ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gubbi News: ಜೀವನದ ಜಂಜಾಟದಲ್ಲಿ ಅಧ್ಯಯನ ಪ್ರವಾಸ ಬಹಳ ಮುಖ್ಯ: ಗುಬ್ಬಿ ಬಸವರಾಜ್

ಸಮುದಾಯದ ಅಭಿವೃದ್ಧಿಗಾಗಿ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಹೀಗೆ ಅನೇಕ ಉದ್ದೇಶಗಳನ್ನು ಹೊಂದಿ ದ್ದು ಇದರ ಬಗ್ಗೆ ಸಮುದಾಯದ ಜನರಿಗೆ ತಿಳುವಳಿಕೆ ನೀಡುವ ಅಧ್ಯಯನ ಪ್ರವಾಸ ವಾಗಿದ್ದು, ಮಾದಿಗ ಸಮುದಾಯದ ಮೂಲ ದೇವತೆ ಮಾತಂಗೇಶ್ವರಿ ಬೆಟ್ಟವನ್ನೇರಿ ದರ್ಶನ ಮಾಡಿಸುವ ಮೂಲಕ ಕ್ಷೇತ್ರದ ಮಹತ್ವ ತಿಳಿಸಲಾಗಿದೆ

ಜೀವನದ ಜಂಜಾಟದಲ್ಲಿ ಅಧ್ಯಯನ ಪ್ರವಾಸ ಬಹಳ ಮುಖ್ಯ

-

Ashok Nayak
Ashok Nayak Feb 6, 2026 10:52 PM

ಗುಬ್ಬಿ: ಪ್ರತಿನಿತ್ಯ ಜೀವನ ಜಂಜಾಟದಲ್ಲಿ ತೊಡಗುವ ಸ್ವಸಹಾಯ ಸಂಘದ ಸದಸ್ಯರಿಗೆ ಅಧ್ಯಯನ ಪ್ರವಾಸ ಬಹಳ ಮುಖ್ಯವಾಗಿ ಬೇಕಾಗಿದ್ದು. ಡಾ// ಬಾಬು ಜಗಜೀವನರಾಮ್ ಆದಿ ಜಾಂಬವ ಅಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ ವಿಕಾಸಕ್ಕಾಗಿ ಅಧ್ಯಯನ ಪ್ರವಾಸ ಎಂಬ ಶೀರ್ಷಿಕೆಯೊಂದಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ ಎಂದು ಡಾ// ಬಾಬು ಜಗಜೀವನ ರಾಮ್ ಆದಿ ಜಾಂಬವ ಅಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ಬಸವರಾಜ್ ತಿಳಿಸಿದರು. 

ಸಮುದಾಯದ ಅಭಿವೃದ್ಧಿಗಾಗಿ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಹೀಗೆ ಅನೇಕ ಉದ್ದೇಶಗಳನ್ನು ಹೊಂದಿದ್ದು ಇದರ ಬಗ್ಗೆ ಸಮುದಾಯದ ಜನರಿಗೆ ತಿಳುವಳಿಕೆ ನೀಡುವ ಅಧ್ಯಯನ ಪ್ರವಾಸ ವಾಗಿದ್ದು, ಮಾದಿಗ ಸಮುದಾಯದ ಮೂಲ ದೇವತೆ ಮಾತಂಗೇಶ್ವರಿ ಬೆಟ್ಟವನ್ನೇರಿ ದರ್ಶನ ಮಾಡಿಸುವ ಮೂಲಕ ಕ್ಷೇತ್ರದ ಮಹತ್ವ ತಿಳಿಸಲಾಗಿದೆ ಎಂದರು.

ಇದನ್ನೂ ಓದಿ: Gubbi News: ಒಳ್ಳೆ ಕೆಲಸಕ್ಕೆ ಕಲ್ಲು ಹಾಕುವವರೇ ಹೆಚ್ಚು : ಭಾರತಿ ಶ್ರೀನಿವಾಸ್

ಉಪಾಧ್ಯಕ್ಷ ಹೊಸಕೆರೆ ಬಸವರಾಜ್ ಮಾತನಾಡಿ, ಡಾ// ಬಾಬು ಜಗಜೀವನ ರಾಮ್ ಅಭಿವೃದ್ಧಿ ಸೇವಾ ಟ್ರಸ್ಟ್ ಹಾಗೂ ಆದಿ ಜಾಂಬವ ಯುವ ಬ್ರಿಗೇಡ್ ಮೂಲಕ ಸ್ವಸಹಾಯ ಸಂಘದ ಸದಸ್ಯರಿಗೆ ಆರ್ಥಿಕ ಸ್ವಾವಲಂಬನೆಯ ಜೊತೆಗೆ ಪ್ರವಾಸ ಕೈಗೊಳ್ಳುವುದು ಸಹ ಸದಸ್ಯರ ಮಾನಸಿಕ ಸದೃಢತೆೆ ಯಾಗುತ್ತದೆ ಎಂದು ತಿಳಿಸಿದರು.

ಹಂಡನಹಳ್ಳಿ ಶಿವರಾಜ್ ಮಾತನಾಡಿ ಗುಬ್ಬಿ ತಾಲೂಕಿನಿಂದ ಮೂರು ದಿನಗಳ ಕಾಲ  ಅಧ್ಯಯನ ಪ್ರವಾಸ ಕೈಗೊಂಡು ಬಹಳ ಯಶಸ್ವಿಯಾಗಿ ಪೂರೈಸಲಾಗಿದೆ. ನಮ್ಮ ಸಮುದಾಯದ ಮೂಲ ಕಲೆ ಮತ್ತು ಸಂಸ್ಕೃತಿ ಬಗ್ಗೆ ಹಾಗೂ ಮುಂದಿನ ಪೀಳಿಗೆಯನ್ನು ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕ ವಾಗಿ ಅಭಿವೃದ್ಧಿ ಪಡಿಸುವ ಎಲ್ಲ ಮಾರ್ಗೋಪಾಯಗಳನ್ನು ಸ್ವಸಹಾಯ ಸಂಘದ ಸದಸ್ಯರಿಗೆ ಪ್ರವಾಸದ ಮೂಲಕ ತಿಳಿಸಿದ್ದು. ಇದರಿಂದ ಸ್ವಸಹಾಯ ಸಂಘದ ಸದಸ್ಯರು ಸಂತೋಷ ವ್ಯಕ್ತಪಡಿಸಿ ದ್ದಾರೆ ಎಂದು ಹೇಳಿದರು.

ಪದಾಧಿಕಾರಿಗಳಾದ ಮುದ್ದಣ್ಣ, ನರಸಿಂಹಮೂರ್ತಿ, ಯೋಗೀಶ್, ಮಾದೇವಯ್ಯ, ಯೋಗೀಶ್, ಜಯರಾಮಯ್ಯ, ನಾಗರಾಜು, ರಾಜಣ್ಣ, ಸೇರಿದಂತೆ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.