ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

V. Somanna: ಶೀಘ್ರದಲ್ಲಿ ಕಾಡು ಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ : ಕೇಂದ್ರ ಸಚಿವ ವಿ.ಸೋಮಣ್ಣ

ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಅವಶ್ಯವಿಲ್ಲ. ಯಾವ ಪಕ್ಷದ ಶಾಸಕರಾದರೂ ಅವರೊಂದಿಗೆ ನಾನೇ ಖುದ್ದು ಚರ್ಚಿಸಿ ಕೆಲಸ ನಡೆಸಿದ್ದೇನೆ. ಜಿಲ್ಲೆಯ ಅಭಿವೃದ್ದಿ ಜೊತೆಗೆ ಜನರ ಮೂಲಭೂತ ಸವಲತ್ತು ಒದಗಿಸುವ ಕೆಲಸ ಬಹಳ ಮುಖ್ಯವಾಗಿದೆ. ಈ ಬಗ್ಗೆ ಪ್ರಧಾನಮಂತ್ರಿ ಮೋದಿ ಅವರೇ ಮಾರ್ಗದರ್ಶನ ನೀಡಿದ್ದಾರೆ ಎಂದ ಅವರು ಗುಬ್ಬಿ ತಾಲ್ಲೂಕಿನಲ್ಲಿ ಸಾಕಷ್ಟು ಕೆಲಸವನ್ನು ಹುಡುಕಿ ಮಾಡುತ್ತಿದ್ದೇನೆ.

ಶೀಘ್ರದಲ್ಲಿ ಕಾಡು ಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ

-

Profile
Ashok Nayak Jul 4, 2026 7:10 PM

ಗುಬ್ಬಿ: ವಿಶಿಷ್ಟ ಆಚರಣೆ ಸಂಪ್ರದಾಯ ಮೂಲಕ ಬುಡಕಟ್ಟು ಮೂಲದ ಕಾಡುಗೊಲ್ಲ ಜನಾಂಗ ವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ತಯಾರಿ ನಡೆಸಿದೆ. ಶೀಘ್ರದಲ್ಲಿ ಕಾಡು ಗೊಲ್ಲರನ್ನು ಎಸ್ಟಿ ಮೀಸಲು ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ಕೇಂದ್ರದ ರೈಲ್ವೆ ಸಚಿವ ವಿ.ಸೋಮಣ್ಣ(Union Railway Minister V. Somanna) ತಿಳಿಸಿದರು.

ತಾಲ್ಲೂಕಿನ ಸೋಮಲಾಪುರ, ಬಿಳಿಗೆರೆ, ಕಂಬೇರಹಟ್ಟಿ, ಹೊಸಹಟ್ಟಿ, ಹೊಸಹಟ್ಟಿ, ಮೂಡಲಪಾಳ್ಯ ಹಾಗೂ ಜುಂಜಪ್ಪನಹಟ್ಟಿ ಗ್ರಾಮಗಳಲ್ಲಿ ಕಿರ್ಲೋಸ್ಕರ್ ಸಂಸ್ಥೆಯ ಸಿಎಸ್ ಆರ್ ನಿಧಿಯಿಂದ ಶುದ್ಧಿ ನೀರಿನ ಘಟಕವನ್ನು ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಅಮಿತ್ ಷಾ(Amith Shah) ಅವರೊಂದಿಗೆ ಎಸ್ಟಿ ಮೀಸಲು ಬಗ್ಗೆ ಚರ್ಚಿಸಿದ್ದೇನೆ. ಪ್ರಧಾನ ಮಂತ್ರಿಗಳು ಸಹ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಹತ್ತು ತಿಂಗಳಲ್ಲಿ ಕಾಡು ಗೊಲ್ಲರಿಗೆ ಸಿಹಿಸುದ್ದಿ ಸಿಗಲಿದೆ ಎಂದರು.

ಇದನ್ನೂ ಓದಿ: V Somanna: ಕರ್ನಾಟಕಕ್ಕೆ ಹೊಸ ರೈಲು ಘೋಷಿಸಿದ ಸಚಿವ ಸೋಮಣ್ಣ, 4 ಜಿಲ್ಲೆಗಳ ನಡುವೆ ಸಂಚಾರ

ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಅವಶ್ಯವಿಲ್ಲ. ಯಾವ ಪಕ್ಷದ ಶಾಸಕರಾದರೂ ಅವರೊಂದಿಗೆ ನಾನೇ ಖುದ್ದು ಚರ್ಚಿಸಿ ಕೆಲಸ ನಡೆಸಿದ್ದೇನೆ. ಜಿಲ್ಲೆಯ ಅಭಿವೃದ್ದಿ ಜೊತೆಗೆ ಜನರ ಮೂಲಭೂತ ಸವಲತ್ತು ಒದಗಿಸುವ ಕೆಲಸ ಬಹಳ ಮುಖ್ಯವಾಗಿದೆ. ಈ ಬಗ್ಗೆ ಪ್ರಧಾನ ಮಂತ್ರಿ ಮೋದಿ(PM Modi) ಅವರೇ ಮಾರ್ಗದರ್ಶನ ನೀಡಿದ್ದಾರೆ ಎಂದ ಅವರು ಗುಬ್ಬಿ ತಾಲ್ಲೂಕಿನಲ್ಲಿ ಸಾಕಷ್ಟು ಕೆಲಸವನ್ನು ಹುಡುಕಿ ಮಾಡುತ್ತಿದ್ದೇನೆ. ರೈಲ್ವೆ, ಹೆದ್ದಾರಿ ಸೇರಿದಂತೆ ಹಳ್ಳಿಗಾಡಿನ ಜನರ ಬದುಕಿಗೆ ಅತ್ಯವಶ್ಯ ವ್ಯವಸ್ಥೆ ಮಾಡುತ್ತಿದ್ದೇನೆ. ಈ ವಿಚಾರದಲ್ಲಿ ಶಾಸಕರೂ ಸಹ ಸಾಥ್ ನೀಡಿದ್ದಾರೆ ಎಂದರು.

