ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Folk singer Kesturu Govinda Raju: ಗುಬ್ಬಿಯಲ್ಲಿ ಜನಪದ ಗಾಯಕ ಕೆಸ್ತೂರು ಗೋವಿಂದರಾಜುಗೆ ಸನ್ಮಾನ

ತಂದೆಯಿಂದ ಬಳುವಳಿಯಾಗಿ ಬಂದ ಜನಪದ ಸಂಗೀತವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಬಾಲ್ಯದಿಂದಲೂ ನಿರಂತರವಾಗಿ ಹಾಡುತ್ತಾ ಬಂದಿದ್ದೇನೆ. ದೂರದರ್ಶನದಂತಹ ಪ್ರತಿಷ್ಠಿತ ವೇದಿಕೆ ಯಲ್ಲಿ ರಾಜ್ಯದ ಜನರ ಮುಂದೆ ಪ್ರತಿಭೆ ಪ್ರದರ್ಶಿಸುವ ಅವಕಾಶ ದೊರೆತಿರುವುದು ಸಂತಸದ ಸಂಗತಿ. ಈ ಸಾಧನೆಗೆ ನನ್ನ ಕುಟುಂಬ, ಹಿತೈಷಿ ಗಳು ಹಾಗೂ ಕಲಾಭಿಮಾನಿಗಳ ಪ್ರೋತ್ಸಾಹವೇ ಪ್ರಮುಖ ಕಾರಣ

ಗುಬ್ಬಿಯಲ್ಲಿ ಜನಪದ ಗಾಯಕ ಕೆಸ್ತೂರು ಗೋವಿಂದರಾಜುಗೆ ಸನ್ಮಾನ

-

Profile
Ashok Nayak Jul 23, 2026 8:54 PM

ಗುಬ್ಬಿ: ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ಸಂಗೀತ ರಿಯಾಲಿಟಿ ಕಾರ್ಯಕ್ರಮ 'ಗಾನ ಸಿಂಚನ' ದ ಗ್ರಾಂಡ್ ಫಿನಾಲೆಗೆ ಆಯ್ಕೆಯಾಗಿರುವ ಜನಪದ ಗಾಯಕ ಕೆಸ್ತೂರು ಗೋವಿಂದ ರಾಜು( Folk singer Kesturu Govinda Raju) ಅವರನ್ನು ಗುಬ್ಬಿ ಸುಭಾಷ್ ನಗರದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಗುಬ್ಬಿಯ ಕೆಚ್ಚೆದೆಯ ಅಗ್ನಿವಂಶ ಕ್ಷತ್ರಿಯ ಸೇನೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಗೋವಿಂದರಾಜು ತಂದೆಯಿಂದ ಬಳುವಳಿಯಾಗಿ ಬಂದ ಜನಪದ ಸಂಗೀತವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಬಾಲ್ಯದಿಂದಲೂ ನಿರಂತರವಾಗಿ ಹಾಡುತ್ತಾ ಬಂದಿದ್ದೇನೆ. ದೂರದರ್ಶನದಂತಹ ಪ್ರತಿಷ್ಠಿತ ವೇದಿಕೆಯಲ್ಲಿ ರಾಜ್ಯದ ಜನರ ಮುಂದೆ ಪ್ರತಿಭೆ ಪ್ರದರ್ಶಿಸುವ ಅವಕಾಶ ದೊರೆತಿರುವುದು ಸಂತಸದ ಸಂಗತಿ. ಈ ಸಾಧನೆಗೆ ನನ್ನ ಕುಟುಂಬ, ಹಿತೈಷಿ ಗಳು ಹಾಗೂ ಕಲಾಭಿಮಾನಿಗಳ ಪ್ರೋತ್ಸಾಹವೇ ಪ್ರಮುಖ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೆಸ್ತೂರು ಗ್ರಾಮದ ಗಾರೆ ಶ್ರೀನಿವಾಸ್ ಹಾಗೂ ಗಂಗಮ್ಮ ದಂಪತಿಯ ಪುತ್ರರಾದ ಗೋವಿಂದರಾಜು, ಐದು ವರ್ಷದ ಬಾಲ್ಯ ದಿಂದಲೇ ತಂದೆಯ ಮಾರ್ಗದರ್ಶನದಲ್ಲಿ ಜನಪದ ಗಾಯನವನ್ನು ಅಭ್ಯಾಸ ಮಾಡಲು ಆರಂಭಿಸಿದರು.

