ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tiptur News: ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್‌ಶಿಪ್‌ಗೆ ತಿಪಟೂರಿನ ಪ್ರಣವ್ ಲೋಕೇಶ್ ಆಯ್ಕೆ

Tiptur News: ತಿಪಟೂರು ನಗರದ ಜೈ ಮಾರುತಿ ಟೇಕ್ವಾಂಡೋ ತರಬೇತಿ ಕೇಂದ್ರದ ವಿದ್ಯಾರ್ಥಿ ಪ್ರಣವ್ ಲೋಕೇಶ್ ಥೈಲ್ಯಾಂಡ್‌ನಲ್ಲಿ ಮೇ 30ರಂದು ಶನಿವಾರ ಹಾಗೂ ಮೇ 31ರಂದು ಭಾನುವಾರ ನಡೆಯಲಿರುವ ಅಂತಾರಾಷ್ಟಿಯ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ.

ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್‌ಶಿಪ್‌ಗೆ ಪ್ರಣವ್ ಲೋಕೇಶ್

ಪ್ರಣವ್ ಲೋಕೇಶ್ -

Profile
Siddalinga Swamy May 29, 2026 7:25 PM

ತಿಪಟೂರು: ನಗರದ ಜೈ ಮಾರುತಿ ಟೇಕ್ವಾಂಡೋ ಅಕಾಡೆಮಿಯ ವಿದ್ಯಾರ್ಥಿ ಪ್ರಣವ್ ಲೋಕೇಶ್ ಥೈಲ್ಯಾಂಡ್‌ನಲ್ಲಿ ಮೇ 30 ಹಾಗೂ ಮೇ 31 ನಡೆಯಲಿರುವ ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ತರಬೇತುದಾರ ವಿನಯ್.ಟಿ.ಆರ್ ತಿಳಿಸಿದ್ದಾರೆ.

ಪ್ರಣವ್ ಲೋಕೇಶ್, ದೀಕ್ಷಾ ಶಾಲೆಯಲ್ಲಿ 8ನೇತರಗತಿ ವ್ಯಾಸಂಗ ಮಾಡುತ್ತಿದ್ದು, 2024-25ನೇ ಸಾಲಿನಲ್ಲಿ ಮಹಾರಾಷ್ಟ್ರ ಸಿಬಿಎಸ್‌ಇ ಮಂಡಳಿ ನಡೆಸಿದ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದು ಪ್ರಥಮ ಸ್ಥಾನ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

2023ರಲ್ಲಿ ಮಂಗಳೂರು ಪಂದ್ಯಾವಳಿಯಲ್ಲಿ ಚಿನ್ನ, 2025-26ನೇ ಸಾಲಿನಲ್ಲಿ ಬೆಂಗಳೂರು ವಿಭಾಗದಲ್ಲಿ ಬೆಳ್ಳಿ, 2022ರಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಿನ್ಸ್ ಕಪ್ ಪಂದ್ಯಾವಳಿಯಲ್ಲಿ ಕಂಚು ಪದಕ ಪಡೆಯುವ ಮೂಲಕ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ.