Gubbi News: ನೂತನ ಧ್ವಜಕಟ್ಟೆ ನಿರ್ಮಿಸಿದ ಗುಬ್ಬಿ ತಹಶೀಲ್ದಾರ್'ರಿಗೆ ನಾಗರೀಕರ ಸನ್ಮಾನ
ಆರು ದಶಕದ ಧ್ವಜಕಟ್ಟೆ ಬದಲಾಗಿ ಆಧುನಿಕ ಸ್ಪರ್ಶದ ಸ್ಟೀಲ್ ಧ್ವಜ ಸ್ತಂಭ ಸುಂದರವಾಗಿ ಗ್ರಾನೆಟ್ ಕಟ್ಟೆ ನಿರ್ಮಿಸಿ ಜೂನಿಯರ್ ಕಾಲೇಜು ಮೈದಾನಕ್ಕೆ ಅತ್ಯಾಕರ್ಷಕವಾಗಿ ಜನರನ್ನು ಸೆಳೆದಿದೆ. ಈ ಕಾರಣ ತಹಸೀಲ್ದಾರ್ ಆರತಿ.ಬಿ ಮೇಡಂ ಅವರಿಗೆ ಗುಬ್ಬಿ ಜನರ ಪರವಾಗಿ ನಾಗರೀಕ ಸನ್ಮಾನ ನೆರವೇರಿಸಿದ್ದೇವೆ


ಗುಬ್ಬಿ: ಸ್ವಾಂತಂತ್ರ್ಯ ದಿನಾಚರಣೆ ಮುನ್ನ ನಡೆದ ಪೂರ್ವಭಾವಿ ಸಭೆಯಲ್ಲಿ ನೂತನ ಧ್ವಜಕಟ್ಟೆ ನಿರ್ಮಾಣಕ್ಕೆ ನಾಗರೀಕರ ಆಗ್ರಹ ಬಂದ ಹಿನ್ನಲೆ ಕೂಡಲೇ ಸಮ್ಮತಿಸಿದ ತಹಸೀಲ್ದಾರ್ ವೈಯಕ್ತಿಕ ವಾಗಿ ತಾವೇ ನಿರ್ಮಿಸಿಕೊಡುವುದಾಗಿ ತಿಳಿಸಿ ಹತ್ತು ದಿನದಲ್ಲಿ ಸುಂದರ ಧ್ವಜಕಟ್ಟೆ ನಿರ್ಮಿಸಿ ಕೊಟ್ಟ ಹಿನ್ನಲೆ ಕೃತಜ್ಞತೆ ಸಲ್ಲಿಸಿದ ಗುಬ್ಬಿ ಜನತೆ ನಾಗರೀಕ ಸನ್ಮಾನ ನೆರವೇರಿಸಿದರು
79 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಂತರ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಪಟ್ಟಣದ ನಾಗರೀಕರು ತಾಲ್ಲೂಕು ದಂಡಾಧಿಕಾರಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ಆರತಿ.ಬಿ ಅವರಿಗೆ ಸನ್ಮಾನ ನೆರವೇರಿಸಿದರು.
ಇದನ್ನೂ ಓದಿ: Gubbi News: ಕೆ.ಎನ್.ರಾಜಣ್ಣ ಪರ ಬ್ಯಾಟಿಂಗ್ ಮಾಡಿದ ಗುಬ್ಬಿ ವಾಲ್ಮೀಕಿ ಮುಖಂಡರು
ಆರು ದಶಕದ ಧ್ವಜಕಟ್ಟೆ ಬದಲಾಗಿ ಆಧುನಿಕ ಸ್ಪರ್ಶದ ಸ್ಟೀಲ್ ಧ್ವಜ ಸ್ತಂಭ ಸುಂದರವಾಗಿ ಗ್ರಾನೆಟ್ ಕಟ್ಟೆ ನಿರ್ಮಿಸಿ ಜೂನಿಯರ್ ಕಾಲೇಜು ಮೈದಾನಕ್ಕೆ ಅತ್ಯಾಕರ್ಷಕವಾಗಿ ಜನರನ್ನು ಸೆಳೆದಿದೆ. ಈ ಕಾರಣ ತಹಸೀಲ್ದಾರ್ ಆರತಿ.ಬಿ ಮೇಡಂ ಅವರಿಗೆ ಗುಬ್ಬಿ ಜನರ ಪರವಾಗಿ ನಾಗರೀಕ ಸನ್ಮಾನ ನೆರವೇರಿಸಿದ್ದೇವೆ ಎಂದು ಶ್ರೀ ಚನ್ನಬಸವೇಶ್ವರ ಯುವಕ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಸಿ.ಆರ್.ಶಂಕರ್ ಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ಗುಬ್ಬಿ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಎಚ್.ಡಿ.ಯಲ್ಲಪ್ಪ, ಸಲೀಂಪಾಷ, ಜಿ.ಆರ್.ರಮೇಶ್, ಗೋಪಾಲ್ ಅರಸ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕಾಂತರಾಜ್ ಇತರರು ಇದ್ದರು.