭಿಸಿದೆ. ಆದರೆ ಈ ವ್ಯಾಕ್ಸಿನ್ ಬಗ್ಗೆ ಯಾರಿಗೂ ಮಾಹಿತಿಯಾಗಲಿ, ಪ್ರಚಾರವಾಗಲಿ ಮಾಡಿಲ್ಲ. 16900 ವ್ಯಾಕ್ಸಿನ್ ಜಿಲ್ಲೆಗೆ ಬಂದಿದ್ದರೂ ಹೆಣ್ಣು ಮಕ್ಕಳ ಆರೋಗ್ಯ ಬಗ್ಗೆ ಇಲಾಖೆಯು ನಿರಾಸಕ್ತಿ ತೋರಿರುವುದು ಬೇಸರ ತಂದಿದೆ. ಈ ನಡವಳಿಕೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ವಾಮ್ಯತೆ ಬಗ್ಗೆ ತಿಳಿಸುತ್ತದೆ. ಎರಡೂ ಸರ್ಕಾರ ಒಗ್ಗೂಡಿ ಮಾಡ ಬೇಕಾದ ಅಭಿಯಾನ ಜನರಿಗೆ ತಲುಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: V Somanna: ಕರ್ನಾಟಕಕ್ಕೆ ಹೊಸ ರೈಲು ಘೋಷಿಸಿದ ಸಚಿವ ಸೋಮಣ್ಣ, 4 ಜಿಲ್ಲೆಗಳ ನಡುವೆ ಸಂಚಾರ

14 ವರ್ಷದಿಂದ ಮೇಲ್ಪಟ್ಟ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಾರಕ ಕ್ಯಾನ್ಸರ್ ತಡೆಯಲು ಕೇಂದ್ರ ಸರ್ಕಾರ ಈ ಲಸಿಕೆಯನ್ನು ನೀಡಲು ಮಕ್ಕಳನ್ನು ಗುರುತಿಸಿ ರಾಜ್ಯದ 6 ಲಕ್ಷ ಜಿಲ್ಲೆಯ 25 ಸಾವಿರ ಮಕ್ಕಳಿಗೆ ನೀಡಬೇಕಾದ ಲಸಿಕೆಗೆ ಜಿಲ್ಲೆಯಲ್ಲಿ 15900 ವ್ಯಾಕ್ಸಿನ್ ನಲ್ಲಿ ಕೇವಲ ಆರು ಸಾವಿರ ಮಾತ್ರ ನೀಡಿದ್ದಾರೆ. ಅದೂ ಕೂಡ ಸರಿಯಾದ ಮಾಹಿತಿ ಇಲ್ಲ. ಆರೋಗ್ಯ ಇಲಾಖೆ ಬಗ್ಗೆ ಏನೂ ಹೇಳುವುದು ಎಂದು ಬೇಸರ ವ್ಯಕ್ತಪಡಿಸಿದ ಅವರು ರೈಲ್ವೆ ಇಲಾಖೆಯ ಕೆಲಸಗಳು ತ್ವರಿತವಾಗಿ ನಡೆಸಲಾಗಿದೆ. ಈಗಾಗಲೇ 2 ಸಾವಿರ ಕೋಟಿ ಕೆಲಸ ಪ್ರಗತಿಯಲ್ಲಿದೆ. ಈ ಪೈಕಿ ಗುಬ್ಬಿ ತಾಲ್ಲೂಕಿನಲ್ಲಿ 10 ಕೆಳ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಬೆಂಗಳೂರು ನಗರದಲ್ಲಿ ರೈಲ್ವೆ ಪ್ರಯಾಣ ಬಳಕೆದಾರರ ಸಂಖ್ಯೆ 30 ಲಕ್ಷಕ್ಕೂ ಅಧಿಕವಿದೆ. ದೇಶದಲ್ಲಿ 3 ಕೋಟಿಗೂ ಅಧಿಕವಿದೆ. ಈ ನಿಟ್ಟಿನಲ್ಲಿ ಲಾಭದಾಯಕ ರೈಲ್ವೆ ಇಲಾಖೆಯನ್ನು ಬೆಳೆಸಲು ಪ್ರಧಾನಿಗಳು ಸಾಕಷ್ಟು ಅನುದಾನ ನೀಡುತ್ತಿದ್ದಾರೆ. ರಾಯದುರ್ಗದಿಂದ ಪಾವಗಡ ಎರಡು ತಿಂಗಳಲ್ಲಿ ಕೆಲಸ ಪೂರ್ಣ ಆಗಲಿದೆ. ಪಾವಗಡದಿಂದ ಮಡಕಶಿರಾ ಇನ್ನೆರೆಡು ತಿಂಗಳು, ನಂತರದಲ್ಲಿ ಕೊರಟಗೆರೆ ಹೀಗೆ ಕೆಲಸ ಪೂರ್ಣಗೊಳ್ಳಲಿದೆ.

