ಪ್ರಗತಿ ಪಥದಲ್ಲಿ ತುಮಕೂರು ಪಟ್ಟಣ ಕ್ರೆಡಿಟ್ ಸೊಸೈಟಿ: ಪಿ.ಆರ್. ದೇವರಾಜು
Tumkur News: ತುಮಕೂರು ಪಟ್ಟಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 2026-27ನೇ ಸಾಲಿಗೆ ಸೊಸೈಟಿ 1000 ಲಕ್ಷ ರೂ. ಠೇವಣಿ ಸಂಗ್ರಹಿಸುವ ಗುರಿ ಹೊಂದಿದ್ದು, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಗ್ರಾಹಕರಿಗೆ ತ್ವರಿತ ಸೇವೆ ನೀಡುವ ಉದ್ದೇಶದಿಂದ ಸಂಘದ ವ್ಯವಹಾರವನ್ನು ಕಂಪ್ಯೂಟರೀಕರಣಗೊಳಿಸಲಾಗಿದೆ ಸೊಸೈಟಿಯ ಅಧ್ಯಕ್ಷ ಪಿ.ಆರ್. ದೇವರಾಜು ತಿಳಿಸಿದ್ದಾರೆ.
-
ತುಮಕೂರು, ಸೆ.18: ಬಡವರು, ಮಧ್ಯಮವರ್ಗದವರು, ಸಣ್ಣ ವ್ಯಾಪಾರಸ್ಥರ ಆರ್ಥಿಕ ಅಭಿವೃದ್ಧಿಗೆ ಸಾಲಸೌಲಭ್ಯ ನೀಡಬೇಕೆಂಬ ಉದ್ದೇಶದಿಂದ ಸ್ಥಾಪನೆಯಾದ ತುಮಕೂರು (Tumkur News) ಪಟ್ಟಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಹಿರಿಯರ ಆಶಯಗಳನ್ನು ಪಾಲನೆ ಮಾಡಿಕೊಂಡು ಆರ್ಥಿಕ ಪ್ರಗತಿಯಲ್ಲಿ ಯಶಸ್ವಿಯಾಗಿ ಮುನ್ನಡೆದಿದೆ ಎಂದು ಸೊಸೈಟಿಯ ಅಧ್ಯಕ್ಷ ಪಿ.ಆರ್. ದೇವರಾಜು ಹೇಳಿದರು.
ಶುಕ್ರವಾರ ಹಮ್ಮಿಕೊಂಡಿದ್ದ ನಗರದ ತುಮಕೂರು ಪಟ್ಟಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 44ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2026-27ನೇ ಸಾಲಿಗೆ ಸೊಸೈಟಿ 1000 ಲಕ್ಷ ರೂ. ಠೇವಣಿ ಸಂಗ್ರಹಿಸುವ ಗುರಿ ಹೊಂದಿದೆ. ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಗ್ರಾಹಕರಿಗೆ ತ್ವರಿತ ಸೇವೆ ನೀಡುವ ಉದ್ದೇಶದಿಂದ ಸಂಘದ ವ್ಯವಹಾರವನ್ನು ಕಂಪ್ಯೂಟರೀಕರಣಗೊಳಿಸಲಾಗಿದೆ. ಹಿಂದಿನ ಸಾಲಿನಲ್ಲಿ 139.13 ಲಕ್ಷಕ್ಕೂ ಹೆಚ್ಚು ಠೇವಣಿ ಸಂಗ್ರಹಿಸಿ ಸುಮಾರು 217.57 ಲಕ್ಷ ರೂ. ಸಾಲ ನೀಡಲಾಗಿದೆ ಎಂದರು.
ಸಂಘದಲ್ಲಿ ಠೇವಣಿಗಳಿಗೆ ಆಕರ್ಷಕ ಬಡ್ಡಿ ನೀಡುತ್ತಿದ್ದು ಹಿರಿಯ ನಾಗರೀಕರಿಗೆ ಶೇಕಡ 0.5ರಷ್ಟು ಹೆಚ್ಚು ಬಡ್ಡಿ ನೀಡಲಾಗುತ್ತಿದೆ. ಸಂಘದ ಸದಸ್ಯರ ಉಳಿತಾಯವನ್ನು ಉತ್ತೇಜಿಸುವ ಸಲುವಾಗಿ ‘ಅನ್ನಪೂಣೇಶ್ವರಿ ರಿಕರಿಂಗ್ ಡಿಪಾಜಿಟ್ʼ ಎಂಬ ಯೋಜನೆ ಜಾರಿಗೆ ತರಲಾಗಿದೆ ಎಂದು ಅಧ್ಯಕ್ಷ ಪಿ.ಆರ್. ದೇವರಾಜು ಹೇಳಿದರು.
ಸಂಘದ ಉಪಾಧ್ಯಕ್ಷ ಪಿ.ಎನ್. ದೇವರಾಜು ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಬದಲಾಗುವ ಕಾನೂನು, ನಿಯಮ, ತಿದ್ದಪಡಿಗಳನ್ನು ಸಂಘದಲ್ಲಿ ಅಳವಡಿಸಿಕೊಂಡು ಶಿಸ್ತಿನ ಆಡಳಿತ, ಆರ್ಥಿಕ ಚಟುವಟಿಕೆ ನಡೆಸುತ್ತಾ ಸಂಘ ಉತ್ತಮ ಸೇವೆ ನಡೆಸುತ್ತಿದೆ ಎಂದು ಹೇಳಿದರು.
ಸಂಘದ ನಿರ್ದೇಶಕರಾದ ಟಿ.ಎಚ್. ಜಯರಾಮ್, ಎಸ್. ಲಕ್ಷ್ಮಿನಾರಾಯಣ, ಎಚ್.ಬಿ. ಲಕ್ಷ್ಮಿಕಾಂತ್, ಶ್ರೀನಿವಾಸಪ್ರಸಾದ್, ಮನೋಹರಗೌಡ, ಟಿ.ಎನ್. ರೇಣುಕುಮಾರ್, ಟಿ.ಆರ್. ಸತೀಶ್ ಕುಮಾರ್, ಜಯಪ್ರಕಾಶ್, ಎ.ವೈ. ಹನುಮಂತರಾಯಪ್ಪ, ಜಿ. ಶಶಿಕಲಾ, ಜಿ. ನೇತ್ರಾವತಿ, ಸಿ. ರಶ್ಮಿ, ಶ್ರೀನಿವಾಸಮೂರ್ತಿ, ಜಿ. ವೆಂಕಟೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ರಮೇಶ್ ಹಾಗೂ ಸಂಘದ ಸಿಬ್ಬಂದಿ ಹಾಜರಿದ್ದರು.