ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾರವಾರಕ್ಕೆ ವಲಸೆ ಬಂದ ಸೀಗಲ್ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆ!

ಕಳೆದ ವರ್ಷ ಕೂಡ ಕಾರವಾರದ ಬಳಿ ಜಿಪಿಎಸ್ ಟ್ರಾನ್ಸ್‌ಮೀಟರ್ ಹೊಂದಿದ್ದ ರಣಹದ್ದು ಕಂಡು ಬಂದಿತ್ತು. ಅದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಸೀಗಲ್ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆಯಾಗಿದೆ. ಹೀಗಾಗಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ವಲಸೆ ಬಂದ ಸೀಗಲ್ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆ!

ಕಾರವಾರದಲ್ಲಿ ಪತ್ತೆಯಾದ ಸೀಗಲ್‌ ಹಕ್ಕಿ. -

Prabhakara R
Prabhakara R Dec 17, 2025 8:46 PM

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರಕ್ಕೆ ವಲಸೆ ಬಂದ ಸೀಗಲ್ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆಯಾಗಿದೆ. ಕಳೆದ ವರ್ಷ ಕೂಡ ಕಾರವಾರದ ಬಳಿ ಜಿಪಿಎಸ್ ಟ್ರಾನ್ಸ್‌ಮೀಟರ್ ಹೊಂದಿದ್ದ ರಣಹದ್ದು ಕಂಡು ಬಂದಿತ್ತು. ಅದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಸೀಗಲ್ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆಯಾಗಿದು, ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಜಿಪಿಎಸ್ ಟ್ರ್ಯಾಕರ್‌ನಲ್ಲಿ ಚೀನಾದ ವಿಜ್ಞಾನ ಅಕಾಡೆಮಿಯ ಇಕೋ -ಎನ್ವಿರಾನ್ಮೆಂಟ್ ಸೈನ್ಸ್ ಎಂದು ನಮೂದಾಗಿದೆ. ಸೀಗಲ್ ಹಕ್ಕಿಗಳ ಚಲನ ವಲನ, ಆಹಾರ ಪದ್ಧತಿ ಮಾಹಿತಿ ಪಡೆಯಲು ಹಾಗೂ ವಲಸೆ ಸಮೀಕ್ಷೆಗಾಗಿ ಅಳವಡಿಸಿರುವ ಟ್ರ್ಯಾಕರ್ ಎನ್ನಲಾಗಿದೆ. ಸದ್ಯ ಪಕ್ಷಿಯನ್ನು ಮರೈನ್ ಅರಣ್ಯ ವಿಭಾಗದ ಕಚೇರಿಗೆ ಶಿಫ್ಟ್‌ ಮಾಡಲಾಗಿದದು, ಚೀನಾದ ಅಕಾಡೆಮಿಯನ್ನು ಸಂಪರ್ಕಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಸೀಗಲ್ ಸಿಕ್ಕ ಪ್ರದೇಶ ನೌಕಾನೆಲೆ ಸ್ಥಳವಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ನೌಕಾದಳ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.

ಬಲೂನ್‌ ಮೂಲಕ ಪಾಕಿಸ್ತಾನ ಬೇಹುಗಾರಿಕೆ; ಹಿಮಾಚಲದಲ್ಲಿ ಪತ್ತೆಯಾಯ್ತು ಸ್ಫೋಟಕ ಮಾಹಿತಿ

ಕಳೆದ ವರ್ಷ ಪತ್ತೆಯಾಗಿತ್ತು ಜಿಪಿಎಸ್‌ ಟ್ರ್ಯಾಕರ್‌ ಅಳವಡಿಸಿದ್ದ ರಣಹದ್ದು

ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಡ್ರೋನ್ ಕ್ಯಾಮೆರಾ ಬಳಸಿ ನೌಕಾನೆಲೆಯ ಚಿತ್ರಗಳನ್ನು ಆಗಂತುಕರು ಸೆರೆಹಿಡಿದ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಕಳೆದ ವರ್ಷ ನೌಕಾ ನೆಲೆಯ ಸರಹದ್ದು ವ್ಯಾಪ್ತಿಯಲ್ಲಿ ಜಿಪಿಎಸ್‌ ಟ್ರ್ಯಾಕರ್‌ ಅಳವಡಿಸಿದ ರಣ ಹದ್ದು ಪ್ರತ್ಯಕ್ಷವಾಗಿತ್ತು.

ಕಾರವಾರದ ನದಿ ದಡದಲ್ಲಿ ಸ್ಥಳೀಯರು ಪಕ್ಷಿಯ ಫೋಟೋ ತೆಗೆದು ನೌಕಾದಳದ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ರಣಹದ್ದಿ‌ನ ದೇಹದ ಮೇಲೆ ಟ್ರ್ಯಾಕರ್‌ ಅಳವಡಿಸಲಾಗಿದ್ದು, ಕಾಲುಗಳಿಗೆ ಟೇಪ್‌ಗಳ ಬಳೆಗಳನ್ನು ಅಳವಡಿಸಲಾಗಿತ್ತು. ಹೀಗಾಗಿ ರಣಹದ್ದಿ‌ನ ಮೂಲಕ ಬೇಹುಗಾರಿಕೆಯನ್ನು ಶತ್ರು ರಾಷ್ಟ್ರಗಳು ನಡೆಸುತ್ತಿರಬಹುದೇ ಎಂಬ ಸಂಶಯ ವ್ಯಕ್ತವಾಗಿತ್ತು. ಈ ಹದ್ದನ್ನು ಹಿಡಿಯಲು ಪ್ರಯತ್ನಿಸಿದರೂ ಅದು ಸಿಗದೇ ಹಾರಿ ಹೋಗಿತ್ತು.

ಪೊಲೀಸರು, ಅರಣ್ಯ ಇಲಾಖೆ, ರಾಜ್ಯ, ಕೇಂದ್ರ ಐಬಿ ಅಧಿಕಾರಿಗಳಿಂದ ಈ ಬಗ್ಗೆ ಪರಿಶೀಲನೆ ಮಾಡಿದಾಗ, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸಂಶೋಧನೆ ಉದ್ದೇಶಕ್ಕಾಗಿ ತಾಡೋಬಾ-ಅಂಧೇರಿ ಹುಲಿ ಸಂರಕ್ಷಿತಾರಣ್ಯದಿಂದ ರಣಹದ್ದುವನ್ನು ಬಿಡಲಾಗಿತ್ತು ಎಂದು ತಿಳಿದುಬಂದಿತ್ತು.