ತುಮಕೂರು ದಾವಣಗೆರೆ ಮಾರ್ಗ ಬಹುತೇಕ ಸಂಪೂರ್ಣವಾಗಿದೆ ಎಂದ ಅವರು ತುಮಕೂರು ಬಳಿ ರೈಲ್ವೆ ಟರ್ಮಿನಲ್ ಕಾಮಗಾರಿ 4 ಸಾವಿರ ಕೋಟಿ ಹಣದಲ್ಲಿ ನಡೆದಿದೆ. 5 ಸಾವಿರ ಉದ್ಯೋಗ ಸೃಷ್ಟಿಸಿ ಲಕ್ಷಾಂತರ ಜನರ ಬದುಕಿಗೆ ಅಧರವಾಗಲಿದೆ. ಈ ಜೊತೆಗೆ ವಸಂತನರಸಾಪುರ ಕೈಗಾರಿಕಾ ವಲಯದಲ್ಲಿ 200 ಹಾಸಿಗೆಯ ಆಸ್ಪತ್ರೆ ಹಾಗೂ 20 ಕೋಟಿ ವೆಚ್ಚದ ಮಹಿಳಾ ಹಾಸ್ಟೆಲ್ ನಿರ್ಮಾಣ ಆಗಲಿದೆ ಎಂದರು.

ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಕ್ರಿಯಾಶೀಲ ಸಂಸದರಾಗಿ ಸೋಮಣ್ಣ ಅವರು ಕೋಟಿಗಟ್ಟಲೆ ಅನುದಾನ ತಂದು ಜಿಲ್ಲೆಯ ಅಭಿವೃದ್ದಿ ಮಾಡುತ್ತಿದ್ದಾರೆ. ಲೋಕಸಭಾ ಸದಸ್ಯರು ಈ ಮಟ್ಟದ ಕೆಲಸ ಮಾಡಲು ಸಾಧ್ಯ ಎಂಬುದು ಈ ವರ್ಷದಲ್ಲಿ ನೋಡಿದ್ದೇವೆ. ರೈಲ್ವೆ ಗೇಟ್ ಗಳ ತೆರವು ಮಾಡಿ ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣ ಮಾಡಿ ದ್ದಾರೆ. ಜೊತೆಗೆ 90 ಕೋಟಿ ರೂಗಳ ರಸ್ತೆ ಕೆಲಸಗಳನ್ನು ಸಹ ಮಾಡಿಸುತ್ತಿದ್ದಾರೆ. ಈ ಜತೆಗೆ ಅಂತರ್ಜಲ ವೃದ್ಧಿಗೆ ವ್ಯಾಲಿಗಳಿಗೆ ಚೆಕ್ ಡ್ಯಾಂ ನಿರ್ಮಾಣ ಮಾಡಲು ಅನುದಾನ ನೀಡು ವಂತೆ ಮನವಿ ಮಾಡಿ, ಅತಿ ಹೆಚ್ಚು ಕರೆಂಟ್ ಬಳಕೆಯ ನಮ್ಮ ತಾಲ್ಲೂಕು ಹೆಚ್ಚು ಕೊಳವೆ ಬಾವಿ ಹೊಂದಿದೆ. ಈ ನಿಟ್ಟಿನಲ್ಲಿ ಅಂತರ್ಜಲ ವೃದ್ಧಿ ಅತ್ಯವಶ್ಯವಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ದಿಶಾ ಸಮಿತಿ ಸದಸ್ಯ ಹುಚ್ಚಯ್ಯ, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಬಿ.ಎಸ್.ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಪಿ.ಬಿ.ಚಂದ್ರಶೇಖರಬಾಬು, ಎನ್.ಸಿ.ಪ್ರಕಾಶ್, ಜಿ.ಎನ್.ಬೆಟ್ಟಸ್ವಾಮಿ, ಹೊನ್ನಗಿರಿಗೌಡ, ಯೋಗಾನಂದಕುಮಾರ್, ಸಿದ್ದಗಂಗಮ್ಮ, ಬೆಣಚಿಗೆರೆ ರುದ್ರೇಶ್, ಭೈರಪ್ಪ, ಜಿ.ಆರ್.ಶಿವಕುಮಾರ್, ಪಂಚಾಕ್ಷರಿ, ಬಲರಾಮಯ್ಯ, ಚಿಕ್ಕವೀರಯ್ಯ, ರೈಲ್ವೇ ಇಲಾಖೆಯ ವಿಭಾಗೀಯ ವ್ಯವಸ್ಥಾಪಕ ಪ್ರವೀಣ್ ಕಾತರಕಿ ಇನ್ನಿತರರು ಇದ್ದರು.