Gubbi News: ಗ್ರಾಮೀಣ ಶಾಲೆಯಲ್ಲಿ ಕಾನ್ವೆಂಟ್ ಮಾದರಿ ಶಿಕ್ಷಣ : ಡಾ.ನಾಗಭೂಷಣ್
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲೀಷ್ ಭಾಷೆ ಅವಶ್ಯವಿದೆ. ಈ ಹಿಂದೆ ಶಿಶುವಿಹಾರ ಮೂಲಕ ಅಂಗನವಾಡಿ ಆರಂಭವಾಗಿತ್ತು. ಆಂಗ್ಲ ಮಾಧ್ಯಮ ಬಗ್ಗೆ ಅರಿತ ಸರ್ಕಾರ ಕಾನ್ವೆಂಟ್ ಮಾದರಿ ಶಿಕ್ಷಣ ಹಳ್ಳಿಯಲ್ಲಿ ಒದಗಿಸಿ ಸಮಸ್ಯೆ ಮೂಲ ಹುಡುಕಿ ಪರಿಹಾರ ಕಂಡು ಹಿಡಿಯಲು ಸ್ಥಳೀಯ ಸಮುದಾಯದ ಸಹಕಾರ ಅಗತ್ಯವಿದೆ.
-
ಗುಬ್ಬಿ: ಸ್ವಾತಂತ್ರ್ಯ ಬಂದ ನಂತರ ಬಡ ದೇಶವಾಗಿದ್ದ ನಮ್ಮ ದೇಶಕ್ಕೆ ಶಿಕ್ಷಣ ಅಗತ್ಯ ಅರಿತು ಆರು ವರ್ಷದ ನಂತರ ಮಕ್ಕಳಿಗೆ ಶಿಕ್ಷಣ ಕಡ್ಡಾಯ ಮಾಡಲಾಗಿ ಈಗ ಜಾಗತೀಕ ಜಗತ್ತಿಗೆ ತಕ್ಕಂತೆ ಹಳ್ಳಿಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಇಂದು ಎಲ್ ಕೆಜಿ ಹಾಗೂ ಯುಕೆಜಿ ಆರಂಭಿಸಿ ಶಾಲಾ ದಾಖಲಾತಿ ಹೆಚ್ಚಳ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸುಗ್ಗನ ಪಾಳ್ಯ ಶಾಲೆಯನ್ನು ಮಾದರಿ ಮಾಡಲು ದತ್ತು ಪಡೆದು ಇಲ್ಲಿನ ಮಕ್ಕಳಿಗೆ ಇಂಗ್ಲೀಷ್ ಭಾಷೆ ಕಲಿಸಲಾಗುತ್ತಿದೆ ಎಂದು ಚಾಲುಕ್ಯ ಆಸ್ಪತ್ರೆ ಸಿಇಓ ಡಾ.ನಾಗಭೂಷಣ್ ತಿಳಿಸಿದರು.
ತಾಲ್ಲೂಕಿನ ಕಸಬ ಹೋಬಳಿ ಸುಗ್ಗನಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋ ಜಿಸಿದ್ದ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ, ಅಕ್ಷರಾಭ್ಯಾಸ, ಕ್ರೀಡಾ ಸಾಮಾಗ್ರಿ ಹಾಗೂ ಪೀಠೋ ಪಕರಣ ವಿತರಣೆ ಮತ್ತು ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಉಳಿಸುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ನೀಡಲು ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲು ಸಿದ್ಧವಿದೆ. ಈ ನಿಟ್ಟಿನಲ್ಲಿ ಹಳ್ಳಿ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದೆ. ಎಲ್ ಕೆಜಿ ಮತ್ತು ಯುಕೆಜಿ ಶಿಕ್ಷಣ ಉನ್ನತ ಶಿಕ್ಷಣಕ್ಕೆ ದಾರಿಯಾಗಿದೆ ಎಂದರು.
