Chikkanayakanahalli News: ಮಹಾಲಕ್ಷ್ಮೀ ಮದ್ದರಲಕ್ಷ್ಮೀ ಕ್ಷೇತ್ರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳ ಭೇಟಿ
ಅಧಿಕಾರಿಗಳ ತಂಡವು ಪ್ರಥಮವಾಗಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿತು. ಪ್ರಸ್ತುತ ಸಮಾಜದಲ್ಲಿ ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಮತ್ತು ಶೋಷಣೆಗಳು ಸಂಪೂರ್ಣವಾಗಿ ನಿಲ್ಲಬೇಕು, ಹಾಗು ದೇಶದ ಎಲ್ಲಾ ಮಕ್ಕಳಿಗೆ ಸುರಕ್ಷಿತ ವಾತವಾರಣ ಮತ್ತು ಉತ್ತಮ ಭವಿಷ್ಯ ದೊರೆಯಬೇಕು ಎಂಬ ಸದಾಶಯದಿಂದ ಅಮ್ಮನವರಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
-
ಚಿಕ್ಕನಾಯಕನಹಳ್ಳಿ : ಕಲ್ಪತರು ನಾಡಿನ ಸುಪ್ರಸಿದ್ದ ಶಕ್ತಿಪೀಠ, ಶ್ರೀ ಮಹಾಲಕ್ಷ್ಮೀ ಮದ್ದರ ಲಕ್ಕಮ್ಮ ಮಹಾ ಕ್ಷೇತ್ರಕ್ಕೆ ಬೆಂಗಳೂರು ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಉನ್ನತ ಮಟ್ಟದ ಅಧಿಕಾರಿಗಳ ತಂಡ ಇತ್ತೀಚೆಗೆ ಭೇಟಿ ನೀಡಿತ್ತು. ಮಕ್ಕಳ ರಕ್ಷಣೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದಂತೆ ದೇವಾಲಯದ ಆಡಳಿತವು ಕೈಗೊಂಡಿರುವ ಸಾಮಾಜಿಕ ಸೇವಾ ಕಾರ್ಯಗಳಿಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧಿಕಾರಿಗಳ ತಂಡವು ಪ್ರಥಮವಾಗಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿತು. ಪ್ರಸ್ತುತ ಸಮಾಜದಲ್ಲಿ ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಮತ್ತು ಶೋಷಣೆಗಳು ಸಂಪೂರ್ಣವಾಗಿ ನಿಲ್ಲಬೇಕು, ಹಾಗು ದೇಶದ ಎಲ್ಲಾ ಮಕ್ಕಳಿಗೆ ಸುರಕ್ಷಿತ ವಾತವಾರಣ ಮತ್ತು ಉತ್ತಮ ಭವಿಷ್ಯ ದೊರೆಯಬೇಕು ಎಂಬ ಸದಾಶಯದಿಂದ ಅಮ್ಮನವರಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಇದನ್ನೂ ಓದಿ: Chikkanayakanahalli News: ಅಂಬೇಡ್ಕರ್ ಆದರ್ಶ ಅಳವಡಿಕೆಗೆ ಕರೆ
ದೇವಾಲಯದ ಸೇವಾ ಕಾರ್ಯಗಳಿಗೆ ಶ್ಲಾಘನೆ
ಅಧಿಕಾರಿಗಳ ತಂಡವು ದೇವಾಲಯದ ಆಡಳಿತವು ಮಕ್ಕಳ ಕಲ್ಯಾಣಕ್ಕಾಗಿ ಮತ್ತು ಧಾರ್ಮಿಕ ಸಂಸ್ಕಾರಗಳನ್ನು ಕಲಿಸುವುದಕ್ಕಾಗಿ ಹಮ್ಮಿಕೊಂಡಿರುವ ವಿವಿಧ ರೀತಿಯ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡಿತು. ದೇವಾಲಯದ ಆವರಣದಲ್ಲಿ ಮಕ್ಕಳಿಗೆ ಪೂರಕವಾಗಿರುವ ಸೌಲಭ್ಯಗಳು ಮತ್ತು ಆಚಾರ ವಿಚಾರಗಳ ಪಾಲನೆ ಹಾಗು ಧಾರ್ಮಿಕ ಸೇವಾ ಕಾರ್ಯ ವೈಖರಿ ಯನ್ನು ಗಮನಿಸಿ, ಅದು ಸಮಾಜಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಬೆಂಗಳೂರು ನಗರ ದಕ್ಷಿಣ (ಕೆಂಗೇರಿ ) ವಿಭಾಗದಿಂದ ಆಗಮಿಸಿದ್ದ ಈ ತಂಡದಲ್ಲಿ ಜಿಲ್ಲಾಮಕ್ಕಳ ರಕ್ಷಣಾ ಅಧಿಕಾರಿ ಆಶಾ ಅಧೀಕ್ಷಕರಾದ ಜಾನಕಮ್ಮ ಮತ್ತು ಶೀಲಾ ನಿಮ್ಹಾನ್ಸ ಸಂಸ್ಥೆಯ ಆಪ್ತ ಸಮಾಲೋಚಕರಾದ ಉಷಾಕಿರಣ್ ಹಾಗು ಡಿಸಿಪಿಓ ಅಧಿಕಾರಿಗಳಾದ ಮಂಜುನಾಥಬುರುಡಿ, ಪ್ರಸಾದ್ ಮತ್ತು ಲತಾ ಸಹ ಈ ಭೇಟಿಯಲ್ಲಿ ಭಾಗವಹಿಸಿದ್ದರು.
ದೇವಾಲಯದ ಧರ್ಮಾಧಿಕಾರಿಗಳಾದ ಲಕ್ಷ್ಮೀಶ ಅವರು ಅಧಿಕಾರಿಗಳಿಗೆ ಅಮ್ಮನವರ ಶೇಷ ವಸ್ತç ಹಾಗು ಪ್ರಸಾದವನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ದೇವಾಲಯದ ಪದಾಧಿಕಾರಿಗಳಾದ ಅಕ್ಷತಾ, ಮನೋಜ್, ರಾಜಶೇಖರ್, ನಾಗರತ್ನ, ರಂಗಸ್ವಾಮಿ ಹಾಗು ಸಿದ್ದಲಿಂಗಯ್ಯ ಹಾಜರಿದ್ದರು.