ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತುಮಕೂರಿನಲ್ಲಿ ‘ವಿಪ್ರ ಮಹಿಳಾ ಸಂತೆ’ ಗೆ ಅಭೂತಪೂರ್ವ ಸ್ಪಂದನೆ: ಮಹಿಳಾ ಸ್ವಾವಲಂಬನೆಗೆ ಮುನ್ನುಡಿ

Tumkur News: ತುಮಕೂರು ಶಂಕರಮಠದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತುಮಕೂರು ಜಿಲ್ಲೆಯ ವತಿಯಿಂದ ಒಂದು ದಿನದ ‘ವಿಪ್ರ ಮಹಿಳಾ ಸಂತೆʼ ಗೃಹೋಪಯೋಗಿ ವಸ್ತುಗಳ ಮಾರಾಟ ಮೇಳ ಜರುಗಿತು. ಜಿಲ್ಲಾ ಹವ್ಯಕ ಸಮುದಾಯದ ಅಧ್ಯಕ್ಷೆ ಮುಕ್ತಾ ಹೆಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತುಮಕೂರಿನಲ್ಲಿ ‘ವಿಪ್ರ ಮಹಿಳಾ ಸಂತೆ’ ಗೆ ಅಭೂತಪೂರ್ವ ಸ್ಪಂದನೆ

-

Profile
Siddalinga Swamy Oct 2, 2026 7:31 PM

ತುಮಕೂರು, ಅ.02: ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಕೇವಲ ಅಡುಗೆಮನೆಗೆ ಮಾತ್ರ ಸೀಮಿತಗೊಳ್ಳದೆ, ಆರ್ಥಿಕವಾಗಿ ಸ್ವಾವಲಂಬನೆಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇಂತಹ ‘ವಿಪ್ರ ಮಹಿಳಾ ಸಂತೆʼ ಕಾರ್ಯಕ್ರಮಗಳು ಮಹಿಳೆಯರಿಗೆ ನೇರ ಮಾರುಕಟ್ಟೆಯನ್ನು ಒದಗಿಸುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ ಆದಾಯವನ್ನೂ ಹೆಚ್ಚಿಸುತ್ತವೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಹೆಬ್ಬಳಲು ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಶಂಕರಮಠದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತುಮಕೂರು ಜಿಲ್ಲೆಯ ವತಿಯಿಂದ ಏರ್ಪಡಿಸಲಾಗಿದ್ದ ಒಂದು ದಿನದ ‘ವಿಪ್ರ ಮಹಿಳಾ ಸಂತೆʼ ಗೃಹೋಪಯೋಗಿ ವಸ್ತುಗಳ ಮಾರಾಟ ಮೇಳದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳಾ ಸಬಲೀಕರಣಕ್ಕೆ ಸಾಕ್ಷಿ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಹವ್ಯಕ ಸಮುದಾಯದ ಅಧ್ಯಕ್ಷೆ ಮುಕ್ತಾ ಹೆಗಡೆ, ಈ ವಿನೂತನ ಮೇಳವು ಮಹಿಳಾ ಸಬಲೀಕರಣಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.

ಜಿಲ್ಲಾ ಮಹಿಳಾ ಸಮಾಜ ಟ್ರಸ್ಟ್ ಕಾರ್ಯದರ್ಶಿ ಸುಭಾಷಿಣಿ ರವೀಶ್ ಮಾತನಾಡಿ, ಬ್ರಾಹ್ಮಣ ಸಮುದಾಯದ ಮಹಿಳೆಯರಿಗೆ ಪ್ರೋತ್ಸಾಹ ನೀಡಿ, ಅವರ ಸ್ವಾವಲಂಬನೆಯ ಉದ್ಯಮಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಸದುದ್ದೇಶದಿಂದ ಈ ಸಂತೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಮಹಿಳಾ ಸಂಚಾಲಕಿ ಭಾರತೀ ಶ್ರೀನಿವಾಸ್ ಮಾತನಾಡಿ, ವಿಪ್ರ ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದೆಯೂ ನಿಯಮಿತವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತುಮಕೂರು ಭಜನ ಮಂಡಲಿಯ ಮುಖ್ಯಸ್ಥೆ ಜ್ಯೋತಿರಾವ್, ಶಂಕರ ಸೇವಾ ಸಮಿತಿ ಅಧ್ಯಕ್ಷ ಕೆ. ಹಿರಿಯಣ್ಣ, ಉಪಾಧ್ಯಕ್ಷೆ ಸೌಮ್ಯರವಿ, ಕಾರ್ಯದರ್ಶಿ ಮಂಜುನಾಥ್, ಮಾಜಿ ಕಾರ್ಪೊರೇಟರ್ ಸಿ.ಎನ್. ರಮೇಶ್, ಹಾಗೂ ನಾಗರಾಜರಾವ್ ಸೇರಿದಂತೆ ಅನೇಕ ವಿಪ್ರ ಮುಖಂಡರು ಉಪಸ್ಥಿತರಿದ್ದರು.

ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಿವೃತ್ತ ಅಧಿಕಾರಿಗಳು ಸ್ಪರ್ಧಿಸಬಾರದೆಂಬ ವಾದದಲ್ಲಿ ಹುರುಳಿಲ್ಲ: ಡಾ.ಸಿ. ಸೋಮಶೇಖರ್

ವಿವಿಧ ಮಳಿಗೆಗಳು ಮತ್ತು ಗ್ರಾಹಕರ ಭರಾಟೆ

ಸಂತೆಯಲ್ಲಿ ನಗರದ ಮಹಿಳೆಯರಿಂದ 27ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು.

ಪ್ರಮುಖ ಆಕರ್ಷಣೆಗಳು: ಕರಕುಶಲ ವಸ್ತುಗಳು, ಕೈಮಗ್ಗದ ಸೀರೆಗಳು, ನವರಾತ್ರಿ ಹಬ್ಬಕ್ಕೆ ಬೇಕಾಗುವ ಅಲಂಕಾರಿಕ ಗೊಂಬೆಗಳು ಹಾಗೂ ಅಲಂಕಾರಿಕ ವಸ್ತುಗಳು, ವಿವಿಧ ಶೈಲಿಯ ಆಭರಣಗಳು ಮತ್ತು ಗೃಹೋಪಯೋಗಿ ವಸ್ತುಗಳು.

ಖಾದ್ಯಗಳು: ಮನೆಯಲ್ಲೇ ತಯಾರಿಸಿದ ವಿವಿಧ ರೀತಿಯ ಉಪ್ಪಿನಕಾಯಿಗಳು, ಹಪ್ಪಳ, ಸಂಡಿಗೆ ಮತ್ತು ಕುರುಕಲು ತಿಂಡಿಗಳು.

ನವರಾತ್ರಿ ಹಿನ್ನೆಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಗ್ರಾಹಕರು ಉತ್ಸಾಹದಿಂದ ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗುವ ಮೂಲಕ ಮೇಳಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತಪಡಿಸಿದರು.