ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಿವೃತ್ತ ಅಧಿಕಾರಿಗಳು ಸ್ಪರ್ಧಿಸಬಾರದೆಂಬ ವಾದದಲ್ಲಿ ಹುರುಳಿಲ್ಲ: ಡಾ.ಸಿ. ಸೋಮಶೇಖರ್

ಕಸಾಪವನ್ನು ಕನ್ನಡಿಗರ ಸ್ವಾಭಿಮಾನದ ಸಂಸ್ಥೆಯಾಗಿ ರೂಪಿಸುವುದು ಮತ್ತು ನಿಂತು ಹೋಗಿರುವ ಚಟುವಟಿಕೆಗಳನ್ನು ಮರುಆರಂಭಿಸುವುದು ತಮ್ಮ ಮುಖ್ಯ ಗುರಿಯಾಗಿದ್ದು, ಕಸಾಪ ಆಜೀವ ಸದಸ್ಯರು ತಮಗೆ ಮತ ನೀಡಿ ಬೆಂಬಲಿಸುವಂತೆ ಕಸಾಪ ಕೇಂದ್ರ ಮಂಡಳಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ. ಸಿ. ಸೋಮಶೇಖರ್ ಮನವಿ ಮಾಡಿದ್ದಾರೆ.

ನಿವೃತ್ತ ಅಧಿಕಾರಿಗಳು ಕಸಾಪಕ್ಕೆ  ಸ್ಪರ್ಧಿಸಬಾರದೆಂಬ ವಾದದಲ್ಲಿ ಹುರುಳಿಲ್ಲ

-

Profile
Siddalinga Swamy Oct 1, 2026 7:25 PM

ತುಮಕೂರು, ಅ.1: ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿವೃತ್ತ ಅಧಿಕಾರಿಗಳು ಸ್ಪರ್ಧಿಸಬಾರದೆಂಬ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ಕಸಾಪ ಕೇಂದ್ರ ಮಂಡಳಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ. ಸಿ. ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ (Tumkur News) ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಪರಿಷತ್ತಿನ ನಿಯಮದಂತೆ ಆಜೀವ ಸದಸ್ಯರೆಲ್ಲರಿಗೂ ಸ್ಪರ್ಧಿಸಲು ಅವಕಾಶವಿರುವುದರಿಂದ, ಅಧಿಕಾರಿಗಳು ಸ್ಪರ್ಧಿಸಬಾರದು ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ತಾವು ವಿದ್ಯಾರ್ಥಿ ದಸೆಯಿಂದಲೂ ಕನ್ನಡವನ್ನು ಅಪ್ಪಿಕೊಂಡಿದ್ದು, ಯುಪಿಎಸ್‌ಸಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆದು ಕೇಂದ್ರ ಸೇವೆಗೆ ಸೇರಿದ್ದಾಗಿ ಹೇಳಿದ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಹಾಗೂ ಗಡಿನಾಡ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕನ್ನಡ ನಾಡು-ನುಡಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿರುವುದಾಗಿ ತಿಳಿಸಿದರು.

ಕಸಾಪವನ್ನು ಕನ್ನಡಿಗರ ಸ್ವಾಭಿಮಾನದ ಸಂಸ್ಥೆಯಾಗಿ ರೂಪಿಸುವುದು ಮತ್ತು ನಿಂತು ಹೋಗಿರುವ ಚಟುವಟಿಕೆಗಳನ್ನು ಮರುಆರಂಭಿಸುವುದು ತಮ್ಮ ಮುಖ್ಯ ಗುರಿಯಾಗಿದ್ದು, ಕಸಾಪ ಆಜೀವ ಸದಸ್ಯರು ತಮಗೆ ಮತ ನೀಡಿ ಬೆಂಬಲಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಡಾ. ಸಿ. ಸೋಮಶೇಖರ್ ಅವರ ಸ್ಪರ್ಧೆಯನ್ನು ಬೆಂಬಲಿಸಿ ಮಾತನಾಡಿದ ಹಿರಿಯರಾದ ಡಾ. ಲಕ್ಷ್ಮಣ್‌ದಾಸ್, "ಸೋಮಶೇಖರ್ ಅವರು ತುಮಕೂರಿನಲ್ಲಿ ಜಿಲ್ಲಾಧಿಕಾರಿಯಾಗಿ ದಕ್ಷ ಸೇವೆ ಸಲ್ಲಿಸಿದ್ದು, ಅವರು ಈ ಮಣ್ಣಿನ ಮಗನಿದ್ದಂತೆ" ಎಂದರು.

ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ಕನ್ನಡಪರ ಸಂಘಟನೆಗಳೆಲ್ಲವೂ ಅವರ ಬೆಂಬಲಕ್ಕೆ ನಿಂತಿದ್ದು, ತುಮಕೂರಿನಲ್ಲಿ ಅವರ ಗೆಲುವಿಗಾಗಿ ಶ್ರಮಿಸುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಭೀಕರ ಬರ; ತುರ್ತು ನೆರವು ಕೋರಿ ಕೇಂದ್ರ ಗೃಹ, ಕೃಷಿ ಸಚಿವರಿಗೆ ಡಿಸಿಎಂ ಡಾ.ಜಿ. ಪರಮೇಶ್ವರ್‌ ಪತ್ರ

ಸಂಶೋಧಕ ಡಾ. ಡಿ.ಎನ್. ಯೋಗೀಶ್ವರಪ್ಪ ಮಾತನಾಡಿ, ಅವರು ಡಿಸಿ ಆಗಿದ್ದಾಗ ನಡೆಸಿದ ಜಿಲ್ಲಾ ಉತ್ಸವ ಇಂದಿಗೂ ಜನರ ನೆನಪಿನಲ್ಲಿದೆ ಎಂದು ಶ್ಲಾಘಿಸಿದರು. ಈ ವೇಳೆ ಡಾ. ಪದ್ಮಪ್ರಸಾದ್, ಡಾ. ಕಂಟಲಗೆರೆ ಸಣ್ಣಹೊನ್ನಯ್ಯ, ರಾಕ್‌ಲೈನ್ ರವಿಕುಮಾರ್, ಡಾ. ಲೀಲಾವತಿ, ಡಾ. ಎಂ.ಜಿ. ಸಿದ್ದರಾಮಯ್ಯ, ನರಸಿಂಹಮೂರ್ತಿ, ಎಂ.ವಿ. ಬಸವರಾಜು, ಡಿ.ಎಂ. ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.