Madhugiri News: ರಂಜಾನ್ ಪ್ರಾರ್ಥನೆಯಲ್ಲಿ ಶಾಸಕ ಕೆ.ಎನ್. ರಾಜಣ್ಣ ಭಾಗಿ; ಪರಸ್ಪರ ಗೌರವ, ಐಕ್ಯತೆಯಿಂದ ಬಾಳಲು ಕರೆ
Madhugiri News: ಮಧುಗಿರಿ ಪಟ್ಟಣದ ಶಿರಾ ಗೇಟ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಭಾನುವಾರ ರಂಜಾನ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಕೆ.ಎನ್. ರಾಜಣ್ಣ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಈದ್ಗಾ ಮೈದಾನದಲ್ಲಿ ಶಾಶ್ವತವಾಗಿ ಶೆಡ್ ನಿರ್ಮಾಣ ಮಾಡಿಸಲಾಗುವುದು. ಇದರಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
ಮಧುಗಿರಿಯಲ್ಲಿ ರಂಜಾನ್ ಹಿನ್ನೆಲೆ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಕೆ.ಎನ್. ರಾಜಣ್ಣ ಭಾಗವಹಿಸಿದ್ದರು. -
ಮಧುಗಿರಿ, ಮಾ.21: ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದ (Madhugiri News) ಶಿರಾ ಗೇಟ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಕೆ.ಎನ್. ರಾಜಣ್ಣ ಅವರು ಭಾಗವಹಿಸಿ, ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಶಾಸಕರು, ಮುಸ್ಲಿಂ ಸಮುದಾಯದವರಿಗೆ ರಂಜಾನ್ ಅತ್ಯಂತ ಪವಿತ್ರ ಹಬ್ಬವಾಗಿದ್ದು, ಆತ್ಮಶುದ್ಧಿ ಮತ್ತು ಸಹೋದರತ್ವದ ಸಂದೇಶವನ್ನು ಸಾರುತ್ತದೆ. ಪ್ರಪಂಚದಲ್ಲಿ ನಡೆಯುತ್ತಿರುವ ಅಶಾಂತಿಯೆಲ್ಲಾ ದೂರವಾಗಿ, ಎಲ್ಲರೂ ಶಾಂತಿ ಮತ್ತು ನೆಮ್ಮದಿಯಿಂದ ಬದುಕನ್ನು ಸಾಗಿಸಬೇಕು ಎಂದು ಕರೆ ನೀಡಿದರು.
ಧರ್ಮ–ಜಾತಿ ಯಾವುದೇ ಇದ್ದರೂ ಕೂಡ ನಾವು ಎಲ್ಲರೂ ಭಾರತೀಯರು ಎಂಬ ಭಾವನೆ ಹೊಂದಬೇಕು. ಪರಸ್ಪರ ಗೌರವ, ಸಹಿಷ್ಣುತೆ ಮತ್ತು ಐಕ್ಯತೆಯಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಅವರು ತಿಳಿಸಿದರು.
ಈದ್ಗಾ ಮೈದಾನದಲ್ಲಿ ಶಾಶ್ವತವಾಗಿ ಶೆಡ್ ನಿರ್ಮಾಣ ಮಾಡಿಸಲಾಗುವುದು. ಇದರಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತದೆ ಎಂದು ಶಾಸಕ ಕೆ.ಎನ್. ರಾಜಣ್ಣ ಹೇಳಿದರು.
Namma Metro: ನಮ್ಮ ಮೆಟ್ರೋ ಪಿಂಕ್ ಲೈನ್ ಮೇ ತಿಂಗಳಿಂದ ಕಾರ್ಯಾಚರಣೆಗೆ ಭರದ ಸಿದ್ಧತೆ, 4 ರೈಲು ಆಗಮನ
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ. ನಂಜುಂಡಯ್ಯ, ಎನ್. ಗಂಗಣ್ಣ, ಮೊಹಮ್ಮದ್ ಅಯೂಬ್, ಮಾಜಿ ಸದಸ್ಯರಾದ ಅಲೀಮ್, ಜಾಫರ್ ಸಾಧಿಕ್ , ಪತ್ರಕರ್ತ ಜಲಾಲ್ ಬಾಷ, ಐ.ಡಿ. ಹಳ್ಳಿ, ಮುಖಂಡರಾದ ಬಾಬ ಪಕೃದ್ದೀನ್, ಸಯ್ಯದ್ ಕರೀಂ, ಎಂ.ಆರ್. ಖಲೀಲ್ ಉಪಸ್ಥಿತರಿದ್ದರು.