ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MLA K N Rajanna: ದೇಶದ ಯುವಶಕ್ತಿ ದುಶ್ಚಟಗಳಿಗೆ ಬಲಿಯಾಗದೆ ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕಾಗಿದೆ: ಶಾಸಕ ಕೆ.ಎನ್.ರಾಜಣ್ಣ

ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ರಾಷ್ಟ್ರಧ್ವಜ ಧ್ವಜ ರೋಹಣ ನೆರವೇರಿಸಿ ತಮ್ಮ ಸಂದೇಶ ದಲ್ಲಿ ಮಾತನಾಡಿ 2047 ರ ಹೊತ್ತಿಗೆ ಯುವಕರಿಂದ ವಿಕಸಿತ ಭಾರತ ನಿರ್ಮಾಣದ ಕನಸನ್ನು ದೇಶ ಹೊಂದಿದೆ.. ಭಾರತದಲ್ಲಿ, 37 ಕೋಟಿಗೂ ಅಧಿಕ ಯುವಕರಿದ್ದಾರೆ.‌ ಯುವಕರ ವಿಶೇಷ ಶಕ್ತಿ ಸಾಮರ್ಥ್ಯ ಮಾಹಿತಿ, ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟವಾದ ಪ್ರತಿಭೆಯ ಮೂಲಕ ಹೆಸರು ಮಾಡಿದ್ದಾರೆ ಎಂದರು

ದೇಶದ ಯುವಶಕ್ತಿ ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕಾಗಿದೆ

-

Profile
Ashok Nayak Aug 15, 2026 2:31 PM

ಮಧುಗಿರಿ: ಪ್ರಪಂಚದಲ್ಲಿ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶ ಭಾರತವಾಗಿದ್ದು ದುಶ್ಚಟಗಳಿಗೆ ಬಲಿಯಾಗದೆ ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕಾಗಿದೆ ಎಂದು ಶಾಸಕ ಕೆ.ಎನ್.ರಾಜಣ್ಣ(MLA K N Rajanna) ಕರೆ ನೀಡಿದರು.

ಪಟ್ಟಣದ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಏರ್ಪಡಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ(80th Independence Day) ಕಾರ್ಯಕ್ರಮದ ರಾಷ್ಟ್ರ ಧ್ವಜಾರೋಹಣದಲ್ಲಿ ಪಾಲ್ಗೊಂಡು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಭಾರತ ಜನಸಂಖ್ಯೆಯಲ್ಲಿ ಯುವಕರು ಶೇಕಡ 61ರಷ್ಟಿದ್ದು, ವ್ಯಾಸಂಗ ಮುಗಿಸಿದ ತಕ್ಷಣ ಸರ್ಕಾರಿ ಉದ್ಯೋಗ ಬೇಕೆಂದು ಹುಡುಕುವ ಕೆಲಸದಲ್ಲಿರುವುದನ್ನು ಕಾಣುತ್ತಿದ್ದೇವೆ, ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದ್ದು ಸರ್ಕಾರಿ ಹುದ್ದೆಗಳ ಸಂಖ್ಯೆ ಕಡಿಮೆ ಇದೆ ಆದ್ದರಿಂದ ಯುವಕರು ಸ್ವಯಂ ಉದ್ಯೋಗಿಗಳಾಗಿ ದೇಶದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಬೇಕೆಂದು ತಿಳಿಸಿದರು.

ಇದನ್ನೂ ಓದಿ: K N Rajanna: 29ರಂದು ಜಿಸಿಸಿ ಸೊಸೈಟಿಯ ಆಡಳಿತ ಕಚೇರಿಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಚಾಲನೆ

ಇಂದಿನ ವಿದ್ಯಾರ್ಥಿಗಳಲ್ಲ ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರ ಬಗ್ಗೆ ವಿಶೇಷ ಉಪನ್ಯಾಸ ಗಳು ನಡೆಯಬೇಕು, ಇತಿಹಾಸ ತಿಳಿದವರಿಂದ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯವೆಂದರು.

ಮಹನೀಯರು ಹೋರಾಟದ ಮೂಲಕ ಪಡೆದ ಸ್ವಾತಂತ್ರ್ಯದ ಹಿನ್ನೆಲೆಯನ್ನು ಇಂದಿನ ಪೀಳಿಗೆಗೆ ತಿಳಿಸಬೇಕು. ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರನ್ನು ನಿರಂತರವಾಗಿ ಸ್ಮರಿಸಿಕೊಳ್ಳಬೇಕು.

