ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಿಳಾ ಮೀಸಲಾತಿ ಹೆಸರಲ್ಲಿ ಚುನಾವಣಾ ಗಿಮಿಕ್ : ಶಾಸಕ ಎಸ್.ಆರ್.ಶ್ರೀನಿವಾಸ್

ಜನಗಣತಿ ಆಧಾರದ ಮೇಲೆ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸೀಟು ಗಳಿಸುವ ಲೆಕ್ಕಾಚಾರ ಬುಡ ಮೇಲಾಗಿದೆ. ಕುಟುಂಬ ಕಲ್ಯಾಣ ಯೋಜನೆಯನ್ನು ಯಶಸ್ವಿಯಾಗಿ ನಡೆಸಿದ್ದ ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯೆ ಆಧಾರದ ಮೇಲೆ ಸೀಟು ಹಂಚಿಕೆಯಲ್ಲಿ ಕಡಿಮೆ ಪಾಲು ಪಡೆಯುತ್ತಾರೆ. ಆದರೆ ಉತ್ತರ ಭಾರತದ ರಾಜ್ಯಗಳು ಹೆಚ್ಚು ಜನಸಂಖ್ಯೆ ಹೊಂದಿದ್ದು ದುಪ್ಪಟ ಸೀಟು ಹಂಚಿಕೆ ಪಡೆಯುತ್ತಾರೆ.

ಮಹಿಳಾ ಮೀಸಲಾತಿ ಹೆಸರಲ್ಲಿ ಚುನಾವಣಾ ಗಿಮಿಕ್

-

Profile
Ashok Nayak Apr 20, 2026 11:48 PM

ಗುಬ್ಬಿ: ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಕೇವಲ ಚುನಾವಣಾ ಗಿಮಿಕ್ ಗಾಗಿ ಬಳಸಿ ಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್(MLA S.R. Srinivas) ಹೇಳಿದರು.

ತಾಲ್ಲೂಕಿನ ಗಳಗ ಗ್ರಾಮದಲ್ಲಿ 65 ಲಕ್ಷ ವೆಚ್ಚದ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣ, ಹಳೇಗುಬ್ಬಿ ಗ್ರಾಮದಲ್ಲಿ 95 ಲಕ್ಷ ರೂಗಳ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಹೊನ್ನಶೆಟ್ಟಿಹಳ್ಳಿ ಕ್ರಾಸ್ ಬಳಿಯ ಕೋಣನಕೆರೆ ಗ್ರಾಮಕ್ಕೆ ತೆರಳುವ ರಸ್ತೆ ಅಭಿವೃದ್ಧಿಯ 20 ಲಕ್ಷ ರೂಗಳ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಮುಂಬರುವ ಚುನಾವಣೆಯಲ್ಲಿ ಮತ ಪಡೆಯಲು ಇಲ್ಲಸಲ್ಲದ ಸರ್ಕಸ್ ಮಾಡಿದ ಕೇಂದ್ರಕ್ಕೆ ಉತ್ತರ ಸಿಕ್ಕಿದೆ. ಈ ಹಿಂದೆ ಅನುಮೋದನೆ ಮಾಡಿದ್ದ ಪ್ರಕಾರ ಮಂಡನೆ ಮಾಡಲಿ ಎಂದರು.

ಇದನ್ನೂ ಓದಿ: Gubbi News: ಏ.22 ಹಾಗೂ 23 ರಂದು ಗುಬ್ಬಿ ಶ್ರೀ ಮಹೇಶ್ವರಮ್ಮ ದೇವಿ ದೇವಾಲಯ ನೂತನ ಶಿಲಾ ದೇವಾಲಯ ಲೋಕಾರ್ಪಣೆ

ಜನಗಣತಿ ಆಧಾರದ ಮೇಲೆ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸೀಟು ಗಳಿಸುವ ಲೆಕ್ಕಾಚಾರ ಬುಡ ಮೇಲಾಗಿದೆ. ಕುಟುಂಬ ಕಲ್ಯಾಣ ಯೋಜನೆಯನ್ನು ಯಶಸ್ವಿಯಾಗಿ ನಡೆಸಿದ್ದ ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯೆ ಆಧಾರದ ಮೇಲೆ ಸೀಟು ಹಂಚಿಕೆಯಲ್ಲಿ ಕಡಿಮೆ ಪಾಲು ಪಡೆಯುತ್ತಾರೆ. ಆದರೆ ಉತ್ತರ ಭಾರತದ ರಾಜ್ಯಗಳು ಹೆಚ್ಚು ಜನಸಂಖ್ಯೆ ಹೊಂದಿದ್ದು ದುಪ್ಪಟ ಸೀಟು ಹಂಚಿಕೆ ಪಡೆಯುತ್ತಾರೆ. ಈ ತಂತ್ರಕ್ಕೆ ಪ್ರತಿತಂತ್ರ ಮಹಿಳಾ ಮೀಸಲಾತಿ ಮಂಡನೆ ಕೈಗೂಡಿಲ್ಲ ಎಂದ ಅವರು ದಾವಣಗೆರೆ ಉಪಚುನಾವಣೆಯಲ್ಲಿ ಹೈಕಮಾಂಡ್ ಮುಂದೆ ನಿಂತಿತ್ತು. ಇಲ್ಲಸಲ್ಲದ ವದಂತಿ ಬೇಕಿಲ್ಲ. ಕಾಂಗ್ರೆಸ್ ಗೆಲುವು ಖಚಿತ ಎಂದರು.

ವಿನಯ್ ಕುಲಕರ್ಣಿ ಹಾಗೂ ನಾನು 2004 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದವರು. ಸದನದಲ್ಲಿ ಒಟ್ಟಿಗೆ ಕುಳಿತು ಚರ್ಚಿಸಿ ಒಳ್ಳೆಯ ಸ್ನೇಹಿತರಾಗಿದ್ದೆವು. ಸಮಾಜ ನಮ್ಮನ್ನು ಅನುಸರಿಸುತ್ತದೆ. ಸೂಕ್ಷ್ಮವಾಗಿ ಗಮನಿಸುತ್ತದೆ. ಇಂತಹ ಜವಾಬ್ದಾರಿ ಹೊತ್ತು ಈ ರೀತಿ ಮಾಡಿಕೊಳ್ಳಬಾರದಿತ್ತು ಎಂದು ವಿಷಾದಿಸಿದ ಅವರು ಗಣಿಬಾಧಿತ ಪ್ರದೇಶದ 400 ಕೋಟಿ ಹಣ ಬಂದ ನಂತರದಲ್ಲಿ ಗುಬ್ಬಿ ತಾಲ್ಲೂಕಿನ ಹಲವು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಜೊತೆಗೆ ನ್ಯಾಯಾಲಯದಲ್ಲಿ ಬಗೆಹರಿದ ಅನುದಾನ ಹಂಚಿಕೆ ಪ್ರಕರಣ ಈಗ ದೊಡ್ಡಗುಣಿ ಹಾಗೂ ಕೊಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮದಲ್ಲಿ ಸಾಕಷ್ಟು ಕೆಲಸ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಕಲ್ಲೂರು ಸುರೇಶ್, ಧರ್ಮೇಗೌಡ, ದಾಸಪ್ಪ, ಕಾಂಗ್ರೆಸ್ ಅಧ್ಯಕ್ಷ ಅಧ್ಯಕ್ಷ ಕೆ.ಆರ್.ವೆಂಕಟೇಶ್, ರಮೇಶ್, ಗುತ್ತಿಗೆದಾರ ಸುರೇಶ್, ಪಾಂಡಣ್ಣ, ಭೋಜಣ್ಣ, ಪಣಗಾರ್ ವೆಂಕಟೇಶ್, ಭಾನು, ಪಾತಯ್ಯ, ರಾಮಣ್ಣ, ಜುಂಜೇಗೌಡ , ಹಳೇಗುಬ್ಬಿ ರಂಗಸ್ವಾಮಿ, ನಾಗಣ್ಣ, ಸತ್ತಿಗಪ್ಪ, ಬಸವರಾಜು, ಬೀರೇಶ್, ಗಳಗ ದಿವಾಕರ್, ಪಿಡಿಒ ಮಂಜುಳ‌ಪಾಟಿಲ್, ಗುತ್ತಿಗೆದಾರ ಮಹದೇವಣ್ಣ ಇತರರು ಇದ್ದರು.