ಇದನ್ನೂ ಓದಿ: Gubbi News: ನಮ್ಮ ಸರ್ಕಾರ ಪತ್ರಕರ್ತರ ಪರವಾಗಿದೆ: ಶಾಸಕ ಎಸ್.ಆರ್.ಶ್ರೀನಿವಾಸ್
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲೀಷ್ ಭಾಷೆ ಅವಶ್ಯವಿದೆ. ಈ ಹಿಂದೆ ಶಿಶುವಿಹಾರ ಮೂಲಕ ಅಂಗನವಾಡಿ ಆರಂಭವಾಗಿತ್ತು. ಆಂಗ್ಲ ಮಾಧ್ಯಮ ಬಗ್ಗೆ ಅರಿತ ಸರ್ಕಾರ ಕಾನ್ವೆಂಟ್ ಮಾದರಿ ಶಿಕ್ಷಣ ಹಳ್ಳಿಯಲ್ಲಿ ಒದಗಿಸಿ ಸಮಸ್ಯೆ ಮೂಲ ಹುಡುಕಿ ಪರಿಹಾರ ಕಂಡು ಹಿಡಿಯಲು ಸ್ಥಳೀಯ ಸಮುದಾಯದ ಸಹಕಾರ ಅಗತ್ಯವಿದೆ. ನನ್ನ ತಂದೆ ಓದಿದ ಸುಗ್ಗನ ಪಾಳ್ಯ ಶಾಲೆಯನ್ನು ದತ್ತು ಪಡೆದು ಅಭಿವೃದ್ದಿ ಮಾಡುತ್ತಿದ್ದೇವೆ. ಹೀಗೆ ತಾಲ್ಲೂಕಿನ ಎಲ್ಲಾ ಶಾಲೆಗೆ ಅಲ್ಲಿನ ಹಿರಿಯರು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಶಿಕ್ಷಕ ಲಕ್ಷ್ಮಣ್ ಮಾತನಾಡಿ ಹಳ್ಳಿಯ ಶಾಲೆಯ ಉದ್ದಾರಕ್ಕೆ ಸಮುದಾಯ ಸಹಕಾರ ನೀಡಬೇಕು. ಇಲ್ಲಿ ಮೊದಲು ಒಂದನೇ ತರಗತಿ ದಾಖಲಾತಿ ಇರಲಿಲ್ಲ. ಡಾ.ನಾಗಭೂಷಣ್ ಅವರು ದತ್ತು ಪಡೆದ ನಂತರ ಎಲ್ ಕೆಜಿ ಮತ್ತು ಯುಕೆಜಿ ಆರಂಭಿಸಿ ವಿಶೇಷ ಕಾಳಜಿವಹಿಸಿ ಆಂಗ್ಲ ಮಾಧ್ಯಮ ಆರಂಭಿ ಸಿದ ಬಳಿಕ 280 ಮಕ್ಕಳು ದಾಖಲು ಆಗಿದ್ದಾರೆ. ತಾಲ್ಲೂಕಿನಲ್ಲಿ ವಿಶೇಷ ಗಮನ ಸೆಳೆದ ಶಾಲೆಯಲ್ಲಿ ಕಾಡಶೆಟ್ಟಿಹಳ್ಳಿ ಹಾಗೂ ಸುಗ್ಗನಪಾಳ್ಯ ಶಾಲೆ ಹೆಗ್ಗುರುತು ಪಡೆದಿದೆ ಎಂದರು.
ಎಸ್ ಡಿಎಂಸಿ ಅಧ್ಯಕ್ಷ ರಾಮಯ್ಯ ಮಾತನಾಡಿ, ಇಲ್ಲಿ ಮೊದಲು 65 ಮಕ್ಕಳು ಮಾತ್ರ ಇದ್ದರು. ಎಲ್ಲಾ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಸ್ಸು ವ್ಯವಸ್ಥೆ ಮಾಡಲಾಯಿತು. ಡಾಕ್ಟರ್ ದತ್ತು ಪಡೆದು ನಂತರ ಮಕ್ಕಳ ಸಂಖ್ಯೆ ಮೂರು ಪಟ್ಟು ಹೆಚ್ಚಾಯಿತು. ಸುತ್ತಲಿನ ಗ್ರಾಮದ ಮಕ್ಕಳ ದಾಖಲಾತಿಗೆ ಉಚಿತ ಶಿಕ್ಷಣಕ್ಕೂ ಅನುವು ಮಾಡಲಾಯಿತು. ಸುಮಾರು ಹದಿನೈದು ಹಳ್ಳಿಗಳ ಮಕ್ಕಳು ಇಲ್ಲಿಗೆ ಬರುತ್ತಿದ್ದಾರೆ. ಪ್ರಾಥಮಿಕ ಪೂರ್ವ ಶಿಕ್ಷಣ ಮಕ್ಕಳನ್ನು ಉನ್ನತ ಹಂತಕ್ಕೆ ಕೊಂಡೊಯ್ಯಲಿದೆ ಎಂದರು.
ಬೆಳಿಗ್ಗೆ ಗೊಲ್ಲಹಳ್ಳಿ ಮಠದ ಶ್ರೀ ವಿದ್ಯಾವಿಭವ ಶಂಕರ ಸ್ವಾಮೀಜಿ ಆಗಮಿಸಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡುವ ಮೂಲಕ ಶಾಲೆಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಆಯ್ಕೆಯಾದ ಒಂಬತ್ತು ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಉಪಾಧ್ಯಕ್ಷೆ ನೇತ್ರ, ಸದಸ್ಯ ದೇವಾನಂದ್, ಮುಖ್ಯ ಶಿಕ್ಷಕಿ ಲಕ್ಷ್ಮೀದೇವಮ್ಮ, ಶಿಕ್ಷಕರಾದ ರುದ್ರೇಶ್, ಲೋಕೇಶ್ ಇತರರು ಇದ್ದರು.