ಟಯೋಟಾ ಕಿರ್ಲೋಸ್ಕರ್ ಕಂಪೆನಿ ದೇಶದ ಉನ್ನತ ಉದ್ಯಮ ಕಂಪೆನಿ ಎನಿಸಿದೆ. ಅಲ್ಲಿ 16 ಸಾವಿರ ಉದ್ಯೋಗಿಗಳು ಕನ್ನಡಿಗರು ಎಂಬುದು ನಮ್ಮ ಹೆಮ್ಮೆ. ಅಲ್ಲಿನ ಸಿ ಎಸ್ ಆರ್ ಫಂಡ್ ಗೊಲ್ಲರ ಹಟ್ಟಿಗಳಿಗೆ ನೀರು ಒದಗಿಸುವ ಕೆಲಸಕ್ಕೆ ಬಳಸಲಾಗಿದೆ. ಕೆಲ ಹಟ್ಟಿಗಳಿಗೆ ರಸ್ತೆ ಅಭಿವೃದ್ಧಿ ಮಾಡುವ ಕೆಲಸಕ್ಕೂ ಅನುದಾನ ನೀಡಿದ್ದೇನೆ. ಈಗಾಗಲೇ 33 ಕೋಟಿ ರೂ ಕೆಲಸಗಳಿಗೆ ಅಸ್ತು ಸಿಕ್ಕಿದೆ ಎಂದ ಅವರು ಸಿದ್ಧಗಂಗಾ ಶ್ರೀಗಳು ಓದಿದ ನಾಗವಲ್ಲಿ ಶಾಲೆಗೆ ಎರಡು ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದರು.

ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಲೋಕಸಭಾ ಸದಸ್ಯರು ಎಷ್ಟೆಲ್ಲಾ ಕೆಲಸ ಮಾಡಲು ಸಾಧ್ಯ ಎಂಬುದು ಸೋಮಣ್ಣ ಅವರು ರುಜುವಾತು ಮಾಡಿದ್ದಾರೆ. ಚುನಾವಣೆ ಹೊರತಾಗಿ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ದಿ ಕೆಲಸ ಮಾಡಿದ ಸೋಮಣ್ಣ ಅವರ ನಡೆ ಶ್ಲಾಘನೀಯ. ಈ ಹಿಂದೆ ಸಂಸದರಾಗಿದ್ದ ಬಸವರಾಜು ಅವರೊಂದಿಗೆ ಕಿತ್ತಾಟ ನಡೆಸುತ್ತಲೇ 25 ವರ್ಷ ಯಾವ ಕೆಲಸ ಮಾಡಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಕಂದಾಚಾರದಿಂದ ಹೊರ ಬಂದು ನಾಗರೀಕ ಸಮಾಜದಲ್ಲಿ ಬದುಕು ನಡೆಸಬೇಕು. ಹೊಸತನ ಕಾಣಲು ಬದಲಾವಣೆ ನೋಡಲು ಮೊದಲು ಶಿಕ್ಷಣಕ್ಕೆ ಒತ್ತು ನೀಡಬೇಕು. ನಂತರ ಸಾಮಾಜಿಕ ಸಮಾನತೆ ಸಾಧಿಸುತ್ತೀರಿ. ಆರ್ಥಿಕ, ರಾಜಕೀಯ ಶಕ್ತಿ ಸಹ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಬದಲಾವಣೆಗೆ 60 ಕೋಟಿ ಈವರೆವಿಗೆ ಗೊಲ್ಲರ ಹಟ್ಟಿಗಳನ್ನೇ ಗುರಿಯಾಗಿಸಿ ಅಭಿವೃದ್ದಿ ಕೆಲಸ ಮಾಡಿದ್ದೇನೆ ಎಂದರು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಕಾಡು ಗೊಲ್ಲ ಸಮಾಜದ ರಾಜ್ಯಾಧ್ಯಕ್ಷ ರಾಜಣ್ಣ, ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ಜೆಡಿಎಸ್ ಮುಖಂಡರಾದ ಬಿ.ಎಸ್.ನಾಗರಾಜು, ಜಿ.ಎನ್.ಬೆಟ್ಟಸ್ವಾಮಿ, ಕಳ್ಳಿಪಾಳ್ಯ ಲೋಕೇಶ್, ದಿಶಾ ಸಮಿತಿಯ ವೈ.ಎಚ್.ಹುಚ್ಚಯ್ಯ, ಡಾ.ನಾವ್ಯಾ ಬಾಬು, ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು, ನಂಜೇಗೌಡ, ಎಸ್.ವಿಜಯ್ ಕುಮಾರ್, ಕಾಡು ಗೊಲ್ಲ ಸಮಾಜದ ಮುಖಂಡರಾದ ಯಶೋಧಮ್ಮ ಶಿವಣ್ಣ, ಕರಿಯಪ್ಪ, ದೊಡ್ಡಯ್ಯ, ಕಿರ್ಲೋಸ್ಕರ್ ಸಂಸ್ಥೆಯ ಕಿರಣ್, ಪ್ರಶಾಂತ್, ವರುಣ್ ಇತರರು ಇದ್ದರು.