ಮಕ್ಕಳಿಗೆ ದಾರಿ ಅನುಭವ ಪರಿಚಯಿಸಬೇಕಾಗಿದೆ. ಪ್ರತಿಯೊಬ್ಬರೂ ಮಹಾತ್ಮ ಗಾಂಧೀಜಿಯವರ ಹೋರಾಟ ಮನೋಭಾವ ಮೈಗೋಡಿಸಿಕೊಳ್ಳಬೇಕು ಎಂದು ಕೆ.ಎನ್. ರಾಜಣ್ಣ ಕರೆ ನೀಡಿದರು.

Flag hosit

ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ರಾಷ್ಟ್ರಧ್ವಜ ಧ್ವಜ ರೋಹಣ ನೆರವೇರಿಸಿ ತಮ್ಮ ಸಂದೇಶದಲ್ಲಿ ಮಾತನಾಡಿ 2047 ರ ಹೊತ್ತಿಗೆ ಯುವಕರಿಂದ ವಿಕಸಿತ ಭಾರತ ನಿರ್ಮಾಣದ ಕನಸನ್ನು ದೇಶ ಹೊಂದಿದೆ.. ಭಾರತದಲ್ಲಿ, 37 ಕೋಟಿಗೂ ಅಧಿಕ ಯುವಕರಿದ್ದಾರೆ.‌ ಯುವಕರ ವಿಶೇಷ ಶಕ್ತಿ ಸಾಮರ್ಥ್ಯ ಮಾಹಿತಿ, ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟವಾದ ಪ್ರತಿಭೆಯ ಮೂಲಕ ಹೆಸರು ಮಾಡಿದ್ದಾರೆ ಎಂದರು.

ಮಧುಗಿರಿ ಕಸಬಾ ಆರ್ ಐ ರಜಾಲಿ ರವರು ದೇಶಭಕ್ತಿ ಗೀತೆಯನ್ನು ಹಾಡಿದರು. ಪೊಲೀಸ್ ಇಲಾಖೆ ಮತ್ತು ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನೆ ನಡೆಯಿತು ದೇಶಭಕ್ತಿ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

patha Sanchalana

ತಹಶಿಲ್ದಾರ್ ನಂದಿನಿ.ಎಸ್.ಎ, ಡಿಡಿಪಿಐ ಮಾದವರೆಡ್ಡಿ,, ಡಿವೈಎಸ್‌ಪಿ ಮಂಜುನಾಥ್,, ಪುರಸಭಾ ಮುಖ್ಯ ಅಧಿಕಾರಿ ಸುರೇಶ್ ,ವಲಯ ಅರಣ್ಯಾಧಿಕಾರಿ ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್. ಹನುಮಂತರಾಯಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಉತ್ತಮ, ಸಹಾಯಕ ನಿರ್ದೇಶಕ ಧನಂಜಯ. ಹೆಚ್, ಟಿಎಪಿಸಿಎಂಎಸ್ ಅಧ್ಯಕ್ಷರಎಂ .ಎಸ್. ಮಲ್ಲಿಕಾರ್ಜುನಯ್ಯ, ಪುರಸಭಾ ಮಾಜಿ ಅಧ್ಯಕ್ಷರುಗಳಾದ ನಂಜುಂಡಯ್ಯ, ಎನ್.ಗಂಗಣ್ಣ, ಮಹಮ್ಮದ್ ಆಯುಬ್, ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ, ಎಇಇ ಸಂಪತ್ ಕುಮಾರ್,ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಮಂಜುನಾಥ್, ಹಿಂದುಳಿದ ವರ್ಗಗಳ ಇಲಾಖೆಯ ಜಯರಾಮಯ್ಯ ,ಸಿಡಿಪಿಓ ಕುಮಾರ್ ನಾಯ್ಕ್, ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ಸಹನಾ ನಾಗೇಶ್, ಎಸಿಎಫ್ ಉಮಾ ಕೃಷಿಕ ಸಮಾಜದ ಅಧ್ಯಕ್ಷ ರಮೇಶ್, ಆರಕ್ಷಕ ವೃತ್ತ ನೀರಿಕ್ಷಕ ಹನುಮಂತರಾಯಪ್ಪ, ಪಿಎಸ್ ಐ ಎಂ.ಎಸ್.ಚಂದ್ರ ಶೇಖರ್ ಮತ್ತಿತರರು ಇದ್ದರು.