ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SSLC Result 2026: ಟೈಲರ್‌ ಮಗಳಿಗೆ ರಾಜ್ಯದಲ್ಲೇ ದ್ವಿತೀಯ ಸ್ಥಾನ; ಮುಂದೆ ವೈದ್ಯೆಯಾಗುವ ಕನಸು

Karnataka SSLC Results 2026: ಟೈಲರ್ ಮಹಮ್ಮದ್ ಜಪ್ರುದ್ದೀನ್ ಅವರ ಪುತ್ರಿ ಸಾದಿಯಾ ಬಾನು ತುಮಕೂರು ಶೈಕ್ಷಣಿಕ ಜಿಲ್ಲೆಗೆ ಸೇರಿದ ನಗರದ ಶ್ರೀದೇವಿ ವಿದ್ಯಾಮಂದಿರದಲ್ಲಿ ವ್ಯಾಸಂಗ ಮಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟೈಲರ್ ಮಗಳು ಟಾಪರ್‌

ಸಾದಿಯಾ ಬಾನು -

Profile
Pushpa Kumari Apr 23, 2026 6:47 PM

ತುಮಕೂರು, ಏ. 23: ಟೈಲರ್ ಆಗಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿರುವ ತುಮಕೂರಿನ ವ್ಯಕ್ತಿಯೊಬ್ಬರ ಮಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 624 (ಶೇ. 99.8) ಅಂಕಗಳಿಸಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಮುಂದೆ ಚರ್ಮ ವೈದ್ಯೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾಳೆ. ನಗರದ ಶಿರಾ ಗೇಟ್ ನಾಗಣ್ಣನ ಪಾಳ್ಯ ನಿವಾಸಿ, ಟೈಲರ್ ಮಹಮ್ಮದ್ ಜಪ್ರುದ್ದೀನ್ ಎಂಬುವವರ ಮಗಳು ಸಾದಿಯಾ ಬಾನು ತುಮಕೂರು ಶೈಕ್ಷಣಿಕ ಜಿಲ್ಲೆಗೆ ಸೇರಿದ ನಗರದ ಶ್ರೀದೇವಿ ವಿದ್ಯಾಮಂದಿರದಲ್ಲಿ ವ್ಯಾಸಂಗ ಮಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 624 (SSLC Result) ಅಂಕಗಳನ್ನು ಗಳಿಸಿ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ʼವಿಶ್ವವಾಣಿʼ ಪತ್ರಿಕೆಯೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಸಾದಿಯಾ ಬಾನು, ʼʼನಮ್ಮ ತಂದೆ ಮಹಮ್ಮದ್ ಜಪ್ರುದ್ದೀನ್ ಟೈಲರ್ ಹಾಗೂ ತಾಯಿ ವಹೀದಾ ಬಾನು ಗೃಹಿಣಿ. ನಾನು ಇಷ್ಟು ಅಂಕ ಗಳಿಸಲು ಪೋಷಕರು ಪ್ರೇರಣೆ. ಅವರೇ ನನಗೆ ಸ್ಪೂರ್ತಿ. ಶಾಲೆಯಲ್ಲಿ ಶಿಕ್ಷಕರ ಸಹಕಾರ ಉತ್ತಮವಾಗಿದ್ದರಿಂದ ಹೆಚ್ಚಿನ ಅಂಕಗಳಿಸಲು ಸಾಧ್ಯವಾಯಿತು. ಪಿಯುಸಿಯಲ್ಲಿ ವಿಜ್ಞಾನ ಅಧ್ಯಯನ ಮಾಡಿ ಚರ್ಮರೋಗ ವೈದ್ಯೆಯಾಗುವ ಗುರಿ ಹೊಂದಿದ್ದೇನೆʼʼ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದಾಖಲೆ ಫಲಿತಾಂಶ, ಶೇ. 94.10 ಉತ್ತೀರ್ಣ

ʼʼಆರ್ಥಿಕವಾಗಿ ಬಡತನವಿದ್ದರೂ ಸಹ ಮಗಳ ವಿದ್ಯಾಭ್ಯಾಸಕ್ಕೆ ಯಾವುದೇ ಅಡಚಣೆ ಬಾರದಂತೆ ಪ್ರೋತ್ಸಾಹ ನೀಡಿದ್ದೇವೆ. ರಾಜ್ಯಕ್ಕೆ ಮೊದಲ ಸ್ಥಾನ ಬರಬೇಕಿತ್ತು. ಆದರೆ ಒಂದು ಅಂಕ ಕಡಿಮೆಯಾಗಿದೆ. ಮಗಳು ಸಂಪೂರ್ಣವಾಗಿ ವ್ಯಾಸಂಗ ಮಾಡುವವರೆಗೂ ಸಹಕಾರ ನೀಡುತ್ತೇವೆʼʼ ಎಂದು ವಿದ್ಯಾರ್ಥಿನಿ ಪೋಷಕರು ತಿಳಿಸಿದ್ದಾರೆ.