ಇದನ್ನೂ ಓದಿ: Gubbi News: ರಸ್ತೆ ವಿವಾದಕ್ಕೆ ತೆರೆ: ತಹಶೀಲ್ದಾರ್ ಭೇಟಿ; ಜಮೀನುಗಳಿಗೆ ರಸ್ತೆ ಸುಗಮ

ಗ್ರಾಮೀಣ ಭಜನಾ ತಂಡಗಳು, ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆಗಳು, ಸಾಂಸ್ಕೃತಿಕ ಉತ್ಸವಗಳು ಹಾಗೂ ವಿವಿಧ ವೇದಿಕೆಗಳಲ್ಲಿ ತಮ್ಮ ವಿಶಿಷ್ಟ ಕಂಠಸಿರಿಯಿಂದ ಜನಮನ ಗೆದ್ದಿದ್ದಾರೆ. ಅವರ ಗಾಯನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಅನೇಕ ಸಾಂಸ್ಕೃತಿಕ ಸಂಘಟನೆಗಳು ಅವರನ್ನು ಗೌರವಿಸಿವೆ ಎಂದು ಸನ್ಮಾನ ಕಾರ್ಯಕ್ರಮ ಮುನ್ನ ಅವರ ಪರಿಚಯ ಮಾಡಲಾಯಿತು.

ಕೆಚ್ಚೆದೆಯ ಅಗ್ನಿವಂಶ ಕ್ಷತ್ರಿಯ ಸೇನೆಯ ಪದಾಧಿಕಾರಿಗಳು ಮಾತನಾಡಿ, ಗೋವಿಂದರಾಜು ಅವರು ಅಗ್ನಿವಂಶ ಕ್ಷತ್ರಿಯ ಸಮಾಜದ ಹೆಮ್ಮೆಯ ಕಲಾವಿದರಾಗಿದ್ದು, ತಮ್ಮ ಅಪೂರ್ವ ಗಾಯನದಿಂದ ರಾಜ್ಯಾದ್ಯಂತ ಜನಪದ ಕಲೆಯ ಮಹತ್ವವನ್ನು ಸಾರುತ್ತಿದ್ದಾರೆ. ಗ್ರಾಂಡ್ ಫಿನಾಲೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ವಿಜಯಶಾಲಿಯಾಗಲಿ. ಅವರ ಕಲಾಸೇವೆಯನ್ನು ಗುರುತಿಸಿ 'ನಾಡಿನ ಕಲಾ ರಾಧಕ', ಚಿತ್ರಸಂತೆ ಸಂಸ್ಥೆ ನೀಡುವ 'ಹೆಮ್ಮೆಯ ಕನ್ನಡಿಗ' ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಇದೀಗ ದೂರದರ್ಶನ ಚಂದನ ವಾಹಿನಿಯ ಗಾನ ಸಿಂಚನ ಗ್ರಾಂಡ್ ಫಿನಾಲೆ ತಲುಪಿರುವುದು ಅವರ ಕಲಾ ಜೀವನದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದರು.

ಸನ್ಮಾನ ಕಾರ್ಯಕ್ರಮದಲ್ಲಿ ಗೋವಿಂದರಾಜು ಅವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು. ಸಂಘಟನೆಯ ಪದಾಧಿಕಾರಿಗಳು, ಸದಸ್ಯರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಗ್ರಾಂಡ್ ಫಿನಾಲೆಯಲ್ಲಿ ಗೆದ್ದು ಬರುವಂತೆ ಶುಭ ಕೋರಿದರು.